ETV Bharat / bharat

ಫ್ಯಾಕ್ಟ್​ ಚೆಕ್​: ಸಂಭಾಲ್‌ನ ಹಿಂಸಾಚಾರ ಎಂಬುದಾಗಿ ವಿಡಿಯೋ ವೈರಲ್​: ಇಲ್ಲಿದೆ ಅಸಲಿ ಕಥೆ

ಇತ್ತೀಚಿಗೆ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರ ಎಂಬುದಾಗಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ. ಫ್ಯಾಕ್ಟ್​ ಚೆಕ್ ಈ ವಿಡಿಯೋದ ಅಸಲಿಯತ್ತು ಬಯಲಾಗಿದೆ. ಈ ಕುರಿತ ವರದಿ ಇಲ್ಲಿದೆ.

ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಗಳ ವಿಡಿಯೋ ತುಣುಕು
ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಗಳ ವಿಡಿಯೋ ತುಣುಕು (X/Modified by Logically Facts)
author img

By ETV Bharat Karnataka Team

Published : 2 hours ago

ಹೈದರಾಬಾದ್​: 2019ರಲ್ಲಿ ಗೋರಖ್‌ಪುರದಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆಗಳ ವಿಡಿಯೋವನ್ನು ಇತ್ತೀಚಿಗೆ ಸಂಭಾಲ್‌ನಲ್ಲಿ ನಡೆದ ಹಿಂಸಾಚಾರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ವಿಡಿಯೋಗೆ ಮತ್ತು ಇತ್ತೀಚಿಗೆ ಸಂಭಾಲ್‌ ನಡೆದ ಹಿಂಸಾಚಾರಕ್ಕೆ ಯಾವುದೇ ಸಂಬಂಧವಿಲ್ಲ.

ವೈರಲ್​ ವಿಡಿಯೋದಲ್ಲಿ ಇರುವುದೇನು?: ಪ್ರತಿಭಟನಾಕಾರರನ್ನು ಪೊಲೀಸರು ಬೆನ್ನಟ್ಟಿ ಥಳಿಸುತ್ತಿರುವುದನ್ನು ತೋರಿಸುವ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿನ ದೃಶ್ಯಗಳನ್ನು ಸಂಭಾಲ್ ನಗರದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮ ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ಸಂಭಾಲ್​ನಲ್ಲಿ ಪ್ರತಿಭಟನಾಕಾರರ ವಿರುದ್ಧ ಯುಪಿ ಪೊಲೀಸರು ಕೈಗೊಂಡ ಕ್ರಮ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗಲಭೆಕೋರರ ವಿರುದ್ಧದ ಪೊಲೀಸ್​​ ಈ ಕ್ರಮವನ್ನು ನೀವು ಬೆಂಬಲಿಸಿದರೆ ರೀಪೋಸ್ಟ್ ಮಾಡಿ. ಇದರ ಇಂತಹದ್ದೇ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿವೆ ಎಂದು ಪೋಸ್ಟ್​ ಹಾಕಿದ್ದಾರೆ.

ಫ್ಯಾಕ್ಟ್​ ಚೆಕ್ ಸ್ಕ್ರೀನ್‌ಶಾಟ್‌ಗಳು
ಫ್ಯಾಕ್ಟ್​ ಚೆಕ್ ಸ್ಕ್ರೀನ್‌ಶಾಟ್‌ಗಳು (X/Modified by Logically Facts)

ನವೆಂಬರ್ 24 ರಂದು ಸಂಭಾಲ್​ನಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯ ನಂತರ ಈ ವಿಡಿಯೋ ವೈರಲ್ ಆಗಲು ಪ್ರಾರಂಭಿಸಿತು. ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಗಾಗಿ ಸಮೀಕ್ಷಾ ತಂಡವು ಶಾಹಿ ಜಾಮಾ ಮಸೀದಿಗೆ ಆಗಮಿಸಿದ ನಂತರ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದರು ಮತ್ತು ಸುಮಾರು 20 ಮಂದಿ ಪೊಲೀಸರಿಗೆ ಗಾಯಗಳಾಗಿದ್ದವು.

