ETV Bharat / sports

IPL ಹರಾಜಿನಲ್ಲಿ ರಾತ್ರೋರಾತ್ರಿ ಸ್ಟಾರ್​ ಆದ ವೈಭವ್​ ವಯಸ್ಸಿನ ಬಗ್ಗೆ ಶುರುವಾಯ್ತು ವದಂತಿ - VAIBHAV SURYAVANSHI AGE ISSUE

Vaibhav Suryavanshi Age Issue: ಐಪಿಎಲ್ 2025ಕ್ಕೆ ಆಟಗಾರರ ಹರಾಜಿನಲ್ಲಿ ಜಾಕ್‌ಪಾಟ್ ಹೊಡೆದ ವೈಭವ್ ಸೂರ್ಯವಂಶಿ ಅವರ ವಯಸ್ಸಿನ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಅವರ ತಂದೆ ಸ್ಪಷ್ಟನೆ ನೀಡಿದ್ದಾರೆ.

VAIBHAV SURYAVANSHI  FRAUD RUMOURS  FATHER QUASHES AGE RUMOURS  IPL MEGA AUCTION 2025
ವೈಭವ್ ಸೂರ್ಯವಂಶಿ (X/IndianPremierLeague)
author img

By ETV Bharat Sports Team

Published : Nov 26, 2024, 11:59 AM IST

Updated : Nov 26, 2024, 12:57 PM IST

Vaibhav Suryavanshi Age Issue: ನಿನ್ನೆ ನಡೆದ 2ನೇ ದಿನದ IPL ಹರಾಜಿನಲ್ಲಿ ಕೇವಲ 13 ವರ್ಷಕ್ಕೆ ಕೋಟಿ ರೂಪಾಯಿಗೆ ಹರಾಜಾದ ಬಿಹಾರದ ಬಾಲಕ ವೈಭವ್ ಸೂರ್ಯವಂಶಿ ವಯಸ್ಸು ಇದೀಗ ಚರ್ಚೆ ಹುಟ್ಟು ಹಾಕಿದೆ.

12ನೇ ವಯಸ್ಸಿನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದ ವೈಭವ್, 5 ಪಂದ್ಯಗಳಲ್ಲಿ 100 ರನ್ ಗಳಿಸಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಅಂಡರ್​-19 ಟೆಸ್ಟ್‌ನಲ್ಲಿ 62 ಎಸೆತಗಳಲ್ಲಿ 104 ರನ್ ಗಳಿಸಿ ಮಿಂಚಿದ್ದರು. ಅಷ್ಟೇ ಅಲ್ಲ, ಇದಕ್ಕೂ ಮುನ್ನ ರಣಧೀರ್ ವರ್ಮಾ 19 ವರ್ಷದೊಳಗಿನವರ ಏಕದಿನ ಪಂದ್ಯಾವಳಿಯಲ್ಲಿ ತ್ರಿಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು.

ಈಗ ವೈಭವ್‌ ಸೂರ್ಯವಂಶಿ ವಯಸ್ಸಿನ ಬಗ್ಗೆ ಆರೋಪಗಳು ಕೇಳಿಬಂದಿವೆ. ವೈಭವ್‌ಗೆ​ ಈಗ 15 ವರ್ಷ, 13 ವರ್ಷ ಅಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಂದೆ ಸಂಜೀವ್ ಸೂರ್ಯವಂಶಿ ಮೌನ ಮುರಿದಿದ್ದಾರೆ. ಮಗನ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಅವರು, ನಾವು ಯಾರಿಗೂ ಹೆದರವುದಿಲ್ಲ. ವೈಭವ್ ಎಂಟು ವರ್ಷದವನಿದ್ದಾಗ ಬಿಸಿಸಿಐ ಮೂಳೆ ಪರೀಕ್ಷೆ ಮಾಡಿತ್ತು. ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಲು ನಾವು ಸಿದ್ಧ ಎಂದು ಹೇಳಿದ್ದಾರೆ.

