ಕರ್ನಾಟಕ

karnataka

ಅಂಡರ್ 19 ವಿಶ್ವಕಪ್ ಫೈನಲ್​: ಭಾರತದ ವಿರುದ್ಧ ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌

By PTI

Published : Feb 11, 2024, 1:35 PM IST

ಅಂಡರ್-19 ವಿಶ್ವಕಪ್ ಕ್ರಿಕೆಟ್ ಟೂರ್ನಿ ಕೊನೆಯ ಘಟ್ಟ ತಲುಪಿದೆ. ಆಲ್‌ರೌಂಡ್ ಪ್ರದರ್ಶನದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿರುವ ಭಾರತ ಇಂದು ಆಸ್ಟ್ರೇಲಿಯಾ ಜೊತೆ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿದೆ.

ICC Under 19 World Cup 2024  World Cup final  India U19 vs Australia U19  ಅಂಡರ್ 19 ವಿಶ್ವಕಪ್ ಫೈನಲ್  ಯುವ ಭಾರತ
ಅಂಡರ್ 19 ವಿಶ್ವಕಪ್ ಫೈನಲ್

ಬೆನೋನಿ(ದಕ್ಷಿಣ ಆಫ್ರಿಕಾ):ನವೆಂಬರ್ 19, 2023. ದೇಶದ ಜನತೆಗೆ ನಿರಾಸೆ ಉಂಟುಮಾಡಿದ ದಿನ. ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ (ಸೀನಿಯರ್ ವಿಭಾಗ) ಟೀಂ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ ಕೋಟ್ಯಂತರ ಭಾರತೀಯರ ಕನಸುಗಳನ್ನು ಭಗ್ನಗೊಳಿಸಿತ್ತು. ಇಂದು ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ಆರಂಭವಾಗಿದ್ದು, ಭಾರತದ ವಿರುದ್ಧ ಟಾಸ್​ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ಆಯ್ದುಕೊಂಡಿದೆ.

ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸವಾಲಿನ ವಿರುದ್ಧ ಭಾರತ ರೋಚಕ ಗೆಲುವು ಸಾಧಿಸಿರುವುದು ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ. ಮತ್ತೊಂದೆಡೆ, ಆಸೀಸ್ ಸೆಮಿಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈಗಾಗಲೇ ಟೂರ್ನಿಯ ಇತಿಹಾಸದಲ್ಲಿ ಭಾರತ ಎರಡು ಬಾರಿ (2012, 2018) ಆಸ್ಟ್ರೇಲಿಯಾವನ್ನು ಸೋಲಿಸಿ ಕಪ್ ಗೆದ್ದುಕೊಂಡಿದೆ. ಇದು ಭಾರತಕ್ಕೆ ಸತತ ಐದನೇ ಫೈನಲ್ ಆಗಿರುವುದು ಗಮನಾರ್ಹ.

ಯುವ ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಸದೃಢವಾಗಿ ಕಾಣುತ್ತಿದೆ. ತಂಡ ಉತ್ತಮ ಬ್ಯಾಟ್ಸ್‌ಮನ್‌ಗಳು ಮತ್ತು ಗುಣಮಟ್ಟದ ಬೌಲರ್‌ಗಳಿಂದ ತುಂಬಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದೆ. ಗುಂಪಿನಲ್ಲಿ, ಸೂಪರ್ ಸಿಕ್ಸ್ ಹಂತ ಮತ್ತು ಸೆಮಿಸ್‌ನಲ್ಲಿ ಅಜೇಯವಾಗಿ ಫೈನಲ್ ತಲುಪಿದೆ.

