ಕರ್ನಾಟಕ

karnataka

ETV Bharat / sports

ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಟೀಂ ಇಂಡಿಯಾ​: ಟಿ20 ವಿಶ್ವಕಪ್​ನಿಂದಲೂ ದೂರ! - BLIND T20 WORLD CUP

ಪಾಕಿಸ್ತಾನದಲ್ಲಿ ಆಯೋಜನೆ ಗೊಂಡಿರುವ ಅಂಧರ ಟಿ20 ವಿಶ್ವಕಪ್​ನಿಂದ ಭಾರತ ತಂಡ ಹಿಂದೆ ಸರಿದಿದೆ. ​

ಅಂಧರ ಟಿ20 ವಿಶ್ವಕಪ್​
ಅಂಧರ ಟಿ20 ವಿಶ್ವಕಪ್​ (IANS)

By ETV Bharat Sports Team

Published : Nov 21, 2024, 7:39 AM IST

Blind T20 World Cup:ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟು ಸುಮಾರು ವರ್ಷಗಳೆ ಕಳೆದಿವೆ. ಇದರ ಪರಿಣಾಮ ಕ್ರಿಕೆಟ್​ ಮೇಲೂ ಬೀರಿದೆ. 2008ರ ಏಷ್ಯಾಕಪ್​ ಬಳಿಕ ಪಾಕಿಸ್ತಾನದಲ್ಲಿ ನಡೆದ ಯಾವುದೇ ಪಂದ್ಯಾವಳಿಗಳಲ್ಲಿ ಟೀಂ ಇಂಡಿಯಾ ಒಮ್ಮೆಯೂ ಭಾಗಿಯಾಗಿಲ್ಲ. ಅಲ್ಲದೇ ಪಾಕ್​ ಆತಿಥ್ಯ ವಹಿಸಿಕೊಳ್ಳಲಿರುವ 2025ರ ಚಾಂಪಿಯನ್ಸ್​ ಟ್ರೋಫಿ ಸೇರಿ ಯಾವುದೇ ಟೂರ್ನಿಗಳನ್ನು ಆಡಲು ಟೀಂ ಇಂಡಿಯಾ ಅಲ್ಲಿಗೆ ತೆರಳಲ್ಲ ಎಂದೂ ಈಗಾಗಲೇ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI) ಸ್ಪಷ್ಟನೆ ನೀಡಿದೆ. ಇದೀಗ ಪಾಕ್​ಗೆ ಮತ್ತೊಂದು ಶಾಕ್​ ನೀಡಿದೆ.

ಹೌದು, ಇದೇ ತಿಂಗಳು ನವೆಂಬರ್ 23 ರಿಂದ ಡಿಸೆಂಬರ್ 3 ರವರೆಗೆ ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್​ ನಡೆಯಲಿದೆ. ಕಳೆದ ಟಿ20ಯಲ್ಲಿ ವಿಶ್ವಚಾಂಪಿಯನ್​ ಆಗಿದ್ದ ಅಂಧರ ಟೀಂ ಇಂಡಿಯಾ ಈ ಬಾರಿಯೂ ಕಪ್​ ಎತ್ತಿ ಹಿಡಿಯುವ ಫೆವರೀಟ್​ ತಂಡವಾಗಿತ್ತು. ಆದರೆ ಪಾಕ್​​ನಲ್ಲಿ ವಿಶ್ವಕಪ್​ ಆಯೋಜಿಸಿದ್ದರಿಂದ ವಿದೇಶಾಂಗ ಸಚಿವಾಲಯ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಪಾಕ್​ಗೆ ಕಳುಹಿಸಲು ನಿರಾಕರಿಸಿದೆ. ಈ ಹಿನ್ನೆಲೆ ಭಾರತ ತಂಡ ಟೂರ್ನಿಯಿಂದಲೇ ಹಿಂದೆ ಸರಿದಿದೆ.

ಈ ಮೊದಲ ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿತ್ತು. ಆದರೆ ಭದ್ರತ ದೃಷ್ಟಿಯಿಂದಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಭಾರತ ತಂಡವನ್ನು ಅಲ್ಲಿಗೆ ಕಳುಹಿಸಲು ನಿರಾಕರಿದೆ. ಈ ಬಗ್ಗೆ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಈ ಬಾರಿ ಭಾರತ ತಂಡವಿಲ್ಲದೆ ಅಂಧರ ವಿಶ್ವಕಪ್​ ಟೂರ್ನಿ ನಡೆಯಲಿದೆ.

3 ಬಾರಿ ಚಾಂಪಿಯನ್​: ಭಾರತದಲ್ಲಿ ನಡೆದ ಹಿಂದಿನ ಮೂರು ಆವೃತ್ತಿಗಳಲ್ಲಿ (2012, 2017 ಮತ್ತು 2022) ಅಂಧರ T20 ವಿಶ್ವಕಪ್‌ನಲ್ಲಿ ಭಾರತವು ವಿಜಯಶಾಲಿಯಾಗಿ ಹೊರಹೊಮ್ಮಿತ್ತು. ಭಾರತ ಮೊದಲ ಎರಡು ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು ಮತ್ತು 2022ರಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್​ ಆಗಿತ್ತು.

ಏತನ್ಮಧ್ಯೆ, ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೂ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಆದರೆ, ತಮ್ಮ ತಂಡ ನೆರೆಯ ದೇಶಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಈಗಾಗಲೇ ಐಸಿಸಿಗೆ ತಿಳಿಸಿದೆ. ಅಲ್ಲದೇ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ತಿಳಿಸಿದೆ. ಆದರೆ ಪಾಕ್ ಮಂಡಳಿ ಇದಕ್ಕೆ ಒಪ್ಪುತ್ತಿಲ್ಲ. ಇದರ ನಡುವೆಯೇ ಅಂಧರ ವಿಶ್ವಕಪ್ ನಿಂದ ಭಾರತ ಹಿಂದೆ ಸರಿದಿದ್ದು, ಒಂದು ವೇಳೆ ಪಾಕ್​ ಹೈಬ್ರಿಡ್​ ಮಾದರಿಗೆ ಒಪ್ಪಿಗೆ ಸೂಚಿಸದಿದ್ದರೇ ಚಾಂಪಿಯನ್ಸ್​ ಟ್ರೋಫಿಯಿಂದಲೂ ಹಿಂದೆ ಸರಿಯುವುದಾಗಿ ಬಿಸಿಸಿಐ ಸ್ಪಷ್ಟ ಸಂದೇಶ ರವಾನಿಸಿದೆ.

ಇದನ್ನೂ ಓದಿ:ಬಾರ್ಡರ್ - ಗವಾಸ್ಕರ್ ಟ್ರೋಫಿಯನ್ನು ಆಶಸ್​ಗೆ ಹೋಲಿಸಿದ ರಿಕಿ ಪಾಂಟಿಂಗ್

ABOUT THE AUTHOR

...view details