ಮೊಹಾಲಿ: ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ದ ಸನ್ರೈಸರ್ಸ್ ಹೈದರಾಬಾದ್ (SRH) 2 ರನ್ಗಳ ರೋಚಕ ಗೆಲುವ ಸಾಧಿಸಿದೆ. ಎಸ್ಆರ್ಹೆಚ್ ನೀಡಿದ್ದ 182 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿ ಸೋಲು ಅನುಭವಿಸಿದೆ.
ಮೊಹಾಲಿಯ ಮಹಾರಾಜ ಯದ್ವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಪವರ್ ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ಗಳಾದ ಟ್ರಾವಿಸ್ ಹೆಡ್ (21), ಅಭಿಷೇಕ್ ಶರ್ಮಾ (16), ಮಾಕ್ರಮ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ತಂಡದ ಸ್ಕೋರ್ 39ಕ್ಕೆ ತಲುಪಿದ್ದ ವೇಳೆ ಪ್ರಮುಖ ವಿಕೆಟ್ಗಳನ್ನು ತಂಡ ಕೈ ಚೆಲ್ಲಿತು. ಬಳಿಕ ಬಂದ ತ್ರಿಪಾಟಿ (11), ಕ್ಲಾಸೇನ್ (9) ಕೂಡ ಕ್ರೀಸ್ನಲ್ಲಿ ನೆಲೆಯೂರಲು ಆಗದೇ ಬಹುಬೇಗ ನಿರ್ಗಮಿಸಿದರು.
ಈ ವೇಳೆ, ತಂಡಕ್ಕೆ ಆಸೆರೆಯಾದ ನಿತೀಶ್ ಕುಮಾರ್ ಬಿರುಸಿನ ಬ್ಯಾಟಿಂಗ್ ಮೂಲಕ 37 ಎಸತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಮೇತ 64 ರನ್ಗಳನ್ನು ಚೆಚ್ಚಿ ಎದುರಾಳಿ ಬೌಲರ್ಗಳ ಬೆವರಿಳಿಸಿದರು. ಮತ್ತೊಂದೆಡೆ ಅಬ್ದುಲ್ ಸಮದ್ 12 ಎಸೆತಗಳಲ್ಲಿ 25ರನ್ಗಳನ್ನು ಬಾರಿಸುವ ಮೂಲಕ ತಂಡದ ಸ್ಕೋರ್182ಕ್ಕೆ ಕೊಂಡೊಯ್ಯುವಲ್ಲಿ ಸಹಾಯ ಮಾಡಿದರು. ಪಂಜಾಬ್ ಪರ ಅರ್ಷದೀಪ್ 4, ಸ್ಯಾಮ್ ಕರ್ರನ್, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಈ ಗುರಿ ಬೆನ್ನಟ್ಟಿದ್ದ ಪಂಜಾಬ್ ಕೂಡ ಪವರ್ ಪ್ಲೇನಲ್ಲೆ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ಬಂದ ಸ್ಯಾಮ್ ಕರ್ರನ್ (29), ಸಿಕಂದರ್ ರಾಜಾ(28), ಜಿತೇಶ್ ಶರ್ಮಾ (19) ತಂಡಕೆ ರನ್ ಕೊಡುಗೆ ನೀಡಿ ಪವಿಲಿಯನ್ ಸೇರಿದರು. ಈ ವೇಳೆ ಹೊಡಿಬಡಿ ಆಟವಾಡಿದ ಶಶಾಂಕ್ ಸಿಂಗ್(46) ಮತ್ತು ಅಶ್ಟೋಶ್ ಶರ್ಮಾ (35) ಅಜೇಯವಾಗಿ ಕೊನೆ ಓವರ್ ವರೆಗೂ ಕ್ರೀಸ್ನಲ್ಲಿ ನಿಂತು ತಂಡದ ಗೆಲುವಿಗಾಗಿ ಹೋರಾಡಿದರೂ ಶ್ರಮಕ್ಕೆ ಫಲ ಸಿಗದೇ 2 ರನ್ಗಳಿಂದ ಪಂಜಾಬ್ ಸೋಲೊಪ್ಪಿಕೊಂಡಿತು. ಎಸ್ಆರ್ಹೆಚ್ ಪರ ಭುವನೇಶ್ವರ್ 2 ವಿಕೆಟ್ ಪಡೆದರು.
ಇದನ್ನೂ ಓದಿ:ಚಿನ್ನಸ್ವಾಮಿ ಸ್ಟೇಡಿಯಂ ಸ್ಟಾಂಡ್ಗಳಿಗೆ ದಿಗ್ಗಜ ಕ್ರಿಕೆಟಿಗರ ಹೆಸರಿಡಲು ಸಿಎಂ ಮನವಿ - Chinnaswamy Stadium