ನಾಯಕ ಉದಯ್ ಸಹರಾನ್ ತಂಡ ಮುನ್ನಡೆಸುತ್ತಿದ್ದಾರೆ. ಸಚಿನ್ ದಾಸ್ ಅತ್ಯುತ್ತಮ ಫಾರ್ಮ್ ಮುಂದುವರಿಸಿದ್ದಾರೆ. ಸರ್ಫರಾಜ್ ಖಾನ್ ಸಹೋದರ ಮುಶೀರ್ ಖಾನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಉದಯ್ (389), ಮುಶೀರ್ (338) ಮತ್ತು ಸಚಿನ್ (294) ಟೂರ್ನಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಅದರಲ್ಲೂ 245 ರನ್​ಗಳ ಗುರಿ ಬೆನ್ನತ್ತಿದ್ದ ಉದಯ್ ಮತ್ತು ಸಚಿನ್ ಸೆಮಿಸ್‌ನಲ್ಲಿ 32ಕ್ಕೆ 4 ವಿಕೆಟ್ ಕಳೆದುಕೊಂಡು ಅಸಾಧಾರಣ ಹೋರಾಟ ನಡೆಸಿ ಪಂದ್ಯ ಗೆದ್ದುಕೊಂಡಿತ್ತು. ಮತ್ತೊಂದೆಡೆ ಸ್ಪಿನ್ನರ್ ಸೌಮಿ ಪಾಂಡೆ (17) ಮತ್ತು ವೇಗಿ ನಮನ್ ತಿವಾರಿ (10) ಬೌಲಿಂಗ್​ನಲ್ಲಿ ನಿರ್ಣಾಯಕರಾಗಲಿದ್ದಾರೆ.

ಬಲಿಷ್ಠ ಎದುರಾಳಿ: ಆಸ್ಟ್ರೇಲಿಯಾ ಕೂಡ ಫೈನಲ್​ನಲ್ಲಿ ಬಲಿಷ್ಠವಾಗಿದೆ. ಆ ತಂಡವೂ ಅಜೇಯವಾಗಿ ಫೈನಲ್ ತಲುಪಿದೆ. ನಾಯಕ ಹಗ್ ವಿಬ್ಜೆನ್, ಹ್ಯಾರಿ ಡಿಕ್ಸನ್, ವೇಗಿಗಳಾದ ಟಾಮ್ ಸ್ಟ್ರೇಕರ್ ಮತ್ತು ಕ್ಯಾಲಮ್ ವಿಡ್ಲರ್ ಪ್ರಮುಖ ಆಟಗಾರರು. ಬ್ಯಾಟಿಂಗ್​ನಲ್ಲಿ ವಿಬ್ಜೆನ್ (256) ಮತ್ತು ಡಿಕ್ಸನ್ (267) ಭಾರತಕ್ಕೆ ಸವಾಲಾಗಬಲ್ಲರು.

ಭಾರತ:ಆದರ್ಶ್ ಸಿಂಗ್, ಅರ್ಶಿನ್ ಕುಲಕರ್ಣಿ, ಮುಶೀರ್ ಖಾನ್, ಉದಯ್ ಸಹರನ್ (ಸಿ), ಪ್ರಿಯಾಂಶು ಮೊಲಿಯಾ, ಸಚಿನ್ ದಾಸ್, ಅರವೆಲ್ಲಿ ಅವನೀಶ್ (ವಿ.ಕೀ), ಮುರುಗನ್ ಅಭಿಷೇಕ್, ರಾಜ್ ಲಿಂಬಾನಿ, ನಮನ್ ತಿವಾರಿ, ಸೌಮಿ ಪಾಂಡೆ.

ಆಸ್ಟ್ರೇಲಿಯಾ: ಹ್ಯಾರಿ ಡಿಕ್ಸನ್, ಸ್ಯಾಮ್ ಕಾನ್ಸ್ಟಾಸ್, ಹಗ್ ವೀಬ್ಜೆನ್ (ಸಿ), ಹರ್ಜಸ್ ಸಿಂಗ್, ರಯಾನ್ ಹಿಕ್ಸ್ (ವಾಕ್), ಆಲಿವರ್ ಪೀಕ್, ಚಾರ್ಲಿ ಆಂಡರ್ಸನ್, ರಾಫ್ ಮ್ಯಾಕ್‌ಮಿಲನ್, ಟಾಮ್ ಸ್ಟ್ರಾಕರ್, ಮಾಹ್ಲಿ ಬಿಯರ್ಡ್‌ಮ್ಯಾನ್, ಕ್ಯಾಲಮ್ ವಿಡ್ಲರ್.

ಇದನ್ನೂ ಓದಿ:ಇಂದು ಭಾರತ-ಆಸ್ಟ್ರೇಲಿಯಾ U-19 ವಿಶ್ವಕಪ್ ಫೈನಲ್‌

ABOUT THE AUTHOR

...view details