ಕರ್ನಾಟಕ

karnataka

ETV Bharat / sports

6,6,6,4,4,4 2nob,1wide ಯುವರಾಜ್​ ಸಿಂಗ್​ ದಾಖಲೆ ಸರಿಗಟ್ಟಿ, ಗೇಲ್​ ದಾಖಲೆ ಮುರಿದ ನಿಕೋಲಸ್​ ಪೂರನ್​ - Nicholas Pooran Records - NICHOLAS POORAN RECORDS

ವಿಶ್ವಕಪ್​ನ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ದ ವೆಸ್ಟ್​ ಇಂಡಿಸ್ ಸ್ಫೋಟಕ ಬ್ಯಾಟರ್​ ನಿಕೋಲಸ್​ ಪೂರನ್​ ಅವರು ಯುವರಾಜ್​ ಸಿಂಗ್​ ​ದಾಖಲೆಯನ್ನು ಸರಿಗಟ್ಟಿದ್ದಾರೆ.

ನಿಕೋಲಸ್​ ಪೂರನ್​
ನಿಕೋಲಸ್​ ಪೂರನ್​ (ETV Bharat)

By ETV Bharat Karnataka Team

Published : Jun 18, 2024, 1:59 PM IST

Updated : Jun 18, 2024, 2:18 PM IST

ಗ್ರಾಸ್ ಐಲೆಟ್: T20 ವಿಶ್ವಕಪ್ ಸಿ ಗುಂಪಿನ ಅಂತಿಮ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ವೆಸ್ಟ್​ ಇಂಡೀಸ್​ನ ನಿಕೋಲಸ್ ಪೂರನ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಪಂದ್ಯದಲ್ಲಿ ಅವರು ಒಂದೇ ಓವರ್​ನಲ್ಲಿ ಯುವರಾಜ್​ ಸಿಂಗ್​ ದಾಖಲೆಯನ್ನು ಮುರಿಯುವುದರ ಜೊತೆಗೆ, ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದ್ದಾರೆ. ಹಾಗೆಯೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸ್ಯಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನ ವಿರುದ್ಧ 104 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ವೆಸ್ಟ್ ಇಂಡೀಸ್ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ಗಳ ಬೃಹತ್​ ಮೊತ್ತವನ್ನು ಪೇರಿಸಿತು. ತಂಡದ ಪರ ಪೂರನ್​ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ 53 ಎಸೆತಗಳಲ್ಲಿ ಬರೋಬ್ಬರಿ 98 ರನ್ ಚಚ್ಚಿ 2 ರನ್​ಗಳಿಂದ ಶತಕ ವಂಚಿತರಾದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳನ್ನು ಸಿಡಿಸಿದರು.

ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ತಂಡ 16.2 ಓವರ್‌ಗಳಲ್ಲಿ 114 ರನ್‌ಗಳಿಗೆ ಸರ್ವಪತನ ಕಂಡಿದೆ. ಅಫ್ಘಾನ್​ ಪರ ಇಬ್ರಾಹಿಂ ಝದ್ರಾನ್ 38 ರನ್ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರೇ, ಒಮರ್ಝಾಯಿ 23ರನ್​ ಕಲೆಹಾಕಿದ್ದು ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟರ್​ಗಳು ಕ್ರೀಸ್​ನಲ್ಲಿ ಉಳಿದು ಹೋರಾಡಲು ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್ ಪರ ಮೆಕಾಯ್ 3 ವಿಕೆಟ್​ ಉರುಳಿಸಿದರೇ, ಅಕಿಲ್ ಹುಸೇನ್ ಮತ್ತು ಗುಡಾಕೇಶ್ ಮೋತಿ ತಲಾ 2, ರಸ್ಸೆಲ್​ ಮತ್ತು ಜೋಸೆಫ್​ ತಲಾ ಒಂದು ವಿಕೆಟ್​ ಪಡೆದರು.

ಪೂರನ್​ ದಾಖಲೆ: ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ ಬ್ಯಾಟರ್​ ನಿಕೋಲಸ್ ಪೂರನ್ ತಮ್ಮ ಸ್ಪೋಟಕ ಬ್ಯಾಟಿಂಗ್​ ನಿಂದ ದಾಖಲೆಗಳನ್ನು ಬರೆದಿದ್ದಾರೆ. ಒಂದೇ ಓವರ್‌ನಲ್ಲಿ 36 ರನ್ ಸಿಡಿಸುವ ಮೂಲಕ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಸರಿಗಟ್ಟಿದರೆ. ಜತೆಗೆ ಇದೇ ಪಂದ್ಯದಲ್ಲಿ 8 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಟಿ20 ಸ್ವರೂಪದಲ್ಲಿ 128 ಸಿಕ್ಸರ್​ ಪೂರೈಸಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ (124 ಸಿಕ್ಸರ್​) ಅವರ ದಾಖಲೆಯನ್ನು ಮುರಿದಿದ್ದಾರೆ. ಇಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2000ರನ್ ಪೂರೈಸಿದ ವೆಸ್ಟ್ ಇಂಡೀಸ್‌ನ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್​ ಆದ ನಿತಿನ್​ ಮೆನನ್​​; 20 ವರ್ಷಗಳ ದಾಖಲೆ ಉಡೀಸ್​ - NITIN MENON

Last Updated : Jun 18, 2024, 2:18 PM IST

ABOUT THE AUTHOR

...view details