ಹೈದರಾಬಾದ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ಪದಕ ಗೆಲ್ಲಬಹುದಾಗಿದ್ದ ಈವೆಂಟ್ಗಳಲ್ಲಿ ಬ್ಯಾಡ್ಮಿಂಟನ್ ಕೂಡ ಒಂದಾಗಿತ್ತು. ಕಾರಣ 2012 ಲಂಡನ್ ಒಲಿಂಪಿಕ್ಸ್ನಿಂದ 2016 ರಿಯೊ ಮತ್ತು 2020 ಟೋಕಿಯೊ ಒಲಿಂಪಿಕ್ಸ್ ವರೆಗೆ ನಡೆದ ಬ್ಯಾಡ್ಮಿಂಟನ್ ಈವೆಂಟ್ಗಳಲ್ಲಿ ಭಾರತ ಸತತ ಪದಕ ಗೆದ್ದುಕೊಂಡಿತ್ತು. ಸೈನಾ ನೆಹ್ವಾಲ್ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದರೆ, ಪಿವಿ ಸಿಂಧು ರಿಯೊದಲ್ಲಿ ಬೆಳ್ಳಿ ಮತ್ತು ಟೋಕಿಯೊದಲ್ಲಿ ಕಂಚಿನ ಪದಕಗಳೊಂದಿಗೆ ಮಿಂಚಿದ್ದರು.
ಈ ಹಿನ್ನೆಲೆ ಈ ಬಾರಿಯ ಒಲಿಂಪಿಕ್ಸ್ನಲ್ಲೂ ಭಾರತ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಹೆಚ್ಚಿನ ಪದಕಗಳು ಗೆಲ್ಲಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಕಳೆದ ಎರಡು ಒಲಿಂಪಿಕ್ ಸೀಸನ್ನಲ್ಲಿ ಪದಕ ಗೆದ್ದಿದ್ದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸಿಂಧು ಈ ಬಾರಿ ಮೂರನೇ ಪದಕ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆ ಎಂದು ಹೆಚ್ಚಿನ ನಿರೀಕ್ಷೆಗಳು ಹುಟ್ಟುಕೊಂಡಿದ್ದವು ಆದ್ರೆ ಇದು ಸಾಧ್ಯವಾಗಲಿಲ್ಲ. ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವದ 9ನೇ ಶ್ರೇಯಾಂಕಿತೆ, ಚೀನಾದ ಆಟಗಾರ್ತಿ ಹೀ ಬಿಂಗ್ಜಿಯಾವೊ ವಿರುದ್ಧ ನೇರ ಸೆಟ್ಗಳಿಂದ ಸೋಲು ಕಂಡ ಸಿಂಧು ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದರು.
ಬಳಿಕ ಸಿಂಗಲ್ಸ್ನಲ್ಲಿ ಎಚ್ಎಸ್ ಪ್ರಣಯ್ ಮತ್ತು ಲಕ್ಷ್ಯಸೇನ್ ಕೂಡ ಅದ್ಬುತ ಫಾರ್ಮ್ನಲ್ಲಿದ್ದರೂ ಅಂತಿಮವಾಗಿ ಸೋಲನುಭವಿಸಿ ಯಾವುದೇ ಪದಕವಿಲ್ಲದೇ ಬರಿಗೈಯಿಂದ ಹಿಂತಿರುಗಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಡ್ಮಿಂಟನ್ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಮೇಲೂ ಪದಕ ನಿರೀಕ್ಷೆಗಳಿದ್ದರು ಅದನ್ನು ಜಯಿಸಲು ಸಾಧ್ಯವಾಗಲಿಲ್ಲ. ಕಳೆದು ಮೂರು ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಪದಕ ಪಡೆದಿದ್ದ ಭಾರತ ಬ್ಯಾಡ್ಮಿಂಟನ್ ತಾರೆಗಳು ಈ ಬಾರಿ ನಿರಾಸೆ ಮೂಡಿಸಿದ್ದಾರೆ. ಹಾಗಂತ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸೂಕ್ತವಾದ ತರಬೇತಿ ನೀಡಿಲ್ಲ ಎಂದೇನಿಲ್ಲ. ಒಲಿಂಪಿಕ್ಸ್ ತಯಾರಿಗಾಗಿ ಕೇಂದ್ರ ಸರ್ಕಾರ ಈ ಬ್ಯಾಡ್ಮಿಂಟನ್ಗಳ ಮೇಲೆ ಹೆಚ್ಚಿನ ಹಣವನ್ನೂ ವ್ಯಯಿಸಿದೆ. ಆದ್ರೂ ಪದಕ ಗೆಲ್ಲುಲ್ಲಿ ಎಡವಿದ್ದಾರೆ.
ಬ್ಯಾಡ್ಮಿಂಟನ್ಗಳಿಗೆ ಖರ್ಚಾದ ಹಣ ಎಷ್ಟು?:ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಬ್ಯಾಡ್ಮಿಂಟನ್ಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಖರ್ಚು ಮಾಡಿದೆ. ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ ಒಟ್ಟು 117 ಕ್ರೀಡಾಪಟುಗಳಿಗಾಗಿ 470 ಕೋಟಿ ರೂ. ವ್ಯಯಿಸಲಾಗಿದ್ದು ಅದರಲ್ಲಿ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೇ 72.03 ಕೋಟಿ ರೂ. ಖರ್ಚು ಮಾಡಿದೆ. ಆದರೇ ಯಾವೋಬ್ಬ ಬ್ಯಾಡ್ಮಿಂಟನ್ ತಾರೆಗಳು ಪದಕವಿಲ್ಲದೇ ಬರಿಗೈಯಲ್ಲಿ ಹಿಂತಿರುಗಿ ನಿರಾಸೆ ಮೂಡಿಸಿದ್ದಾರೆ. ಇದನ್ನೂ ಹೊರತು ಪಡಿಸಿದರೇ ಅಥ್ಲೆಟಿಕ್ಸ್ಗಾಗಿ ಬರೋಬ್ಬರಿ ರೂ. 96.08 ಕೋಟಿ ವ್ಯಯಿಸಿದೆ.
ಇದನ್ನೂ ಓದಿ:ಕೋರ್ಟ್ ಮುಂದೆ ತನ್ನ ದೇಹ ತೂಕ ಹೆಚ್ಚಿದ್ದರ ಕಾರಣ ವಿವರಿಸಿದ ಕುಸ್ತಿಪಟು ವಿನೇಶ್ ಫೋಗಟ್ - Vinesh Phogat