ಕರ್ನಾಟಕ

karnataka

ETV Bharat / sports

IPL: ಚೆಪಾಕ್​ನಲ್ಲಿ ಚೆನ್ನೈಗೆ ಮತ್ತೊಂದು ಸೋಲು: ಪಂಜಾಬ್​ ಕಿಂಗ್ಸ್​ ಪ್ಲೇ ಆಫ್​ ಕನಸು ಜೀವಂತ - PBKS Beat CSK - PBKS BEAT CSK

ನಿನ್ನೆಯ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ದ ಗೆಲುವು ಸಾಧಿಸಿದೆ.

ಚೆಪಾಕ್​ನಲ್ಲಿ ಚೆನ್ನೈಗೆ ಮತ್ತೊಂದು ಸೋಲು: ಪಂಜಾಬ್​ ಕಿಂಗ್ಸ್​ ಪ್ಲೇ ಆಫ್​ ಕನಸು ಜೀವಂತ
ಚೆಪಾಕ್​ನಲ್ಲಿ ಚೆನ್ನೈಗೆ ಮತ್ತೊಂದು ಸೋಲು: ಪಂಜಾಬ್​ ಕಿಂಗ್ಸ್​ ಪ್ಲೇ ಆಫ್​ ಕನಸು ಜೀವಂತ

By PTI

Published : May 2, 2024, 6:57 AM IST

ಚೆನ್ನೈ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಸಿಎಸ್​ಕೆ ಭದ್ರಕೋಟೆಯಲ್ಲಿ ವಿಜಯದ ಬಾವುಟ ಹಾರಿಸಿದೆ.

ಚೆನ್ನೈನ ಎಂ.ಎ ಚಿದಾಂಬರಂ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಚೆನ್ನೈ ನೀಡಿದ್ದ 163 ರನ್​ಗಳನ್ನು ಬೆನ್ನಟ್ಟಿದ ಪಂಜಾಬ್​, ಜಾನಿ ಬೇರ್​ಸ್ಟೋ (46), ರಿಲೀ ರೊಸೊವ್ (43) ಬ್ಯಾಟಿಂಗ್​ ಬಲದಿಂದ 17.3 ಓವರ್​ಗಳಲ್ಲಿ ಗುರಿ ತಲುಪಿತು. ಇವರಿಬ್ಬರು ಎರಡನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದು ನಿರ್ಗಮಿಸಿದರು. ಶಿವಂ ದುಬೆ 10ನೇ ಓವರ್‌ನಲ್ಲಿ ಬೈರ್‌ಸ್ಟೋ ವಿಕೆಟ್​ ಪಡೆದರೇ, ಶಾರ್ದೂಲ್ ಠಾಕೂರ್ 12ನೇ ಓವರ್‌ನಲ್ಲಿ ರೊಸೊವ್ ಅವರನ್ನು ಬೌಲ್ಡ್ ಮಾಡಿದರು. ನಂತರ ಜವಾಬ್ದಾರಿ ಹೊತ್ತ ಶಶಾಂಕ್ ಸಿಂಗ್ (25*) ಮತ್ತು ನಾಯಕ ಸ್ಯಾಮ್ ಕರ್ರಾನ್​ (26*) ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಇದಕ್ಕೂ ಮುನ್ನ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್​ಗಳಿಸಿತ್ತು. ಸಿಎಸ್​ಕೆ ಪರ ಗಾಯಕ್ವಾಡ್ ಮತ್ತು ಅಜಿಂಕ್ಯ ರಹಾನೆ (24 ಎಸೆತಗಳಲ್ಲಿ 29) ಮೊದಲ ವಿಕೆಟ್‌ಗೆ 64 ರನ್ ಸೇರಿಸಿ ದೊಡ್ಡ ಸ್ಕೋರ್​ ಕಲೆ ಹಾಕುವ ಸೂಚನೆ ನೀಡಿದ್ದರು. ಆದರೆ ಹರ್‌ಪ್ರೀತ್ ಬ್ರಾರ್ ಒಂಬತ್ತನೇ ಓವರ್‌ನಲ್ಲಿ ರಹಾನೆ ಮತ್ತು ಶಿವಂ ದುಬೆ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಸಿಎಸ್​ಕೆಗೆ ಶಾಕ್​ ನೀಡಿದರು.

ಬಳಿಕ ಬಂದ ರವೀಂದ್ರ ಜಡೇಜಾ (2), ಮೊಯಿನ್​ ಅಲಿ (15), ರಿಜ್ವಿ (21), ಧೋನಿ (11) ಬಹುಬೇಗ ಪವಿಲಿಯನ್​ ಸೇರಿದ್ದರಿಂದ ತಂಡ ಸಾಮಾನ್ಯ ಮೊತ್ತವನ್ನು ಕಲೆಹಾಕಿತು. ನಾಯಕ ರುತುರಾಜ್ ಗಾಯಕ್ವಾಡ್ ಹೈಸ್ಕೋರರ್​ ಎನಿಸಿಕೊಂಡರು. 48 ಎಸೆತಗಳಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್​ ಸಮೇತ 62 ರನ್‌ಗಳ ಇನಿಂಗ್ಸ್‌ ಆಡಿದರು. ಪಂಜಾಬ್ ಪರ ರಾಹುಲ್ ಚಹಾರ್ 2, ಕಗಿಸೊ ರಬಾಡ ಮತ್ತು ಅರ್ಶ್ದೀಪ್ ತಲಾ 1 ವಿಕೆಟ್ ಪಡೆದರು.

ಸಿಎಸ್​ಕೆ ವಿರುದ್ದ ಸತತ ಐದನೇ ಗೆಲುವು:ಪಂಜಾಬ್ ತಂಡ ಸಿಎಸ್​ಕೆ ವಿರುದ್ಧ ಸತತ ಐದನೇ ಗೆಲುವು ಸಾಧಿಸಿದೆ. ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಈ ಸಾಧನೆ ಮಾಡಿದ ಎರಡನೇ ತಂಡವಾಗಿದೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಂಡ ಸಿಎಸ್‌ಕೆ ವಿರುದ್ದ ಸತತ ಐದು ಪಂದ್ಯಗಳನ್ನು ಗೆದ್ದಿದೆ ಈ ದಾಖಲೆ ಬರೆದಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ IPL​ ತಂಡಗಳ ಪ್ರಾತಿನಿಧ್ಯವೆಷ್ಟು? - T20 World Cup 2024

ABOUT THE AUTHOR

...view details