ನವದೆಹಲಿ: ಇಂದು ಐಪಿಎಲ್ 2024ರ 62ನೇ ಪಂದ್ಯ ಕೋಲ್ಕತ್ತಾ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. KKR ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಗುಜರಾತ್ ಇನ್ನೂ ಉಸಿರು ಬಿಗಿ ಹಿಡಿದುಕೊಂಡಿದೆ. ಪ್ಲೇಆಫ್‌ಗೆ ಅರ್ಹತೆ ಇತರ ತಂಡಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಅದಕ್ಕೂ ಮುನ್ನ ಅವರು ತಮ್ಮ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕು.
ಎರಡೂ ತಂಡಗಳ ಪ್ರದರ್ಶನ: ಈ ಬಾರಿಯ ಐಪಿಎಲ್‌ನಲ್ಲಿ ಉಭಯ ತಂಡಗಳ ಪ್ರದರ್ಶನದ ಬಗ್ಗೆ ಮಾತನಾಡೋದಾದರೆ, ಕೋಲ್ಕತ್ತಾ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಕೆಕೆಆರ್ 12 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಪ್ಲೇ ಆಫ್‌ಗೆ ಅರ್ಹತೆ ಪಡೆದಿದೆ. ಆದರೆ ಗುಜರಾತ್ ಇದುವರೆಗೆ 12 ಪಂದ್ಯಗಳಲ್ಲಿ 5 ಗೆದ್ದಿದೆ. ಅವರು ಈ ಪಂದ್ಯವನ್ನು ಗೆದ್ದು ತನ್ನ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬಯಸುತ್ತಿದ್ದಾರೆ.
GT vs KKR ಹೆಡ್ ಟು ಹೆಡ್:ಕೋಲ್ಕತ್ತಾ ಮತ್ತು ಗುಜರಾತ್ ನಡುವೆ ನಡೆದ ಪಂದ್ಯಗಳ ಬಗ್ಗೆ ಹೇಳುವುದಾದರೆ, ಇದುವರೆಗೆ ಎರಡು ತಂಡಗಳ ನಡುವೆ ಗುಜರಾತ್ ಮೇಲುಗೈ ಸಾಧಿಸಿದೆ. ಇದರಲ್ಲಿ ಗುಜರಾತ್ 2 ಗೆದ್ದಿದೆ ಮತ್ತು ಕೋಲ್ಕತ್ತಾ ಒಂದು ಪಂದ್ಯವನ್ನು ಗೆದ್ದಿದೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಕೋಲ್ಕತ್ತಾ ಈ ದಾಖಲೆ ಸರಿಗಟ್ಟಲು ಬಯಸಿದೆ. ಈ ಪಂದ್ಯದಲ್ಲಿ ಕೋಲ್ಕತ್ತಾ ಗೆದ್ದರೆ ಅಗ್ರ 2ರಲ್ಲಿ ಸ್ಥಾನ ಖಚಿತಗೊಳ್ಳಲಿದೆ.
ಪಿಚ್ ವರದಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಉತ್ತಮ ಎಂದು ಪರಿಗಣಿಸಲಾಗಿದೆ. ಈ ಪಂದ್ಯವನ್ನು ಹೆಚ್ಚಿನ ಸ್ಕೋರಿಂಗ್‌ನೊಂದಿಗೆ ನೋಡಬಹುದು. ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗುಜರಾತ್ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಗಿಲ್ ಹಾಗೂ ಸಾಯಿ ಸುದರ್ಶನ್ ತಲಾ ಶತಕ ಸಿಡಿಸಿದ್ದರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 196 ರನ್ ಗಳಿಸಲಷ್ಟೇ ಶಕ್ತವಾಗಿತ್ತು.