ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಮುಂದುವರೆದಿದೆ. ಇಂದು ನಡೆದ ಒಲಿಂಪಿಕ್ಸ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಪಾರುಲ್ ಚೌಧರಿ ಮತ್ತು ಜೆಸ್ವಿನ್ ಆಲ್ಡ್ರಿನ್ ಕ್ರಮವಾಗಿ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಮತ್ತು ಪುರುಷರ ಲಾಂಗ್ ಜಂಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ಪಾರುಲ್ ತನ್ನ ಹೀಟ್ ರೇಸ್‌ನಲ್ಲಿ ಎಂಟನೇ ಮತ್ತು ಒಟ್ಟಾರೆ 21ನೇ ಸ್ಥಾನ ಗಳಿಸಿದರು, ಈ ಮೂಲಕ ಪ್ಯಾರಿಸ್ ಒಲಿಂಪಿಕ್ನಲ್ಲಿ ತನ್ನ ಅಭಿಯಾನವನ್ನು ಕೊನೆಗೊಳಿಸಿದರು. 29ರ ಹರೆಯದ ಪಾರುಲ್ ಒಲಿಂಪಿಕ್ ಕ್ರೀಡಾಕೂಟಕ್ಕೂ ಕೆಲ ತಿಂಗಳುಗಳ ಮೊದಲು ಅಮೆರಿಕದಲ್ಲಿ ತರಬೇತಿ ಪಡೆದಿದ್ದರು ಮತ್ತು ಅವರು ದೂರವನ್ನು 9:23.39 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಈ ಋತುವಿನಲ್ಲಿ ಇದು ಅವರ ಅತ್ಯುತ್ತಮ ದಾಖಲೆಯಾಗಿದೆ.
ಆದರೆ 2023ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅವರ ರಾಷ್ಟ್ರೀಯ ದಾಖಲೆ 9:15.31 ನಿಮಿಷ ಆಗಿತ್ತು. ಇದೇ ಸ್ಪರ್ಧೆಯಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಉಗಾಂಡಾದ ಪೆರುತ್ ಚೆಮುಟೈ 9:10.51 ನಿಮಿಷಗಳೊಂದಿಗೆ ಮೊದಲ ಸ್ಥಾನ ಪಡೆದರೇ, ಕೀನ್ಯಾದ ಫೇತ್ ಚೆರೊಟಿಚ್ (9:10.57) ಮತ್ತು ಜರ್ಮನಿಯ ಗೆಸಾ ಫೆಲಿಸಿಟಾಸ್ ಕ್ರೌಸ್ (9:10.68) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.