ಸದ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿನ ದೃಶ್ಯವನ್ನು ಗೋರಖ್‌ಪುರದಲ್ಲಿ 2019ರಲ್ಲಿ ಸಿಎಎ ವಿರೋಧಿ ನಡೆದ ಪ್ರತಿಭಟನೆ ವೇಳೆ ಸೆರೆ ಹಿಡಿದಿರುವುದಾಗಿ ನಮ್ಮ ತನಿಖೆಯಿಂದ ತಿಳಿದು ಬಂದಿದೆ.

ಸತ್ಯ ಏನು?: ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ ಇದರಲ್ಲಿನ ತುಣುಕುಗಳನ್ನು ಹಲವು ಬಳಕೆದಾರರೇ ಸೃಷ್ಟಿಸಿರುವುದು ಗೊತ್ತಾಗಿದೆ. ಅಂತಿಮವಾಗಿ ಈ ವಿಡಿಯೋದಲ್ಲಿನ ದೃಶ್ಯ 2019ರ ಡಿಸೆಂಬರ್​ನಲ್ಲಿ ಗೋರಖ್‌ಪುರದಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯದ್ದು ಎಂದು ಸ್ಪಷ್ಟವಾಗುತ್ತದೆ.

ಅಂತಹ ಒಂದು ವಿಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) '@imMAK02' ಎಂಬ ಸಾಮಾಜಿಕ ಮಾಧ್ಯಮ ಎಕ್ಸ್​ ಬಳಕೆದಾರ 2019 ಡಿಸೆಂಬರ್ 31 ರಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಉತ್ತರ ಪ್ರದೇಶದ ಗೋರಖ್‌ಪುರದ್ದು, ಯುಪಿ ಪೊಲೀಸರು ನಿರಾಯುಧ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರೂರವಾಗಿ ಬಲ ಪ್ರಯೋಗ ಮಾಡುತ್ತಿದ್ದಾರೆ ಎಂದು ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ.

ಹಳೇ ವಿಡಿಯೋದಲ್ಲಿ ರಸ್ತೆ ಮತ್ತು ಅಂಗಡಿಗಳ ಪಕ್ಕದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಥಳಿಸುವ ದೃಶ್ಯಗಳು ಮತ್ತು ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿಯೂ ಕಾಣುತ್ತಿರುವ ದೃಶ್ಯಗಳು ಒಂದೇ ಆಗಿದೆ. ಇದರಿಂದ ಈ ವಿಡಿಯೋ ಸಂಭಾಲ್‌ನಲ್ಲಿನ ಇತ್ತೀಚಿನ ಘಟನೆಗೆ ಸಂಬಂಧಿಸಿದ್ದಲ್ಲ ಎಂದು ಖಚಿತವಾಗುತ್ತದೆ.

ವಿಡಿಯೋ ಹೋಲಿಕೆ ಸ್ಕ್ರೀನ್‌ಶಾಟ್‌ಗಳು
ವಿಡಿಯೋ ಹೋಲಿಕೆ ಸ್ಕ್ರೀನ್‌ಶಾಟ್‌ಗಳು (X/Modified by Logically Facts)

2020 ಜನವರಿ 25 ರಂದು ಫೇಸ್‌ಬುಕ್‌ನಲ್ಲಿ "ಜಡ್ಜ್ ಅಡ್ವೊಕೇಟ್ಸ್ ಪಿಡಿಟ್ ಆರ್ಗನೈಸೇಶನ್ - ಜೆಎಪಿಒ" ಹಂಚಿಕೊಂಡ ಮತ್ತೊಂದು ವಿಡಿಯೋದ (ಇಲ್ಲಿ ಆರ್ಕೈವ್ ಮಾಡಲಾಗಿದೆ) ದೃಶ್ಯಗಳು ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯದ್ದು ಎಂದು ಗುರುತಿಸಲಾಗಿದೆ.

