ನವದೆಹಲಿ: ಅರ್ಜೆಂಟೀನಾದ ಫುಟ್ಬಾಲ್ ಪಟು ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ ಪರ 'ಮೇಜರ್ ಲೀಗ್ ಫುಟ್ಬಾಲ್' ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮದೇ ಆದ ದಾಖಲೆ ಬರೆದರು. ದಾಖಲೆಯ ಗೋಲುಗಳನ್ನು ಗಳಿಸುವ ಮೂಲಕ ಮತ್ತೊಬ್ಬ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಹಿಂದಿಕ್ಕಿದರು. ಆದರೆ, ಅಟ್ಲಾಂಟಾ ಯುನೈಟೆಡ್ ವಿರುದ್ಧ ಪಂದ್ಯದಲ್ಲಿ ಈ ಗೋಲುಗಳು ಅವರ ತಂಡಕ್ಕೆ ಗೆಲುವು ತಂದುಕೊಡದಿರುವುದು ಬೇಸರದ ಸಂಗತಿ ಎಂದೇ ಹೇಳಬಹುದು.
2-3 ಗೋಲುಗಳಿಂದ ಸೋಲುವ ಮೂಲಕ ಅವರ ಇಂಟರ್ ಮಿಯಾಮಿ ಮೇಜರ್ ಲೀಗ್ ಸಾಕರ್ (MLS ) ಕಪ್ನ ಪ್ಲೇ ಆಫ್‌ಗಳಿಂದ ಹೊರ ಬಿದ್ದಿತು. ಈ ವರ್ಷದ ಆರಂಭದಿಂದ ಒಟ್ಟು 19 ಪಂದ್ಯಗಳಲ್ಲಿ ಕಾಣಿಸಿಕೊಂಡ ಲಿಯೋನೆಲ್ ಮೆಸ್ಸಿ, 20 ಗೋಲುಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ರೊನಾಲ್ಡೊ ಅವರ ದಾಖಲೆಯನ್ನು ಮುರಿದರು. ಒಂದರ್ಥದಲ್ಲಿ ಹಿಂದಿಕ್ಕಿ ಮುಂದೆ ಹೋದರು ಎಂದೂ ಹೇಳಬಹುದು. ಕಡಿಮೆ ಸಂಖ್ಯೆಯ ಪಂದ್ಯಗಳೊಂದಿಗೆ ವೃತ್ತಿ ಜೀವನದಲ್ಲಿ 850 ಗೋಲು (ಲೀಗ್ ಮತ್ತು ದೇಶ)ಗಳನ್ನು ಗಳಿಸುವ ಮೂಲಕ ರೊನಾಲ್ಡೊ ಅವರ ದಾಖಲೆ ಅಳಿಸಿ ಹಾಕಿದರು. ರೊನಾಲ್ಡೊ 1,179 ಅಧಿಕೃತ ಪಂದ್ಯಗಳಲ್ಲಿ 850 ಗೋಲು ಗಳಿಸಿದ್ದರೆ, ಮೆಸ್ಸಿ 1,081 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
1000 ಗೋಲು ಗಳಿಸುವ ಗುರಿ: ಸದ್ಯ 900 ಗೋಲುಗಳನ್ನು ತಮ್ಮದಾಗಿಸಿಕೊಂಡಿರುವ ಪೋರ್ಚಗಲ್ ದೇಶದ ದಿಗ್ಗಜ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೊನಾಲ್ಡೊ ತಾವು ತಮ್ಮ ವೃತ್ತಿಜೀವನದಲ್ಲಿ 1,000 ಗೋಲುಗಳನ್ನು ಗಳಿಸುವ ಗುರಿ ಹೊಂದುವುದಾಗಿ ಹೇಳಿಕೊಂಡಿದ್ದಾರೆ. ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್‌ನಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು "ನಾನು 1,000 ಗೋಲುಗಳನ್ನು ಗಳಿಸಿದರೆ, ಅದ್ಭುತವಾಗಿರುತ್ತದೆ" ಎಂದು ತಮ್ಮ ಬಗ್ಗೆ ತಾವೇ ವರ್ಣಿಸಿಕೊಂಡ ರೊನಾಲ್ಡೊ, "ನಾನು ಆ ಸಾಧನೆ ಮಾಡದಿದ್ದರೂ ಈಗಾಗಲೇ ಇತಿಹಾಸದಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿದ್ದೇನೆ" ಅಂತಲೂ ಹೇಳಿಕೊಂಡಿದ್ದಾರೆ.