ಕರ್ನಾಟಕ

karnataka

ಪ್ಯಾರಿಸ್ ಒಲಿಂಪಿಕ್ಸ್​: ನನ್ನ ರಕ್ಷಣೆಯಲ್ಲಿನ ಕೆಲ ತಪ್ಪುಗಳನ್ನು ನಿಯಂತ್ರಿಸಬೇಕಿತ್ತು - ಸೋಲಿನ ಬಳಿಕ ಸಿಂಧು ಮಾತು - PV SINDHU WHAT SAYS AFTER LOSS

By PTI

Published : Aug 2, 2024, 12:54 PM IST

ಎರಡು ಒಲಿಂಪಿಕ್ಸ್​ ಪದಕಗಳ ವಿಜೇತೆ ಪಿ.ವಿ.ಸಿಂಧು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮುಗ್ಗರಿಸಿದ್ದಾರೆ. ತಮ್ಮ ಸೋಲಿನ ಬಗ್ಗೆ ಮಾತನಾಡಿರುವ ಅವರು, ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದ್ದೆ. ಆದರೆ, ಪಂದ್ಯದಲ್ಲಿ ನನ್ನ ರಕ್ಷಣೆಯಲ್ಲಿನ ಕೆಲ ತಪ್ಪುಗಳು ನಿಯಂತ್ರಿಸಬೇಕಿತ್ತು ಎಂದು ಹೇಳಿದ್ದಾರೆ.

ಪಿ.ವಿ.ಸಿಂಧು
ಪಿ.ವಿ.ಸಿಂಧು (IANS)

ಪ್ಯಾರಿಸ್ (ಫ್ರಾನ್ಸ್): ಭಾರತದ ಬ್ಯಾಡ್ಮಿಂಟನ್ ತಾರೆ​ ಪಿ.ವಿ.ಸಿಂಧು ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ. ಕ್ರೀಡಾಕೂಟಕ್ಕೆ ತಾವು ಮಾಡಿಕೊಂಡಿದ್ದ ಸಿದ್ಧತೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ಹೊಂದಿಲ್ಲ. ಆದರೆ, ಆಟದ ವೇಳೆ ತಮ್ಮ ರಕ್ಷಣೆಯಲ್ಲಿನ ಸ್ವಲ್ಪ ತಪ್ಪುಗಳ ವಿಷಯದಲ್ಲಿ ನಿಯಂತ್ರಿಸಬೇಕಾಗಿತ್ತು. ಇದೇ ತಮ್ಮ ಸೋಲಿಗೆ ಕಾರಣವೆಂದು ಸಿಂಧು ಹೇಳಿಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಆಟಗಾರ್ತಿ ಹಿ ಬಿಂಗ್‌ಜಿಯಾವೊ ವಿರುದ್ಧ 0-2 ನೇರ ಸೆಟ್​ಗಳಿಂದ ಪಿ.ವಿ.ಸಿಂಧು ಸೋತು ನಿರಾಶೆ ಅನುಭವಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ವಿಜೇತೆಯ ಈ ಸೋಲು ಭಾರತೀಯ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

ತಮ್ಮ ಸೋಲಿನ ಬಗ್ಗೆ ಮಾತನಾಡಿರುವ ಸಿಂಧು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದ್ದರಿಂದ ನಾವು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದ್ದೇವೆ. ವಿಶ್ರಾಂತಿ ಎಂಬುವುದು ವಿಧಿ. ನಾನು ಇದಕ್ಕೆ ವಿಷಾದಿಸುವುದಿಲ್ಲ. ಪಂದ್ಯದಲ್ಲಿ ಏನಾಗಬಹುದು ಎಂದು ನಿಮಗೆ ತಿಳಿದಿರದ ಕಾರಣ ನಾನು ಇನ್ನೂ ಹೋರಾಟ ಮಾಡುತ್ತಲೇ ಇದ್ದೆ. ನಾವಿಬ್ಬರೂ (ಬಿಂಗ್‌ಜಿಯಾವೊ ಮತ್ತು ನಾನು) ಪ್ರತಿ ಪಾಯಿಂಟ್‌ಗಾಗಿ ಹೋರಾಡುತ್ತಿದ್ದೆವು. ಏಕೆಂದರೆ, ಕೊನೆಯವರೆಗೂ ನೀವು ಏನಾಗುತ್ತದೆ ನಿರೀಕ್ಷಿಸಲು ಸಾಧ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.