ನನ್ನ ಮಗ ತುಂಬಾ ಕಷ್ಟಪಟ್ಟಿದ್ದಾನೆ. 8ನೇ ವಯಸ್ಸಿನಲ್ಲಿ 16 ವರ್ಷದೊಳಗಿನ ಜಿಲ್ಲಾ ಟ್ರಯಲ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದ. ನಾನು ಪ್ರತೀದಿನ ಸಮಸ್ತಿಪುರದ ಕ್ರಿಕೆಟ್ ಅಕಾಡೆಮಿಗೆ ಕರೆದುಕೊಂಡು ಹೋಗುತ್ತಿದ್ದೆ. ಆತ ಉತ್ತಮ ಕ್ರಿಕೆಟಿಗನಾಗಲು ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ನನ್ನ ಜಮೀನು ಸಹ ಮಾರಿದ್ದೇನೆ. ನನಗೆ ಇನ್ನೂ ಆರ್ಥಿಕ ಸಂಕಷ್ಟಗಳಿವೆ. ವೈಭವ್ ಎಂಟೂವರೆ ವರ್ಷದವನಿದ್ದಾಗ ಮೊದಲ ಬಾರಿಗೆ ಬಿಸಿಸಿಐ ಮೂಳೆ ಪರೀಕ್ಷೆಗೆ ಹಾಜರಾಗಿದ್ದ. ಈಗಾಗಲೇ ಭಾರತ ಅಂಡರ್-19 ತಂಡದಲ್ಲಿ ಆಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಹರಾಜಿಗೂ ಮುನ್ನ ನಾಗ್ಪುರದಲ್ಲಿ ರಾಜಸ್ಥಾನ ನಡೆಸಿದ ಟ್ರಯಲ್ಸ್‌ನಲ್ಲಿ ಸೂರ್ಯವಂಶಿ ಭಾಗವಹಿಸಿದ್ದರು. ಆರ್‌ಆರ್‌ ತಂಡದವರು ಅವರನ್ನು ಟ್ರಯಲ್ಸ್‌ಗೆ ನಾಗ್ಪುರಕ್ಕೆ ಕರೆಸಿಕೊಂಡಿದ್ದರು. ವಿಕ್ರಮ್ ರಾಥೋಡ್ (ಬ್ಯಾಟಿಂಗ್ ಕೋಚ್) ಅವರು ಒಂದು ಓವರ್‌ನಲ್ಲಿ 17 ರನ್ ಗಳಿಸಲು ಸೂಚಿಸಿದ್ದರು. ವೈಭವ್ ಮೂರು ಸಿಕ್ಸರ್‌ಗಳನ್ನು ಹೊಡೆದಿದ್ದರು. ಟ್ರಯಲ್ಸ್‌ನಲ್ಲಿ ಎಂಟು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಗಳಿಸಿದ್ದರು ಎಂದು ಸಂಜೀವ್ ಸೂರ್ಯವಂಶಿ ಹೇಳಿದ್ದಾರೆ.

ಮೂಲ ಬೆಲೆ 30 ಲಕ್ಷ ರೂ. ಇದ್ದ ವೈಭವ್ ಅವರನ್ನು ರಾಜಸ್ಥಾನ್ ರಾಯಲ್ಸ್ 1.10 ಕೋಟಿ ರೂ.ಗೆ ಬಿಡ್​ ಮಾಡಿ ಖರೀದಿಸಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: 13ರ ಬಾಲಕ ವೈಭವ್ ಸೂರ್ಯವಂಶಿಗೆ ₹1.10 ಕೋಟಿ ಕೊಟ್ಟು ಖರೀದಿಸಿದ ರಾಜಸ್ಥಾನ್ ರಾಯಲ್ಸ್‌!

Last Updated : Nov 26, 2024, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.