ETV Bharat / bharat

ಟಿಟಿಡಿ ಅನ್ನಪ್ರಸಾದಂ ಟ್ರಸ್ಟ್​​ಗೆ 11 ಕೋಟಿ ದಾನ ನೀಡಿದ ಮಹಾರಾಷ್ಟ್ರ ಟ್ರಸ್ಟ್​​ - TTD ANNAPRASADAM TRUST

ತಿರುಪತಿ ತಿರುಮಲ ದೇಗುಲದ ಉಚಿತ ಅನ್ನದಾನ ಸೇವೆಗೆ ಟ್ರಸ್ಟ್​ ನೀಡಿರುವ ದಾನದ ಹಣ ಬಳಕೆ ಮಾಡಿಕೊಳ್ಳಲಾಗುವುದು ಎಂದು ಟಿಟಿಡಿ ತಿಳಿಸಿದೆ.

TTD Annaprasadam Trust Receives ₹11 Crore Donation
ಟ್ರಸ್ಟ್​​ಗೆ 11 ಕೋಟಿ ದಾನ (ಈಟಿವಿ ಭಾರತ್​)
author img

By ETV Bharat Karnataka Team

Published : Feb 18, 2025, 3:43 PM IST

ತಿರುಮಲ, ಆಂಧ್ರಪ್ರದೇಶ: ಮುಂಬೈನ ಯುನೋ ಫ್ಯಾಮಿಲಿ ಟ್ರಸ್ಟ್​​ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ಯ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್​​ಗೆ 11 ಕೋಟಿ ರೂ ದಾನ ನೀಡಿದೆ.

ಯುನೋ ಟ್ರಸ್ಟ್​​ನ ಪ್ರತಿನಿಧಿ ತುಷಾರ್​ ಕುಮಾರ್​​, ಟಿಟಿಡಿ ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರನ್ನು ಭೇಟಿಯಾಗಿ ದಾನದ ಹಣವನ್ನು ಡಿಮಾಂಡ್​ ಡ್ರಾಫ್ಟ್​​ ಮೂಲಕ ಹಸ್ತಾಂತರಿಸಿದರು. ಉನೋ ಟ್ರಸ್ಟ್​​ ಅನ್ನಪ್ರಸಾದಮಂ ಕಾರ್ಯಕ್ರಮಕ್ಕೆ ಗಣನೀಯ ಬೆಂಬಲದ ಕೊಡುಗೆ ನೀಡುತ್ತದೆ. ತಿರುಪತಿ ತಿರುಮಲದ ದೇಗುಲದಲ್ಲಿ ನಿತ್ಯ ಸಾವಿರಾರು ಭಕ್ತರಿಗೆ ಉಚಿತ ಅನ್ನದಾನ ಸೇವೆ ನೀಡಲಾಗುತ್ತಿದ್ದು, ಈ ಸೇವೆಗೆ ಈ ಹಣ ಬಳಕೆಯಾಗಲಿದೆ ಎಂದರು.

ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪ್ರಕಟಿಸಿರುವ ಟಿಟಿಡಿ, ಎಸ್​ವಿಎಟಿಗೆ ಮುಂಬೈನ ಪ್ರಸಿದ್ ಯುನೊ ಫ್ಯಾಮಿಲಿ ಟ್ರಸ್ಟ್‌ನ ಶ್ರೀ ತುಷಾರ್ ಕುಮಾರ್ ಅವರು ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್‌ಗೆ 11 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

1985ರಲ್ಲಿ ಮಾಜಿ ಮುಖ್ಯಮಂತ್ರಿ ಎನ್​ಟಿ ರಾಮ ರಾವ್​​ ವೆಂಕಟೇಶ್ವರ ನಿತ್ಯ ಅನ್ನದಾನಂ ಯೋಜನೆ ಅಡಿ ಭಕ್ತರಿಗೆ ಉಚಿತ ಆಹಾರ ಸೇವೆ ನೀಡುವ ಯೋಜನೆ ಜಾರಿಗೆ ತಂದರು. 1994ರಲ್ಲಿ ಈ ಯೋಜನೆಯನ್ನು ಶ್ರೀವೆಂಕಟೇಶ್ವರ ನಿತ್ಯ ಅನ್ನದಾನಂ ಟ್ರಸ್ಟ್​​ ಆಗಿ ಪರಿವರ್ತಿಸಲಾಯಿತು. 2014ರಲ್ಲಿ ಇದನ್ನು ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್​​ ಆಗಿ ಮರು ನಾಮಕರಣ ಮಾಡಲಾಯಿತು.

ಇದನ್ನೂ ಓದಿ: ರಾಷ್ಟ್ರಪತಿ ಭವನದಲ್ಲಿ ಕತಾರ್​ ದೊರೆಗೆ ಗಾರ್ಡ್‌ ಆಫ್‌ ಆನರ್‌, ಸಾಂಪ್ರದಾಯಿಕ ಸ್ವಾಗತ- ವಿಡಿಯೋ

ಇದನ್ನೂ ಓದಿ: ಮದುವೆ ಮುಗಿಸಿ ಮರಳುತ್ತಿದ್ದಾಗ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.