Karnataka Players in IPL: ಸೋಮವಾರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ಒಟ್ಟು 182 ಆಟಗಾರರು ಬಿಕರಿಯಾಗಿದ್ದಾರೆ. ಇದರಲ್ಲಿ 62 ವಿದೇಶಿ ಆಟಗಾರರು ಸೇರಿದ್ದಾರೆ. ಈ ಮೆಗಾ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಲು ಒಟ್ಟು ₹639 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.
ಈ ಬಾರಿ ಕ್ಯಾಪ್ಡ್ ಮತ್ತು ಅನ್ಕ್ಯಾಪ್ಡ್ ಆಟಗಾರರು ಸೇರಿ ಒಟ್ಟು 1,574 ಆಟಗಾರರು ಐಪಿಎಲ್ ಹರಾಜಿಗಾಗಿ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 574 ಆಟಗಾರರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿತ್ತು. ಶಾರ್ಟ್ಲಿಸ್ಟ್ ಆದ ಆಟಗಾರರಲ್ಲಿ 24 ಕನ್ನಡಿಗರು ಸೇರಿದ್ದರು. ಆದರೆ ಈ ಆಟಗಾರರಲ್ಲಿ ಕೇವಲ 9 ಜನರು ಆಟಗಾರರು ಮಾತ್ರ ಸೋಲ್ಡ್ ಆಗಿದ್ದು, ಉಳಿದ ಆಟಗಾರರು ನಿರಾಸೆ ಅನುಭವಿಸಿದ್ದಾರೆ. ಹರಾಜಾದ ಕನ್ನಡಿಗರಲ್ಲಿ ಕೆಎಲ್ ರಾಹುಲ್ ಹೆಚ್ಚಿನ ಮೊತ್ತವನ್ನು ಪಡೆದುಕೊಂಡಿದ್ದಾರೆ.
2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ರಾಹುಲ್ ಅವರನ್ನು ಈ ಬಾರಿ ಆರ್ಸಿಬಿ ಖರೀದಿ ಮಾಡುತ್ತದೆ ಎಂದೇ ಕನ್ನಡಿಗರು ಭಾವಿಸಿದ್ದರು. ಆದರೇ ಎಲ್ಲಾ ನಿರೀಕ್ಷೆಗಳು ಹುಸಿಗೊಂಡವು. ಅಂತಿಮವಾಗಿ ರಾಹುಲ್ ಅವರನ್ನು 14 ಕೋಟಿಗೆ ಡೆಲ್ಲಿ ತಂಡ ಖರೀದಿ ಮಾಡಿತು. ಜಿದ್ದಾಜಿದ್ದಿನ ಹರಾಜಿನಲ್ಲಿ ಪೈಪೋಟಿ ನೀಡಿದ್ದ ಆರ್ಸಿಬಿ 10.50 ಕೋಟಿ ವರೆಗೂ ಬಿಡ್ ಮಾಡಿತ್ತು ಆ ಬಳಿಕ ಹಿಂದೆ ಸರಿಯಿತು. ಇದರೊಂದಿಗೆ ಉಳಿದ ಕನ್ನಡಿಗರಲ್ಲಿ ರಾಹುಲ್ ಹೆಚ್ಚಿನ ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡರು. ಉಳಿದ ಆಟಗಾರರಲ್ಲಿ ಸೋಲ್ಡ್ ಆದವರು ಮತ್ತು ಅನ್ಸೋಲ್ಡ್ ಆದವರು ಯಾರು ಎಂದು ಇದೀಗ ತಿಳಿಯಿರಿ.
ಹರಾಜಿನಲ್ಲಿ 24 ಕನ್ನಡಿಗರು
ಕೆ.ಎಲ್.ರಾಹುಲ್, ಪ್ರಸಿದ್ಧ್ ಕೃಷ್ಣ, ಮನೀಷ್ ಪಾಂಡೆ, ಅಭಿನವ್ ಮನೋಹರ್, ಮಯಾಂಕ್ ಅಗರ್ವಾಲ್, ಲುವ್‌ನಿತ್ ಸಿಸೋಡಿಯಾ, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯ್ ಕುಮಾರ್, ಸಮರನ್ ರವಿಚಂದ್ರನ್, ಬಿ.ಆರ್.ಶರತ್, ವಿದ್ವತ್ ಕಾವೇರಪ್ಪ, ಕೃಷ್ಣಪ್ಪ ಗೌತಮ್, ಮನೋಜ್ ಭಾಂಡಗೆ, ಪ್ರವೀನ್ ದುಬೆ, ಎಲ್.ಆರ್.ಚೇತನ್, ಅಭಿಲಾಷ್ ಶೆಟ್ಟಿ, ದೀಪಕ್ ದೇವಾಡಿಗ, ಹಾರ್ದಿಕ್ ರಾಜ್, ಶ್ರೀಜೀತ್ ಕೃಷ್ಣನ್, ಎಲ್.ಮನ್ವಂತ ಕುಮಾರ್, ಸಮರ್ಥ ನಾಗರಾಜ್, ವಿದ್ಯಾಧರ್ ಪಾಟೀಲ್, ಶುಭಾಂಗ ಹೆಗಡೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಸೋಲ್ಟ್ ಮತ್ತು ಅನ್ಸೋಲ್ಡ್ ಆದ ಪಟ್ಟಿ ಹೀಗಿದೆ.
ಸೋಲ್ಡ್ ಆದ ಆಟಗಾರರ ಪಟ್ಟಿ
ಕ್ರಮ ಸಂಖ್ಯೆ | ಆಟಗಾರರು | ಮೌಲ್ಯ ಮತ್ತು ತಂಡ |
1 | KL ರಾಹುಲ್ | ₹14 ಕೋಟಿ ರೂ (DC) |
2 | ಅಭಿನವ್ ಮನೋಹರ್ | ₹3.20 ಕೋಟಿ ರೂ (SRH) |
3 | ಪ್ರಸಿದ್ಧ್ ಕೃಷ್ಣ | ₹9.50 ಕೋಟಿ ರೂ (GT) |
4 | ಕರುಣ್ ನಾಯರ್ | ₹50 ಲಕ್ಷ ರೂ (DC) |
5 | ಮನೋಜ್ ಭಾಂಡಗೆ | ₹30 ಲಕ್ಷ ರೂ (RCB) |
6 | ದೇವದತ್ ಪಡಿಕ್ಕಲ್ | ₹2 ಕೋಟಿ ರೂ (RCB) |
7 | ವೈಶಾಖ್ ವಿಜಯ್ ಕುಮಾರ್ | ₹1.80 ಕೋಟಿ ರೂ (PBK) |
8 | ಶ್ರೀಜಿತ್ ಕೃಷ್ಣನ್ | ₹30 ಲಕ್ಷ ರೂ (MI) |
9 | ಮನೀಶ್ ಪಾಂಡೆ | ₹75 ಲಕ್ಷ ರೂ (KKR) |
ಇದನ್ನೂ ಓದಿ: ಮುಂದುವರಿದ ಅಚ್ಚರಿಗಳು..! ವಿಶ್ವಕಪ್ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಭಾರತದ ಡೇಂಜರಸ್ ಬೌಲರ್ IPLನಲ್ಲಿ Unsold!