Ind vs Pak: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಮಹಾಯುದ್ಧ ನಡೆಯಲಿದೆ.
2017ರ ಬಳಿಕ ಇದೇ ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿ ಆಗುತ್ತಿವೆ. ಈಗಾಗಲೇ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡೆದಿರುವ ಟೀಂ ಇಂಡಿಯಾ, ಇದೀಗ ಪಾಕ್ಗೆ ಸೋಲಿನ ರುಚಿ ತೋರಿಸಲು ಭರ್ಜರಿ ತಯಾರಿ ನಡೆಸಿದೆ. ಈ ಮೆಘಾ ಫೈಟ್ ಪಂದ್ಯಕ್ಕೆ ದುಬೈನಲ್ಲಿ ಅಖಾಡ ಸಿದ್ಧಗೊಂಡಿದೆ. ಪಾಕಿಸ್ತಾನ ಕೂಡ ದುಬೈಗೆ ತಲುಪಿದ್ದು, ಅಭ್ಯಾಸ ಪ್ರಾರಂಭಿಸಿದೆ.
ಮತ್ತೊಂದೆಡೆ ಎರಡನೇ ಪಂದ್ಯ ಭಾರತದ ಪಾಲಿಗೆ ಮಹತ್ವದಾಗಿದ್ದು ಗೆಲ್ಲಲೇಬೇಕೆಂಬ ಪಣತೊಟ್ಟಿದೆ. ಈ ಹಿನ್ನೆಲೆ ಮೊದಲ ಪಂದ್ಯದಲ್ಲಿ ಆಡಿರುವ ಬುಹುತೇಕ ಆಟಗಾರರೊಂದಿಗೆ ಇಂದು ಅಖಾಡಕ್ಕಿಳಿಯಲಿದೆ. ಆದರೆ ಕುಲ್ದೀಪ್ ಯಾದವ್ ಮಾತ್ರ ಹೊರಗುಳಿಯುವ ಸಾಧ್ಯತೆ ಇದೆ. ಕಾರಣ ಮೊದಲ ಪಂದ್ಯದಲ್ಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಆಡುವ ಸಾಧ್ಯತೆ ಇದೆ.
ಸೇಡು ತೀರಿಸಿಕೊಳ್ಳಲು ಭಾರತ ಸಜ್ಜು :ಏತನ್ಮಧ್ಯೆ, ಈ ಪಂದ್ಯ ಗೆಲ್ಲುವ ಮೂಲಕ ಪಾಕ್ ವಿರುದ್ಧ ಭಾರತ ಹಳೆ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೌದು ಈ ಹಿಂದೆ 2017ರಲ್ಲಿ ಇಂಗ್ಲೆಂಡ್ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದಿತ್ತು. ಈ ಟೂರ್ನಿಯ 4ನೇ ಪಂದ್ಯದಲ್ಲಿ ಭಾರತ ಪಾಕ್ ವಿರುದ್ಧ 124 ರನ್ಗಳಿಂದ ಗೆಲುವು ಸಾಧಿಸಿತ್ತು. ಅಲ್ಲದೆ ಒಟ್ಟು ಮೂರು ಪಂದ್ಯಗಳಲ್ಲಿ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ ಪಾಕ್ ಕೂಡ ಫೈನಲ್ಗೆ ಪ್ರವೇಶ ಪಡೆದಿತ್ತು.