ಕರ್ನಾಟಕ

karnataka

ETV Bharat / sports

ಕೆಕೆಆರ್​ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ರಾಯಲ್ಸ್​: ಜೋಸ್​ ಬಟ್ಲರ್​, ನರೈನ್​ ಅಬ್ಬರದ ಶತಕ - KKR vs RR match

ಕೋಲ್ಕತ್ತಾ ಈಡನ್​​ ಗಾರ್ಡನ್ಸ್​ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್​​ ರೈಡರ್ಸ್​ ನಡುವಿನ ಪಂದ್ಯದಲ್ಲಿ ರನ್​ ಮಳೆ ಹರಿಯಿತು. ಇತ್ತಂಡಗಳು 447 ರನ್​ ಗಳಿಸಿದವು.

ಕೆಕೆಆರ್​ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ರಾಯಲ್ಸ್
ಕೆಕೆಆರ್​ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ರಾಯಲ್ಸ್

By ETV Bharat Karnataka Team

Published : Apr 17, 2024, 7:00 AM IST

ಕೋಲ್ಕತ್ತಾ:ಗೆಲ್ಲಬೇಕು ಎಂಬ ಹಠವಿದ್ದರೆ ಯಶಸ್ಸು ಖಂಡಿತ ಎಂಬುದನ್ನು ರಾಜಸ್ಥಾನ ರಾಯಲ್ಸ್​ ತಂಡ ಸಾಬೀತುಪಡಿಸಿತು. ಇನ್ನೇನು ತಂಡ ಸೋಲುತ್ತದೆ ಎಂದುಕೊಂಡಿದ್ದ ಅಭಿಮಾನಿಗಳಲ್ಲಿ ಜೋಸ್​ ಬಟ್ಲರ್​ ಎಂಬ ದೈತ್ಯ ದಾಂಡಿಗನ ಅಬ್ಬರದ ಬ್ಯಾಟಿಂಗ್​ ಗೆಲುವಿನ ಅಲೆ ಎಬ್ಬಿಸಿತು.

ಈಡನ್​ ಗಾರ್ಡನ್ಸ್​​ನಲ್ಲಿ ಕೋಲ್ಕತ್ತಾ ವಿರುದ್ಧ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ 2 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಕೆಕೆಆರ್​ ನೀಡಿದ್ದ 223 ರನ್​ಗಳ ಕಠಿಣ ಮೊತ್ತವನ್ನು ಕೊನೆಯ ಎಸೆತದಲ್ಲಿ ದಾಟಿತು. 8 ವಿಕೆಟ್​​ ಕಳೆದುಕೊಂಡು 224 ರನ್​ ಗಳಿಸಿ ವಿಜಯದ ನಗೆ ಬೀರಿತು. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಜೋಸ್​​ ಬಟ್ಲರ್​ ಅವರ ಭರ್ಜರಿ ಶತಕ.

ಸತತ ವಿಕೆಟ್​ ಬೀಳುತ್ತಿದ್ದರೂ, ಪಿಚ್​​ಗೆ ಅಂಟಿಕೊಂಡು ಆಡಿದ ಬಟ್ಲರ್​ ಕೊನೆಯ ಎಸೆತದವರೆಗೂ ಬ್ಯಾಟ್​ ಮಾಡಿ ತಂಡವನ್ನು ಜಯದ ದಡ ಸೇರಿಸಿದರು. ಕೊನೆಯ ಓವರ್​ನಲ್ಲಿ 9 ರನ್​ ಬೇಕಿದ್ದಾಗ ಮೊದಲ ಎಸೆತವನ್ನೇ ಸಿಕ್ಸರ್​ ಬಾರಿಸಿದರು. ಜೊತೆಗೆ ತಮ್ಮ ವೈಯಕ್ತಿಕ ಶತಕ ಸಾಧನೆಯನ್ನೂ ಮಾಡಿದರು. ಇನ್ನೊಂದು ತುದಿಯಲ್ಲಿದ್ದ ಆವೇಶ್​ಖಾನ್​ರಿಗೆ ಬ್ಯಾಟ್​ ಮಾಡಲು ಅವಕಾಶ ನೀಡದೇ, ತಾವೇ ಗೆಲುವಿನ ಶಾಸ್ತ್ರ ಮುಗಿಸಿದರು.

