ಭಾರತೀಯ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಛಾವಾ' ಚಿತ್ರ ಬಿಡುಗಡೆ ಆದಾಗಿನಿಂದ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ತನ್ನ ಮೊದಲ ದಿನವೇ ನಿರೀಕ್ಷೆಗಳನ್ನು ಮೀರಿ ಗಳಿಕೆ ಮಾಡಿತು. ಜೊತೆಗೆ, ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2025ರ ಸಿನಿಮಾವಾಗಿ ಹೊರಹೊಮ್ಮಿತು. ಸಿನಿಮಾ ಕೇವಲ 4 ದಿನಗಳಲ್ಲಿ 150 ಕೋಟಿ ರೂಪಾಯಿ ಸಮೀಪಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಜೊತೆಗೆ, ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶ ಕಂಡಿದೆ.
ಒಟ್ಟು ಗಳಿಕೆ: 'ಛಾವಾ' ಚಿತ್ರ ಪ್ರೇಕ್ಷಕರಿಂದ ಮಾತ್ರವಲ್ಲದೇ ವಿಮರ್ಶಕರಿಂದಲೂ ಬಹುತೇಕ ಪ್ರಶಂಸೆ ಗಳಿಸಿದೆ. ಆಕರ್ಷಕ ನಿರೂಪಣಾ ಶೈಲಿ, ಅಭಿನಯ ಮತ್ತು ಅದ್ಭುತ ದೃಶ್ಯಗಳು ಚಿತ್ರದ ಯಶಸ್ಸಿಗೆ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಸಿನಿಮಾ 4ನೇ ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 140.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
The roar of his legacy is echoing louder than ever. 🔥🦁
— Maddockfilms (@MaddockFilms) February 17, 2025
Book your tickets now
🔗 - https://t.co/hPEGZ4wp3X#ChhaavaInCinemas Now.#ChhaavaOutNow #ChhaavaRoars@vickykaushal09 @iamRashmika #AkshayeKhanna @ranaashutosh10 @divyadutta25 @vineetkumar_s @neilbhoopalam @dianapenty… pic.twitter.com/yPrHxocpF7
ದಿನನಿತ್ಯದ ಬಾಕ್ಸ್ ಆಫೀಸ್ ವ್ಯವಹಾರ: ಶುಕ್ರವಾರದಂದು ತೆರೆಕಂಡ ಛಾವಾ ಚಿತ್ರ 31 ಕೋಟಿ ರೂಪಾಯಿ ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಪ್ರೇಮಿಗಳ ದಿನ ತರೆಕಂಡ ಸಿನಿಮಾಗಳಲ್ಲಿ ಇದು ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಹಿಂದಿನ 'ಗಲ್ಲಿ ಬಾಯ್' (19.4 ಕೋಟಿ ರೂ.) ದಾಖಲೆಯನ್ನು ಛಾವಾ ಪುಡಿಗಟ್ಟಿದೆ. ರಶ್ಮಿಕಾ ಮಂದಣ್ಱ ಹಾಗೂ ವಿಕ್ಕಿ ಕೌಶಲ್ ಅಭಿನಯದ ಈ ಚಿತ್ರವು ತನ್ನ 2ನೇ ದಿನ (ಶನಿವಾರ) ಟಿಕೆಟ್ ಮಾರಾಟದಲ್ಲಿ ಶೇ.19.35ರಷ್ಟು ಹೆಚ್ಚಳ ಕಂಡಿತು. ಹೌದು, ಶನಿವಾರ ಮೊದಲ ದಿನಕ್ಕೂ ಹೆಚ್ಚು ಎಂಬಂತೆ ಬರೋಬ್ಬರಿ 37 ಕೋಟಿ ರೂಪಾಯಿ ಗಳಿಸಿತು. ಈ ವೇಗವು ಮೂರನೇ ದಿನವೂ ಮುಂದುವರೆಯಿತು. ಭಾನುವಾರ ಸಿನಿಮಾ 48.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.
ನಾಲ್ಕನೇ ದಿನ - ಮೊದಲ ಸೋಮವಾರ ಗಳಿಕೆಯಲ್ಲಿ ಕೊಂಚ ಇಳಿಕೆಯಾಯಿತು. ಚಿತ್ರ 24 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಭಾನುವಾರದ ಗಳಿಕೆಗಿಂತ ಶೇ.50.52ರಷ್ಟು ಕುಸಿತವಾಗಿದೆ. ಅದಾಗ್ಯೂ, ಛಾವಾ ಅತಿ ಹೆಚ್ಚು ಗಳಿಕೆ ಮಾಡಿದ 2025ರ ಚಿತ್ರಗಳಲ್ಲಿ ಛಾವಾ ಸ್ಥಾನ ಪಡೆದಿದೆ.
ಇದನ್ನೂ ಓದಿ: 'ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ': ಅಭಿಮಾನಿಗಳಿಗೆ ದಾಸ ದರ್ಶನ್ ಹೇಳಿದ್ದಿಷ್ಟು
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ದಿನ | 31 ಕೋಟಿ ರೂ. |
ಎರಡನೇ ದಿನ | 37 ಕೋಟಿ ರೂ. |
ಮೂರನೇ ದಿನ | 48.5 ಕೋಟಿ ರೂ. |
ನಾಲ್ಕನೇ ದಿನ | 24 ಕೋಟಿ ರೂ.(ಆರಂಭಿಕ ಅಂದಾಜು) |
ಒಟ್ಟು | 140.50 ಕೋಟಿ ರೂ. |
ವರದಿಯಾದ 130 ಕೋಟಿ ರೂಪಾಯಿ ಬಜೆಟ್‌ನ ಸಿನಿಮಾ ಈಗಾಗಲೇ ತನ್ನ ಬಂಡವಾಳವನ್ನು ವಾಪಸ್ ಪಡೆದಂತಾಗಿದೆ. ಹಲವು ಹಿಟ್ ಚಿತ್ರಗಳನ್ನು ರಶ್ಮಿಕಾಗೆ ಇದು ಮತ್ತೊಂದು ಪ್ರಮುಖ ಯಶಸ್ಸು ಎಂದೇ ಹೇಳಬಹುದು. ಇನ್ನು , ವಿಕ್ಕಿ ಕೌಶಲ್ ಅವರ ಸ್ಥಾನವೂ ಚಿತ್ರರಂಗದಲ್ಲಿ ಮೊದಲಿನಂತೆ ಭದ್ರಗೊಂಡಿದೆ.
ಇದನ್ನೂ ಓದಿ: ಹೃದಯಪೂರ್ವಕ ನಮನಗಳು, ಜೊತೆಗೆ ಕ್ಷಮೆಯಿರಲಿ : ಮದುವೆ ಬಳಿಕ ಡಾಲಿ ಧನಂಜಯ್ ಮೊದಲ ಪೋಸ್ಟ್