ಒಂದೇ ದೃಶ್ಯಗಳು ಈಟಿವಿ ಭಾರತ ಮತ್ತು ಯುಪಿ ತಕ್ ಸೇರಿದಂತೆ ಅನೇಕ ಮಾಧ್ಯಮಗಳ ವಿಭಿನ್ನ ಕೋನಗಳಿಂದ ಸೆರೆಹಿಡಿದಿರುವುದು ಪತ್ತೆಯಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ).

ಈ ಹಳೇ ವಿಡಿಯೋದ ಕ್ಲಿಪ್‌ಗಳು ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಕ್ಲಿಪ್‌ನೊಂದಿಗೆ ಹೋಲಿಕೆಯಾಗುತ್ತಿದೆ. ಈ ಎರಡು ವಿಡಿಯೋದಲ್ಲಿನ ದೃಶ್ಯದಲ್ಲಿ ನೀಲಿ ಬಣ್ಣದ ಶೆಲ್ಟರ್ ಮತ್ತು ಕೆಂಪು ಬಣ್ಣ ಬಳಿದಿರುವ ಗೋಡೆ ಮೇಲೆ ಬಿಳಿ ಬಣ್ಣದಿಂದ ಹೆಸರು ಬರೆಯಲಾದ ಅಂಗಡಿ ಒಳಗೊಂಡ ಕಟ್ಟಡ ಮತ್ತು ಕಟ್ಟಡದ ಮುಂದೆ ತಿರುವು ಇರುವುದು ಸ್ಪಷ್ಟವಾಗಿ ಕಾಣುತ್ತದೆ.

ಹೆಚ್ಚಿನ ಸಂಶೋಧನೆಯಲ್ಲಿ, ಈ ಸ್ಥಳವನ್ನು ಉತ್ತರ ಪ್ರದೇಶದ ಗೋರಖ್‌ಪುರದ ನಖಾಸ್ ರಸ್ತೆ ಎಂದು ಗುರುತಿಸಿದೆ. ಜೊತೆ ಮಾ ವೈಷ್ಣೋ ಸ್ಟೇಷನರ್ಸ್, ಇತರ ಕಟ್ಟಡಗಳು, ವಿದ್ಯುತ್ ಕಂಬ ಮತ್ತು ಮಂಗಳಾ ವೆಡ್ಡಿಂಗ್ ಕಲೆಕ್ಷನ್ ಬ್ಯಾನರ್, ನೀಲಿ ಶೆಲ್ಟರ್​ ಅಂಗಡಿ, ರಸ್ತೆ ತಿರುವು ಈ ಎರಡು ವಿಡಿಯೋಗಳಲ್ಲಿನ ದೃಶ್ಯಗಳಿಗೆ ಹೊಂದಿಕೆಯಾಗಿದೆ.

ಅಂತಿಮವಾಗಿ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿರುವ ವಿಡಿಯೋ ಗೋರಖ್‌ಪುರದ ಸಿಎಎ ವಿರೋಧಿ ಪ್ರತಿಭಟನೆಯದ್ದಾಗಿದ್ದು, ಈ ವಿಡಿಯೋಗೂ ಸಂಭಾಲ್​ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೂ ಸಂಬಂಧಿಸಿಲ್ಲ ಎಂಬುದು ಸ್ಪಷ್ಟ.

ಇದನ್ನೂ ಓದಿ: ಸಂಭಾಲ್​ನಲ್ಲಿ ಜನಜೀವನ ಸಹಜ ಸ್ಥಿತಿಗೆ: ಶಾಲೆ ಪುನಾರಂಭ, ಇಂಟರ್​ನೆಟ್​ ಈಗಲೂ ಬಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.