ಕರ್ನಾಟಕ

karnataka

ETV Bharat / sports

ಮಹಿಳಾ ಏಷ್ಯಾ ಕಪ್ ಟಿ-20: ಸೆಮಿಫೈನಲ್‌ ಪ್ರವೇಶಿಸಿದ ಭಾರತ - Womens Asia Cup - WOMENS ASIA CUP

ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡ ನೇಪಾಳವನ್ನು 82 ರನ್‌ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.

India beat Nepal  Asia Cup  India Vs Nepal  womens Asia Cup
ನೇಪಾಳದ ವಿಕೆಟ್‌ ಪಡೆದ ಖುಷಿಯಲ್ಲಿ ಭಾರತ ತಂಡದ ಆಟಗಾರ್ತಿಯರು (IANS)

By PTI

Published : Jul 24, 2024, 7:28 AM IST

ಡಂಬುಲ್ಲಾ(ಶ್ರೀಲಂಕಾ):ಭಾರತೀಯ ಮಹಿಳಾ ಕ್ರಿಕೆಟ್ ತಂಡ ನೇಪಾಳ ವಿರುದ್ಧ 82 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಏಷ್ಯಾ ಕಪ್ 2024ರ ಗುಂಪು ಹಂತದಲ್ಲಿ ಲೀಗ್‌ ಹಂತದ ಎಲ್ಲಾ ಮೂರು ಪಂದ್ಯಗಳನ್ನೂ ಜಯಿಸಿ ಅಧಿಕಾರಯುತವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಮಂಗಳವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 178 ರನ್‌ಗಳ ಬೃಹತ್ ಟಾರ್ಗೆಟ್‌ ನೀಡಿತು. ಶೆಫಾಲಿ 48 ಎಸೆತಗಳಲ್ಲಿ 81 ರನ್‌ ಸಿಡಿಸಿದರು. ಇದಕ್ಕುತ್ತರವಾಗಿ ನೇಪಾಳ ನಿರಂತರವಾಗಿ ವಿಕೆಟ್ ಕಳೆದುಕೊಂಡು ಸಾಗುತ್ತಾ ನಿಗದಿತ 20 ಓವರ್‌ಗಳಲ್ಲಿ 96 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ತಂಡ ಟೂರ್ನಿಯಿಂದ ಹೊರಬಿತ್ತು.

ಏಷ್ಯಾಕಪ್ ಎ ಗುಂಪಿನಲ್ಲಿ ಭಾರತ ತಾನಾಡಿದ ಎಲ್ಲಾ ಮೂರು ಪಂದ್ಯಗಳನ್ನೂ ದೊಡ್ಡ ಅಂತರದಿಂದ ಗೆದ್ದಿರುವುದು ಗಮನಾರ್ಹ. ಇನ್ನು, ಪಾಕಿಸ್ತಾನ ಎ ಗುಂಪಿನಲ್ಲಿ ಅಗ್ರ 4ರೊಳಗಿದೆ. ಸೆಮಿಫೈನಲ್ ಪಂದ್ಯಗಳು ನಿಗದಿಯಾಗಿಲ್ಲ. ಏಕೆಂದರೆ, ಬಿ ಗುಂಪಿನ 2 ಪಂದ್ಯಗಳು ಇನ್ನೂ ಬಾಕಿ ಉಳಿದಿವೆ. ಭಾರತ ಸೆಮಿಫೈನಲ್‌ನಲ್ಲಿ ಬಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕಾಗಿ ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ನಡುವೆ ಹೋರಾಟ ನಡೆಯಲಿದೆ.

ಇದನ್ನೂ ಓದಿ:WT20ಐ ಶ್ರೇಯಾಂಕ ಪಟ್ಟಿ ಪ್ರಕಟ: ಸ್ಮೃತಿ ಮಂಧಾನಗೆ 5ನೇ, ಹರ್ಮನ್‌ಪ್ರೀತ್ - ಶಫಾಲಿಗೆ 11ನೇ ಸ್ಥಾನ - WT20I Rankings

ABOUT THE AUTHOR

...view details