ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ 2024ರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಕೂಟ ತಲುಪಿದ್ದಾರೆ. ಸೇನ್ 21-12, 21-6 ಸೆಟ್ಗಳಿಂದ ಭಾರತದ ಪ್ರಣಯ್ ಅವರನ್ನು ಸೋಲಿಸಿದರು. 40 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.
ಲಕ್ಷ್ಯ ಇದೀಗ 16ನೇ ಸುತ್ತಿಗೆ ತಲುಪಿದ್ದಾರೆ. ಒಲಿಂಪಿಕ್ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಇವರಿಗಿಂತ ಮೊದಲು ಪಿ ಕಶ್ಯಪ್ 2012ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದೀಗ 12 ವರ್ಷಗಳ ನಂತರ ಭಾರತದ ಷಟ್ಲರ್ ಈ ಸಾಧನೆ ಮಾಡಿದ್ದಾರೆ. ಸೇನ್ ತಮ್ಮ ಮುಂದಿನ ಪಂದ್ಯದಲ್ಲಿ 12ನೇ ಶ್ರೇಯಾಂಕದ ಚೀನಾದ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಎದುರಿಸಲಿದ್ದಾರೆ.
ಮೊದಲ ಸೆಟ್:ಲಕ್ಷ್ಯ ಮೊದಲ ಸೆಟ್‌ನಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಆಡಿ ಪ್ರಣಯ್ ಹೆಚ್‌ಎಸ್ ಗೆ ಯಾವುದೇ ಅವಕಾಶ ನೀಡದೆ ಮೊದಲಿನಿಂದಲೂ ಮುನ್ನಡೆ ಸಾಧಿಸಲು ಆರಂಭಿಸಿದರು. ಮೊದಲ ಸೆಟ್ ಅನ್ನು 21-12 ರಿಂದ ಏಕಪಕ್ಷೀಯ ರೀತಿಯಲ್ಲಿ ಗೆದ್ದು ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದರು.