ಕರ್ನಾಟಕ

karnataka

ETV Bharat / sports

ಪ್ಯಾರಿಸ್ ಒಲಿಂಪಿಕ್ಸ್‌, 9ನೇ ದಿನ: ಮತ್ತೊಂದು ಪದಕದತ್ತ ಇಡೀ ದೇಶದ 'ಲಕ್ಷ್ಯ'! - Paris Olympics 2024 - PARIS OLYMPICS 2024

India At Paris Olympics, Day-9 Schedule: ಪ್ಯಾರಿಸ್ ಒಲಿಂಪಿಕ್ಸ್ 2024ರ 8ನೇ ದಿನ ಭಾರತಕ್ಕೆ ಕೊಂಚ ನಿರಾಶಾದಾಯಕವಾಗಿತ್ತು. ಡಬಲ್ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ 25 ಮೀಟರ್ ಪಿಸ್ತೂಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಇದರೊಂದಿಗೆ ಹ್ಯಾಟ್ರಿಕ್‌ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು. ಆದರೆ, ಇಂದು ಕೂಟದ 9ನೇ ದಿನ. ಭಾರತಕ್ಕೆ ಕನಿಷ್ಠ ಒಂದು ಪದಕದ ನಿರೀಕ್ಷೆ ಇದೆ.

Paris Olympics  4 August India Olympics Schedule
ಪ್ಯಾರಿಸ್ ಒಲಿಂಪಿಕ್ಸ್‌ (ETV Bharat)

By PTI

Published : Aug 4, 2024, 9:07 AM IST

Updated : Aug 4, 2024, 9:13 AM IST

ಪ್ಯಾರಿಸ್:ಪ್ಯಾರಿಸ್ ಒಲಿಂಪಿಕ್ಸ್ 2024ರ 8ನೇ ದಿನವಾದ ನಿನ್ನೆ ಭಾರತಕ್ಕೆ ನಿರಾಸೆ ಮೂಡಿಸಿತ್ತು. ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ ಹುಸಿಯಾಯಿತು. ಕ್ರೀಡಾಕೂಟದ 9ನೇ ದಿನವಾದ ಇಂದು ಪದಕ ಗೆಲ್ಲಲು ಅವಕಾಶವಿದೆ. ಬ್ಯಾಡ್ಮಿಂಟನ್‌ ತಾರೆ ಲಕ್ಷ್ಯ ಸೇನ್ ಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿದ್ದಾರೆ.

ಭಾರತದ ಸ್ಪರ್ಧಿಗಳ ಇಂದಿನ ವೇಳಾಪಟ್ಟಿ:

  • ಶೂಟಿಂಗ್:25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತೆ - ಹಂತ 1: ವಿಜಯವೀರ್ ಸಿಧು ಮತ್ತು ಅನೀಶ್- ಮಧ್ಯಾಹ್ನ 12.30
  • 25 ಮೀ ರ್ಯಾಪಿಡ್ ಫೈರ್ ಪಿಸ್ತೂಲ್ ಪುರುಷರ ಅರ್ಹತೆ - ಹಂತ 2: ವಿಜಯವೀರ್ ಸಿಧು ಮತ್ತು ಅನೀಶ್- ಸಂಜೆ 4.30
  • ಮಹಿಳೆಯರ ಸ್ಕೀಟ್ ಅರ್ಹತೆ - ದಿನ 2: ರೈಜಾ ಧಿಲ್ಲೋನ್ ಮತ್ತು ಮಹೇಶ್ವರಿ ಚೌಹಾಣ್- ಮಧ್ಯಾಹ್ನ 1 ಗಂಟೆಗೆ.
  • ಗಾಲ್ಫ್: ಪುರುಷರ ವೈಯಕ್ತಿಕ ಸ್ಟ್ರೋಕ್‌ಪ್ಲೇ - 4ರ ಸುತ್ತು: ಶುಭಂಕರ್ ಶರ್ಮಾ ಮತ್ತು ಗಗನ್‌ಜೀತ್ ಭುಲ್ಲರ್- ಮಧ್ಯಾಹ್ನ 12.30
  • ಹಾಕಿ:ಭಾರತ ಮತ್ತು ಬ್ರಿಟನ್ ನಡುವಿನ ಪುರುಷರ ಕ್ವಾರ್ಟರ್ ಫೈನಲ್ ಪಂದ್ಯ- ಮಧ್ಯಾಹ್ನ 1:30
  • ಅಥ್ಲೆಟಿಕ್ಸ್:ಮಹಿಳೆಯರ 3,000 ಮೀ. ಸ್ಟೀಪಲ್‌ಚೇಸ್ ಸುತ್ತು 1: ಪಾರುಲ್ ಚೌಧರಿ- ಮಧ್ಯಾಹ್ನ 1:35
  • ಪುರುಷರ ಲಾಂಗ್ ಜಂಪ್ ಅರ್ಹತೆ: ಜೆಸ್ವಿನ್ ಆಲ್ಡ್ರಿನ್- ಮಧ್ಯಾಹ್ನ 2:30
  • ಬಾಕ್ಸಿಂಗ್:ಮಹಿಳೆಯರ 75 ಕೆ.ಜಿ ಕ್ವಾರ್ಟರ್‌ಫೈನಲ್: ಲೊವ್ಲಿನಾ ಬೊರ್ಗೊಹೈನ್ ವಿರುದ್ಧ ಚೀನಾದ ಲಿ ಕಿಯಾನ್- ಮಧ್ಯಾಹ್ನ 3:02.
  • ಬ್ಯಾಡ್ಮಿಂಟನ್: ಪುರುಷರ ಸಿಂಗಲ್ಸ್ ಸೆಮಿಫೈನಲ್: ಲಕ್ಷ್ಯ ಸೇನ್ ವಿರುದ್ಧ ವಿಕ್ಟರ್ ಆಕ್ಸೆಲ್ಸೆನ್ (ಡೆನ್ಮಾರ್ಕ್)- ಮಧ್ಯಾಹ್ನ 3:30.
  • ಸೈಲಿಂಗ್ ಪುರುಷರ ಡಿಂಗಿ ರೇಸ್ 7 ಮತ್ತು 8: ವಿಷ್ಣು ಸರವಣನ್- ಮಧ್ಯಾಹ್ನ 3:35.
  • ಮಹಿಳೆಯರ ಡಿಂಗಿ ರೇಸ್ 7 ಮತ್ತು 8: ನೇತ್ರಾ ಕುಮನನ್- ಸಂಜೆ 6:05.
Last Updated : Aug 4, 2024, 9:13 AM IST

ABOUT THE AUTHOR

...view details