ನವದೆಹಲಿ:ಪ್ಯಾರಿಸ್ ಒಲಿಂಪಿಕ್ಸ್‌ನ ಎರಡನೇ ದಿನದಂದು ಭಾರತ ಪದಕದ ಖಾತೆ ತೆರೆದಿದೆ. ಮಹಿಳಾ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವೂ ಹೌದು. ಹಲವು ಕ್ರೀಡೆಗಳಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ಮೂರನೇ ದಿನವಾದ ಜುಲೈ 29 ರಂದು ಭಾರತದ ಸ್ಪರ್ಧಿಗಳು ಯಾವೆಲ್ಲಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಜುಲೈ 29 ರ ವೇಳಾಪಟ್ಟಿ
ಬ್ಯಾಡ್ಮಿಂಟನ್:ಭಾರತೀಯ ಷಟ್ಲರ್ಗಳು ಮೂರನೇ ದಿನದಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ ಪಂದ್ಯ ಪುರುಷರ ಡಬಲ್ಸ್ ಆಗಿದ್ದು, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜರ್ಮನಿಯ ಲ್ಯಾಮ್ಸ್‌ಫಸ್ ಮಾರ್ಕ್ ಮತ್ತು ಸೀಡೆಲ್ ಮಾರ್ವಿನ್ ವಿರುದ್ಧ ಆಡಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಕ್ರಾಸ್ಟೊ ತನಿಶಾ ಮತ್ತು ಅಶ್ವಿನ್ ಪೊನ್ನಪ್ಪ ಅವರು ಜಪಾನ್‌ನ ಮತ್ಸುಯಾಮಾ ನಾಮಿ ಮತ್ತು ಚಿಹಾರು ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ ಗುಂಪು ಹಂತದ ಪಂದ್ಯದಲ್ಲಿ ಲಕ್ಷ್ಯ ಸೇನ್ ಅವರು ಬೆಲ್ಜಿಯಂನ ಕ್ಯಾರಾಗಿ ಜೂಲಿಯನ್ ಅವರನ್ನು ಎದುರಾಗಲಿದ್ದಾರೆ.
- ಪುರುಷರ ಡಬಲ್ಸ್ - (ಗುಂಪು ಹಂತ): ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ - ಮಧ್ಯಾಹ್ನ 12:00
- ಮಹಿಳೆಯರ ಡಬಲ್ಸ್ (ಗುಂಪು ಹಂತ): ಕ್ರಾಸ್ಟೊ ತನಿಶಾ ಮತ್ತು ಅಶ್ವಿನ್ ಪೊನ್ನಪ್ಪ - ಮಧ್ಯಾಹ್ನ 12:50
- ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಗುಂಪು ಹಂತದ ಪಂದ್ಯ (ಲಕ್ಷ್ಯ ಸೇನ್) - ಸಂಜೆ 6:30
ಶೂಟಿಂಗ್:10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತೆಯಲ್ಲಿ ಭಾರತಕ್ಕೆ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರು ತಂಡ 1 ರಲ್ಲಿ ಆಡಲಿದ್ದಾರೆ. ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಚೀಮಾ ತಂಡ-2 ರಲ್ಲಿ ಆಡುತ್ತಿದ್ದಾರೆ. ಪುರುಷರ ಟ್ರ್ಯಾಪ್ ಅರ್ಹತೆಯಲ್ಲಿ ಪೃಥ್ವಿರಾಜ್ ತೊಂಡೈಮಾನ್ ಭಾರತದ ಪರ ಕಣಕ್ಕಿಳಿಯಲಿದ್ದಾರೆ. 10 ಮೀಟರ್ ಏರ್ ರೈಫಲ್ ಮಹಿಳೆಯರ ಫೈನಲ್‌ನಲ್ಲಿ ರಮಿತಾ ಜಿಂದಾಲ್ ಮತ್ತು ಪುರುಷರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಅರ್ಜುನ್ ಬಾಬುತಾ ಕಣಕ್ಕಿಳಿಯಲಿದ್ದಾರೆ.
- 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ ಅರ್ಹತೆ (ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ - ತಂಡ 1) (ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಚೀಮಾ - ತಂಡ 2) - 12:45 ಮಧ್ಯಾಹ್ನ
- ಪುರುಷರ ಟ್ರ್ಯಾಪ್ ಅರ್ಹತೆ (ಪೃಥ್ವಿರಾಜ್ ತೊಂಡೈಮಾನ್) - ಮಧ್ಯಾಹ್ನ 1 ಗಂಟೆಗೆ
- 10 ಮೀ ಏರ್ ರೈಫಲ್ ಮಹಿಳೆಯರ ಫೈನಲ್ (ರಮಿತಾ ಜಿಂದಾಲ್) - ಮಧ್ಯಾಹ್ನ 1 ಗಂಟೆಗೆ
- 10 ಮೀ ಏರ್ ರೈಫಲ್ ಪುರುಷರ ಫೈನಲ್ (ಅರ್ಜುನ್ ಬಾಬುತಾ) - ಮಧ್ಯಾಹ್ನ 3:30