Fans clash during football match: ಆಫ್ರಿಕನ್ ದೇಶವಾದ ಗಿನಿಯಾದಲ್ಲಿ ಘೋರ ದುರಂತವೊಂದು ನಡೆದಿದೆ. ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳು ಮಧ್ಯೆ ಘರ್ಷಣೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಗಿನಿಯಾದ ಎರಡನೇ ದೊಡ್ಡ ನಗರವಾದ ಜೆರೆಕೋರ್‌ನಲ್ಲಿ ಭಾನುವಾರ ನಡೆದ ಫುಟ್ಬಾಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಈ ಘಟನೆಯ ಬಳಿಕ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮೃತ ದೇಹಗಳು ಬಿದ್ದಿವೆ. ಅಲ್ಲದೇ ಅಲ್ಲಿಯ ಎಲ್ಲ ಆಸ್ಪತ್ರೆಗಳು ಮೃತ ದೇಹಗಳು ಮತ್ತು ಗಾಯಾಳುಗಳಿಂದ ತುಂಬಿವೆ. ಕೆಲ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಶವಗಳನ್ನು ಕಾರಿಡಾರ್‌ಗಳಲ್ಲೇ ಇರಿಸಲಾಗಿದೆ ಎಂದು ವರದಿಯಾಗಿದೆ.
ಗಿನಿಯಾ ಪ್ರಮುಖ ನಾಯಕನಾಗಿದ್ದ ಮಮಡಿ ಡೌಮ್‌ಬಾಯ್ ಅವರ ಗೌರವಾರ್ಥವಾಗಿ ಭಾನುವಾರ ಫುಟ್ಬಾಲ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ಪಂದ್ಯದ ಮಧ್ಯದಲ್ಲಿ ರೆಫರಿ ತೆಗೆದುಕೊಂಡ ನಿರ್ಧಾರ ವಿವಾದಕ್ಕೀಡಾಗಿತ್ತು. ಇದನ್ನು ವಿರೋಧಿಸಿದ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿದ್ದಾರೆ.