Jasprit Bumrah And Pat Cummins Test Stats: ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಆಡಲು ಟೀಂ ಇಂಡಿಯಾ ಈ ತಿಂಗಳು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಉಭಯ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ (Test Series) ಇದೇ ತಿಂಗಳು ಅಂದರೆ ನ.22ರಿಂದ ಆರಂಭವಾಗಲಿದೆ. ಈಗಾಗಲೇ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಕೈಚೆಲ್ಲಿರುವ ಭಾರತ ಇದೀಗ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಗೆದ್ದು ಕಮ್ಬ್ಯಾಕ್ ಮಾಡಲು ಹವಣಿಸುತ್ತಿದೆ.
ಆಸ್ಟ್ರೇಲಿಯಾ ಪಿಚ್ಗಳು ವೇಗದ ಬೌಲಿಂಗ್ಗೆ ಹೆಚ್ಚು ಸಹಾಯಕವಾಗಿರುವ ಕಾರಣ ಟೀಂ ಇಂಡಿಯಾ ಬುಮ್ರಾ, ಆಕಾಶ್ದೀಪ್, ಸಿರಾಜ್ ಅವರಂತಹ ವೇಗದ ಬೌಲರ್ಗಳೊಂದಿಗೆ ಸರಣಿ ಆಡಲು ಯೋಜಿಸಿದೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಕೂಡ ಪ್ಯಾಟ್ ಕಮಿನ್ಸ್ ಮತ್ತು ಸ್ಟಾರ್ಕ್ ಅವರಂತಹ ವೇಗದ ಬೌಲರ್‌ನೊಂದಿಗೆ ಟೀಂ ಇಂಡಿಯಾವನ್ನು ಕಟ್ಟಿಹಾಕಲು ಯೋಜನೆ ರೂಪಿಸಿಕೊಂಡಿದೆ. ಅದರಲ್ಲೂ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಪ್ಯಾಟ್ ಕಮಿನ್ಸ್ (Pat Cummins) ಈ ಸರಣಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಟಗಾರರಾಗಿದ್ದಾರೆ.
ಬುಮ್ರಾ vs ಕಮಿನ್ಸ್- 40 ಟೆಸ್ಟ್ ಪಂದ್ಯಗಳ ಅಂಕಿಅಂಶ:
ಜಸ್ಪ್ರೀತ್ ಬುಮ್ರಾ:ಜಸ್ಪ್ರೀತ್ ಬುಮ್ರಾ ಕಳೆದ 40 ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರಿದ್ದಾರೆ. ತಮ್ಮ ಮಾರಕ ಬೌಲಿಂಗ್ನಿಂದ ಕಳೆದ ನಲವತ್ತು ಪಂದ್ಯಗಳಲ್ಲಿ 173 ವಿಕೆಟ್ಗಳನ್ನು ಉರುಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 20.57.