ಇದು ಸುಲಭದ ಗೆಲುವು ಅಥವಾ ಸುಲಭ ಪಾಯಿಂಟ್ಸ್​ ವಿಷಯವಲ್ಲ. ಮೊದಲ ಸುತ್ತಿನ ಕೆಲವು ಹಂತದಲ್ಲಿ 19-19 ಪಾಯಿಂಟ್ಸ್​ಗಳು ಆಗಿದ್ದಾಗ ಅದನ್ನು ಗೆಲುವಿಗೆ ಪರಿವರ್ತಿಸಲು ಸಾಧ್ಯವಾಗಲಿಲ್ಲ ಎಂಬುದು ದುಃಖಕರ. ನಾನು ಮೊದಲ ಸೆಟ್ ಗೆದ್ದಿದ್ದರೆ, ಬಹುಶಃ ಅದು ವಿಭಿನ್ನವಾಗಿರುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ಪ್ರಕಾರ, ಆಟ ಚೆನ್ನಾಗಿ ನಡೆಯುತ್ತಿತ್ತು. ಆದರೆ, ಒಬ್ಬರಿಗೆ ಮಾತ್ರ ಗೆಲ್ಲುವ ಅವಕಾಶ ಇರುವುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಒಲಿಂಪಿಕ್ಸ್‌ ಬಗ್ಗೆ ಸಿಂಧು ಹೇಳಿದ್ದೇನು?: ಅಮೆರಿಕದಲ್ಲಿ ನಡೆಯಲಿರುವ ಮುಂದಿನ ಒಲಿಂಪಿಕ್ಸ್‌ನಲ್ಲಿ ಆಡಲು ಪ್ರಯತ್ನಿಸುತ್ತೀರಾ ಎಂಬ ಪ್ರಶ್ನೆಗೆ ಸಿಂಧು, ಇನ್ನೂ ನಾಲ್ಕು ವರ್ಷಗಳಷ್ಟು ಸಮಯವಿದೆ. ಹಾಗಾಗಿ ಇದೀಗ ನಾನು ಇಲ್ಲಿಂದ ಹಿಂತಿರುಗಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ಬಹುಶಃ ಸ್ವಲ್ಪ ವಿರಾಮದ ನಂತರ ಏನೆಂದು ನೋಡೋಣ. ಏಕೆಂದರೆ, ನಾಲ್ಕು ವರ್ಷಗಳು ಬಹಳ ಸಮಯ ಎಂದು ಹೇಳಿದ್ದಾರೆ.

ಇದೇ ವೇಳೆ, ಇಂದಿನ ಫಲಿತಾಂಶ ದುಃಖಕರವಾಗಿದೆ. ನಾನು ನಿರೀಕ್ಷಿಸಿದ್ದನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಇದೊಂದು ಪ್ರಯಾಣ ಅಲ್ಲವೇ?, ಇಲ್ಲಿಯವರೆಗೆ ಅದ್ಭುತವಾಗಿ ಸಾಗಿದೆ. ಇದರಲ್ಲಿ ಏರಿಳಿತಗಳೂ ಇದ್ದವು. ನಾನು ಗಾಯದಿಂದ ಹಿಂತಿರುಗಿದ್ದೇನೆ. ಎಲ್ಲವೂ ಚೆನ್ನಾಗಿ ನಡೆಯುತ್ತಿವೆ. ನೀವು ಸುಲಭವಾದ ಗೆಲುವುಗಳನ್ನು ನಿರೀಕ್ಷಿಸಲಾಗುವುದಿಲ್ಲ. ಸರಿಯಾದ ಸಮಯದಲ್ಲಿ ಫಾರ್ಮ್ ಆಯ್ಕೆ ಮಾಡಿಕೊಳ್ಳಲೂ ಆಗುವುದಿಲ್ಲ. ಕೆಲವೊಮ್ಮೆ ಎಲ್ಲವೂ ನಮ್ಮ ದಿನಗಳಾಗಿರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪ್ಯಾರಿಸ್ ಒಲಿಂಪಿಕ್ಸ್: ಸಿಂಧು ಹ್ಯಾಟ್ರಿಕ್​ ಪದಕದ ಕನಸು ಭಗ್ನ, ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಆಟಗಾರ್ತಿ ವಿರುದ್ಧ ಸೋಲು

ABOUT THE AUTHOR

...view details