ಕೊನೆಯವರೆಗೂ ಹೋರಾಡಿದ ಇಂಗ್ಲೆಂಡ್​ ಆಟಗಾರ ಬಟ್ಲರ್​ 60 ಎಸೆತಗಳಲ್ಲಿ 107 ರನ್​ ಬಾರಿಸಿದರು. ಇದರಲ್ಲಿ 6 ಸಿಕ್ಸರ್​ 9 ಬೌಂಡರಿಗಳಿದ್ದವು. ಟೂರ್ನಿಯಲ್ಲಿ ಇದು ಅವರ ಎರಡನೇ ಶತಕವಾಗಿದೆ. ಉಳಿದ ಆಟಗಾರರಿಂದ ದೊಡ್ಡ ಸಾಥ್​ ಸಿಗದಿದ್ದರೂ, ರಿಯಾನ್​ ಪರಾಗ್​ 34, ರೋವ್​ಮನ್​ ಪರಾಗ್​ 26, ಯಶಸ್ವಿ ಜೈಸ್ವಾಲ್​ 19 ರನ್​ ಕಾಣಿಕೆ ನೀಡಿದರು.

6ನೇ ಗೆಲುವು, ಪಟ್ಟಿಯಲ್ಲಿ ಟಾಪ್​:ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಪ್ರದರ್ಶನ ಶ್ರೇಷ್ಠವಾಗಿದೆ. ಆಡಿದ 7 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಕಂಡು 1 ರಲ್ಲಿ ಸೋತಿದೆ. ಪಾಯಿಂಟ್​ ಪಟ್ಟಿಯಲ್ಲಿ 12 ಪಾಯಿಂಟ್​ನೊಂದಿಗೆ ಅಗ್ರಸ್ಥಾನದಲ್ಲಿದೆ. ಬಟ್ಲರ್​, ಪರಾಗ್​, ಜೈಸ್ವಾಲ್​, ನಾಯಕ ಸಂಜು ಸ್ಯಾಮ್ಸನ್​ ಅದ್ಭುತ ಬ್ಯಾಟಿಂಗ್​ ಲಯದಲ್ಲಿದ್ದಾರೆ.

ವ್ಯರ್ಥವಾದ ಸುನಿಲ್ ನರೈನ್​ ಶತಕ:ಇದಕ್ಕೂ ಮೊದಲು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸುನಿಲ್​ ನರೈನ್​ ಭರ್ಜರಿ ಶತಕ ಸಿಡಿಸಿದರು. ಸ್ಪಿನ್ನರ್​ ಆಗಿದ್ದರೂ, ತಂಡದ ಮೆಂಟರ್​ ಗೌತಮ್​ ಗಂಭೀರ್​ ಅವರ ಇಚ್ಚೆಯಂತೆ ಆರಂಭಿಕನಾಗಿ ಆಡುತ್ತಿರುವ ನರೈನ್​ ಯಶಸ್ಸು ಕಂಡಿದ್ದಾರೆ. 6 ಸಿಕ್ಸರ್​ 13 ಬೌಂಡರಿ ಸಮೇತ 56 ಎಸೆತಗಳಲ್ಲಿ 109 ರನ್​ ಗಳಿಸಿದರು. ಇದು ಅವರ ವೈಯಕ್ತಿಕ ಮೊದಲ ಶತಕವಾಗಿದೆ. ಜೊತೆಗೆ ತಂಡದ ಪರವಾಗಿ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಮಾಜಿ ಆಟಗಾರ ಮೆಕ್ಕಲಂ, ವೆಂಕಟೇಶ್ ಅಯ್ಯರ್​ ಈ ಸಾಧನೆ ಮಾಡಿದ್ದರು. 18 ವರ್ಷದ ಯುವ ಕ್ರಿಕೆಟಿಗ ಆಂಕೃಷ್ ರಘುವಂಶಿ 30, ರಿಂಕು ಸಿಂಗ್​ 20, ರಸೆಲ್​ 13 ರನ್​ ಕಾಣಿಕೆ ನೀಡಿದರು. ಇದರಿಂದ ತಂಡ 6 ವಿಕೆಟ್​ಗೆ 223 ರನ್​ ಗಳಿಸಿತು.

ಇದನ್ನೂ ಓದಿ:KKR vs RR: IPL​ನಲ್ಲಿ ಮೊದಲ ಶತಕ ಸಿಡಿಸಿದ ಸುನಿಲ್​ ನರೈನ್; ರಾಜಸ್ಥಾನಕ್ಕೆ 222 ರನ್​ ಗುರಿ - KKR VS RR

ABOUT THE AUTHOR

...view details