ETV Bharat / sports

ಮೈಸೂರು ಕ್ರಿಕೆಟರ್​ಗೆ ಖುಲಾಯಿಸಿತು ಅದೃಷ್ಟ​: IPL ಹರಾಜಿನಲ್ಲಿ​ ಡೆಲ್ಲಿ ಪಾಲಾದ ಆಲ್​ರೌಂಡರ್; ಎಷ್ಟು ಮೊತ್ತಕ್ಕೆ ಗೊತ್ತಾ?

ಐಪಿಎಲ್​ ಮೆಗಾ ಹರಾಜಿನಲ್ಲಿ ಮೈಸೂರು ಯುವ ಕ್ರಿಕೆಟರ್​ ಅನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಖರೀದಿ ಮಾಡಿದೆ.

MYSORE CRICKETER IPL TEAM  CRICKETER MANWANT KUMAR  MYSURU  IPL 2025
ಮನ್ವಂತ್ ಕುಮಾರ್ (ETV Bharat)
author img

By ETV Bharat Sports Team

Published : Nov 26, 2024, 5:48 PM IST

ಮೈಸೂರು: ಇಂಡಿಯನ್ ಪ್ರಿಮಿಯರ್ ಲೀಗ್​ನ 2025ರ ಆವೃತ್ತಿಯ ಭಾಗವಾಗಿ ಜೆಡ್ಡಾದಲ್ಲಿ ನಡೆದ ಮೆಗಾ ಹರಾಜಿನಲ್ಲಿ ಮೈಸೂರಿನ ಯುವ ಕ್ರಿಕೆಟಿಗನನ್ನು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಖರೀದಿ ಮಾಡಿದೆ.

ಎರಡು ದಿನಗಳಿಂದ ನಡೆದಿದ್ದು ಹರಾಜು ಪ್ರಕ್ರಿಯೆಯಲ್ಲಿ ಮೈಸೂರಿನ ಜೆ.ಪಿ. ನಗರದ ನಿವಾಸಿಯಾದ ಮನ್ವಂತ್ ಕುಮಾರ್ ಅವರನ್ನು ಡೆಲ್ಲಿ ಕ್ಯಾಪಿಟಲ್ ತಂಡ ಖರೀದಿ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಆಲ್​ರೌಂಡರ್ ಆಗಿದ್ದಾರೆ.

ಎಸ್. ಲಕ್ಷ್ಮೀ ಕುಮಾರ್ ಮತ್ತು ಆರ್. ಶ್ರೀ ದೇವಿಕುಮಾರ್ ದಂಪತಿ ಪುತ್ರರಾದ 20 ವರ್ಷದ ಮನ್ವಂತ್ ಕುಮಾರ್ ಮತ್ತು ಸೋಹದರ ಹೇಮಂತ್ ಕುಮಾರ್ ಇಬ್ಬರು ಕ್ರಿಕೆಟರ್​ ಆಗಿದ್ದಾರೆ. ಬಿಂಎಂಟಿಸಿ ನಿವೃತ್ತ ಬಸ್ ಚಾಲಕರಾದ ತಂದೆ ಲಕ್ಷ್ಮಿಕುಮಾರ್, ತಮ್ಮ ಇಬ್ಬರು ಮಕ್ಕಳ ಕ್ರಿಕೆಟ್ ಮೇಲಿನ ಆಸಕ್ತಿ ಕಂಡು ತರಬೇತಿಗೆ ಸೇರಿಸಿದ್ದರು. ಅದರಲ್ಲೂ ಬಾಲ್ಯದಿಂದಲೇ ಐಪಿಎಲ್​ಗೆ ಪ್ರವೇಶಿಸಬೇಕು ಎಂಬ ಕನಸು ಕಂಡಿದ್ದ ಮನ್ವಂತ್ ಇದೀಗ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಎರಡನೇ ದಿನ ನಡೆದ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮನ್ವಂತ್​ ಅವರನ್ನು ₹30 ಲಕ್ಷಕ್ಕೆ ಖರೀದಿ ಮಾಡಿದೆ.

ಮನ್ವಂತ್​ ದಾಖಲೆಗಳು: ಸದ್ಯ ಮೈಸೂರಿನ ಆರ್.ಬಿ.ಎನ್.ಸಿ.ಸಿ. ತಂಡವನ್ನು ಪ್ರತಿನಿಧಿಸುತ್ತಿದ್ದು, ಸೈಯದ್ ಮುಷ್ತಾಕ್ ಆಲಿ ಟ್ರೋಫಿ ಮತ್ತು 2023ರ ಮಹಾರಾಜ ಟ್ರೋಫಿ ಲೀಗ್​ಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ 6 ಪಂದ್ಯಗಳನ್ನು ಆಡಿರುವ ಮನ್ವಂತ್​ 101 ರನ್​ಗಳಿಸಿದ್ದಾರೆ. ಬೌಲಿಂಗ್​ ಅಂಕಿ - ಅಂಶ ನೋಡಿದರೇ ಒಟ್ಟು 10 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 15 ವಿಕೆಟ್​ ಪಡೆದಿದ್ದಾರೆ. 33 ರನ್​ಗೆ 4 ವಿಕೆಟ್​ ಪಡೆದಿರುವುದು ಇವರ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

ಈ ಕುರಿತು ಈಟಿವಿ ಭಾರತದ ಜೊತೆ ದೂರವಾಣಿ ಮೂಲಕ ಪ್ರಕ್ರಿಯೆ ನೀಡಿರುವ ಮನ್ವಂತ್​ ಡೆಲ್ಲಿ ಕ್ಯಾಪಿಟಲ್ಸ್ ನನ್ನನ್ನು ಆಯ್ಕೆ ಮಾಡಿದ್ದು , ಸಂತೋಷವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಉಳಿದಂತೆ ಈ ಬಾರಿ ಒಟ್ಟು 24 ಕನ್ನಡಿಗರು ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಒಟ್ಟು 9 ಆಟಗಾರರನ್ನು ವಿವಿಧ ತಂಡಗಳು ಖರೀದಿ ಮಾಡಿವೆ. ಕನ್ನಡಿಗರಲ್ಲಿ ಕೆಎಲ್​ ರಾಹುಲ್​ ಹೆಚ್ಚು ಮೊತ್ತಕ್ಕೆ ಮಾರಾಟ ಆದ ಆಟಗಾರ ಎನಿಸಿಕೊಂಡಿದ್ದಾರೆ. ಮೊದಲ ದಿನ ನಡೆದ ಹರಾಜಿನಲ್ಲಿ ರಾಹುಲ್​ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ ಖರೀದಿ ಮಾಡಿದೆ. ವಿವಿಧ ತಂಗಳ ಮಧ್ಯ ಏರ್ಪಟ್ಟ ಪೈಪೋಟಿಯಲ್ಲಿ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ ₹14 ಕೋಟಿಗೆ ರಾಹುಲ್​ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಇದನ್ನೂ ಓದಿ: IPL ಹರಾಜಿನಲ್ಲಿ ಕಾಣಿಸಿಕೊಂಡ 24 ಕನ್ನಡಿಗರಲ್ಲಿ ಸೋಲ್ಡ್​ - ಅನ್​ಸೋಲ್ಡ್​ ಆದ ಆಟಗಾರರು ಇವರೇ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.