ನವದೆಹಲಿ:ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ಪೈಕಿ ಇಂದು (ಶನಿವಾರ) ನಾಲ್ಕನೇ ಪಂದ್ಯವನ್ನು ಆಡಲಿದೆ. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದೀಗ ಭಾರತ ತಂಡವು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯವನ್ನು ಜಯ ಗಳಿಸುವ ಮೂಲಕ ಸರಣಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 4.30ಕ್ಕೆ ನಡೆಯಲಿದೆ.
ಉಭಯ ತಂಡಗಳ ಟಿ-20 ಸರಣಿ:ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 13 ರನ್‌ಗಳಿಂದ ಸೋತಿತ್ತು. ಇದಾದ ನಂತರ ಭಾರತ ಎರಡನೇ ಪಂದ್ಯದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿತ್ತು. ಜಿಂಬಾಬ್ವೆಯನ್ನು 100 ರನ್‌ಗಳಿಂದ ಸೋಲಿಸಿತ್ತು. ಸರಣಿಯ ಮೂರನೇ ಪಂದ್ಯದಲ್ಲಿ 182 ರನ್‌ಗಳನ್ನು ಗಳಿಸುವ ಮೂಲಕ ಭಾರತವು ಜಿಂಬಾಬ್ವೆಯನ್ನು 23 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಇದೀಗ ಭಾರತ ತಂಡಕ್ಕೆ ನಾಲ್ಕನೇ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಅವಕಾಶವಿದೆ.
ಭಾರತ- ಜಿಂಬಾಬ್ವೆ 11 ಟಿ20 ಪಂದ್ಯ:ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 11 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದಿದೆ. ಆದರೆ, ಜಿಂಬಾಬ್ವೆ 3 ಪಂದ್ಯಗಳಲ್ಲಿ ಗೆದ್ದಿದೆ. ಉಳಿದ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ, ಜಿಂಬಾಬ್ವೆಯನ್ನು ಲಘುವಾಗಿ ಪರಿಗಣಿಸುವುದು ತುಂಬಾ ಕಷ್ಟ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದನ್ನು ಮರೆಯುವಂತಿಲ್ಲ.
ಹರಾರೆ ಸ್ಟೇಡಿಯಂ ಪಿಚ್ ವರದಿ:ಹರಾರೆ ಪಿಚ್ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಗೆ ಸಹಾಯಕವಾಗಿದೆ. ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ಸ್ಕೋರ್ ಹೊಂದಿಸುವುದು ಬಹಳ ಮುಖ್ಯ. ಇಲ್ಲಿ ವೇಗದ ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಮತ್ತು ಸ್ಪಿನ್ನರ್‌ಗಳು ಹಳೆಯ ಚೆಂಡಿನೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ. ಈ ಫಿಚ್ನಲ್ಲಿ ಒಮ್ಮೆ ಬ್ಯಾಟ್ಸ್‌ಮನ್‌ಗಳನ್ನು ಸೆಟ್ ಆದರೆ, ದೊಡ್ಡ ಇನ್ನಿಂಗ್ಸ್‌ಗಳನ್ನು ಆಡುತ್ತಾರೆ. ಈ ಪಿಚ್‌ನಲ್ಲಿ ಭಾರತ ಎರಡನೇ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 234 ರನ್ ಗಳಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಪಂದ್ಯ ಕೂಡ ಹೆಚ್ಚಿನ ಸ್ಕೋರಿಂಗ್ ಆಗುವ ನಿರೀಕ್ಷೆ ಇದೆ.