ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ 10ನೇ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು. ಸೋಮವಾರ ಭಾರತಕ್ಕೆ 2 ಪದಕಗಳನ್ನು ಗೆಲ್ಲುವ ಅವಕಾಶವಿತ್ತು. ಆದರೆ, ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಅನಂತಜಿತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಸ್ಕೀಟ್ ಮಿಶ್ರ ತಂಡ ಕಂಚಿನ ಪದಕದ ಪಂದ್ಯದಲ್ಲಿ ಸೋಲು ಅನುಭವಿಸಿದರು. ಇಂದು ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ಗೆ ಲಗ್ಗೆ ಇಡುವ ಮೂಲಕ ಚಿನ್ನಕ್ಕೆ ಗುರಿ ಇಡಲು ಹೊರಟಿರುವ ಭಾರತ ಹಾಕಿ ತಂಡದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಒಲಿಂಪಿಕ್ಸ್‌ನ 11ನೇ ದಿನದ ಭಾರತದ ಸಂಪೂರ್ಣ ವೇಳಾಪಟ್ಟಿ ಇಂತಿದೆ.
ಆಗಸ್ಟ್ 6ರಂದು ನಡೆಯಲಿರುವ ಭಾರತೀಯ ಕ್ರೀಡಾಪಟುಗಳ ಸ್ಪರ್ಧೆ:
ಟೇಬಲ್ ಟೆನಿಸ್: ಪ್ಯಾರಿಸ್ ಒಲಿಂಪಿಕ್ಸ್ 2024ರ 11ನೇ ದಿನದಂದು, ಭಾರತೀಯ ಪುರುಷರ ಆಟಗಾರರು ಟೇಬಲ್ ಟೆನ್ನಿಸ್ ತಂಡ ಸ್ಪರ್ಧೆಯಲ್ಲಿ ತಮ್ಮ ಅಭಿಯಾನ ಪ್ರಾರಂಭಿಸುತ್ತಾರೆ. ಮಾನವ್ ಠಕ್ಕರ್, ಶರತ್ ಕಮಲ್ ಮತ್ತು ಹರ್ಮೀತ್ ದೇಸಾಯಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯಾ ಪುರುಷರ ತಂಡ ಈವೆಂಟ್‌ನ 16ನೇ ಸುತ್ತಿನಲ್ಲಿ ಚೀನಾ ತಂಡದೊಂದಿಗೆ ಸೆಣಸಾಟ ನಡೆಸಲಿದೆ.
- 16ರ ಘಟ್ಟ - ಪುರುಷರ ತಂಡ (ಮಾನವ್ ಠಕ್ಕರ್, ಶರತ್ ಕಮಲ್ ಮತ್ತು ಹರ್ಮೀತ್ ದೇಸಾಯಿ)- 1:30 PM
ಅಥ್ಲೆಟಿಕ್ಸ್:ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಪಂದ್ಯದಲ್ಲಿ ಆಡುತ್ತಿದ್ದಾರೆ. ಇವರಲ್ಲದೇ ಭಾರತದ ಕಿಶೋರ್ ಕುಮಾರ್ ಜೈನಾ ಇದೇ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀರಜ್ ಬಿ ಗುಂಪಿನಲ್ಲಿ ಸ್ಥಾನ ಪಡೆದರೆ ಜೈನಾ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.
- ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪು ಎ - (ಕಿಶೋರ್ ಕುಮಾರ್ ಜೈನಾ) - ಮಧ್ಯಾಹ್ನ 1:50
- ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪು ಬಿ - (ನೀರಜ್ ಚೋಪ್ರಾ) - ಮಧ್ಯಾಹ್ನ 3:20