ಕರ್ನಾಟಕ

karnataka

By ETV Bharat Karnataka Team

Published : Mar 15, 2024, 9:34 PM IST

ETV Bharat / sports

ಡೆಲ್ಲಿ ತಂಡಕ್ಕೆ ಯಶಸ್ಸು ತಂದುಕೊಡುವುದು ನನ್ನ ಕೆಲಸ: ಕೋಚ್​ ರಿಕಿ ಪಾಂಟಿಂಗ್

ಡೆಲ್ಲಿ ತಂಡಕ್ಕೆ ರಿಷಭ್ ಪಂತ್​ ಪುನರಾಗಮನವು ಬಹಳಷ್ಟು ಶಕ್ತಿ ತಂದಿದೆ ಎಂದು ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

IPL 2024
ರಿಕಿ ಪಾಂಟಿಂಗ್

''ಐಪಿಎಲ್ ಗೆಲ್ಲುವ ಬಯಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ, ಈ ವರ್ಷ ನಮ್ಮ ಪ್ರಯತ್ನ ಮತ್ತಷ್ಟು ತೀವ್ರವಾಗಿರಲಿದೆ'' ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ. ಐಪಿಎಲ್ - 2024ಕ್ಕಾಗಿ ವಿಶಾಖಪಟ್ಟಣಂನಲ್ಲಿ ಸಜ್ಜಾಗುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ತಮ್ಮ ಮೊದಲ ತರಬೇತಿ ಸೆಷನ್‌ ಬಳಿಕ ಪಾಂಟಿಂಗ್ ತಮ್ಮ ಅನಿಸಿಕೆ ಹಂಚಿಕೊಂಡರು.

''ಕ್ಯಾಪಿಟಲ್ಸ್ ಕುಟುಂಬದೊಂದಿಗೆ ಸೇರಿಕೊಳ್ಳಲು ಸಂತಸ ಪಡುತ್ತೇನೆ. ಆಟಗಾರರ ಇಂದಿನ ತರಬೇತಿ ಬಹಳಷ್ಟು ಭರವಸೆ ನೀಡಿದೆ. ಇದು ಕೇವಲ ಆರಂಭ. ನಾವು ಈಗಲೇ ನಮ್ಮ ಗರಿಷ್ಠ ಅಭ್ಯಾಸವನ್ನು ನಿರೀಕ್ಷಿಸುವುದಿಲ್ಲ. ಮೊದಲ ಪಂದ್ಯಕ್ಕಾಗಿ ತುಂಬಾ ನಿರೀಕ್ಷೆಯನ್ನೂ ಸಹ ಎದುರು ನೋಡುತ್ತಿಲ್ಲ. ಆಟಗಾರರು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ, ಮತ್ತು ಅದಕ್ಕಾಗಿಯೇ ನಾವೆಲ್ಲರೂ ಇಲ್ಲಿದ್ದೇವೆ'' ಎಂದರು.

''ತಂಡಕ್ಕೆ ಯಶಸ್ಸು ತರುವುದು ನನ್ನ ಕೆಲಸ. ನಾವು ಅರ್ಹತೆ ಪಡೆಯಲು ಸಾಕಷ್ಟು ಪಂದ್ಯಗಳನ್ನು ಗೆಲ್ಲುವ ಬಗ್ಗೆ ಮಾತನಾಡುತ್ತಿಲ್ಲ, ಆದರೆ ನಾವು ಐಪಿಎಲ್ ಗೆಲ್ಲುವ ಬಗ್ಗೆ ಮಾತನಾಡುತ್ತಿದ್ದೇವೆ. ನಮ್ಮ ಪ್ರತಿಯೊಂದು ತರಬೇತಿ ಅವಧಿ, ಸಭೆ, ಚೇತರಿಕೆಯ ಅವಧಿ ಹಾಗೂ ನಾನು ಆಟಗಾರರೊಂದಿಗೆ ನಡೆಸುವ ಪ್ರತಿಯೊಂದು ಮಾತುಕತೆಗಳು ನಮಗೆ ಗೆಲ್ಲುವ ಅತ್ಯುತ್ತಮ ಅವಕಾಶ ನೀಡುತ್ತವೆ'' ಎಂದು ಪಾಂಟಿಂಗ್‌ ತಿಳಿಸಿದರು.

ಕ್ಯಾಪಿಟಲ್ಸ್ ಪಾಳಯದಲ್ಲಿ ವಿಕೆಟ್‌ ಕೀಪರ್ - ಬ್ಯಾಟರ್ ರಿಷಭ್ ಪಂತ್ ಜೊತೆಗಿನ ಮರು ಭೇಟಿಯ ಕುರಿತು ಮಾತನಾಡಿದ ಅವರು "ಕಳೆದ ವರ್ಷ ನಾವು ಪಂತ್ ಅವರನ್ನು ಹೆಚ್ಚು ಮಿಸ್ ಮಾಡಿಕೊಂಡಿದ್ದೇವೆ. ಇಡೀ ಐಪಿಎಲ್ ಪಂತ್​​ರನ್ನು ಮಿಸ್ ಮಾಡಿಕೊಂಡಿದೆ. ರಿಷಭ್ ಪುನರಾಗಮನವು ತಂಡಕ್ಕೆ ಬಹಳ ಶಕ್ತಿ ತಂದಿದೆ. ಆತನ ಮುಖದಲ್ಲಿ ನಗುವಿದೆ, ತನ್ನ ಎಲ್ಲ ಸಹ ಆಟಗಾರರನ್ನು ತನ್ನ ಸುತ್ತಲೂ ಇರುವಂತೆ ಮಾಡುತ್ತಾನೆ'' ಎಂದು ರಿಕಿ ತಿಳಿಸಿದರು.

ಮಾರ್ಚ್ 23 ರಂದು ಮೊಹಾಲಿಯ ಮಹಾರಾಜ ಯಾದವೀಂದ್ರ ಸಿಂಗ್ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ‌ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2024ರ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ಬಾರಿಯ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀನಾಯ ಪ್ರದರ್ಶನ ತೋರಿತ್ತು. ಅಂಕಪಟ್ಟಿಯಲ್ಲಿ 9 ನೇ ಸ್ಥಾನ ಪಡೆದು, ಟೂರ್ನಿಯಿಂದ ಹೊರಬಿದ್ದಿತ್ತು. ಲೀಗ್​ ಹಂತದ 14 ಪಂದ್ಯಗಳಲ್ಲಿ ಕೇವಲ 5 ರಲ್ಲಿ ಮಾತ್ರ ಗೆಲುವು ಕಂಡಿದ್ದ ಕ್ಯಾಪಿಟಲ್ಸ್​, 9 ಹಣಾಹಣಿಗಳನ್ನು ಸೋತು ಕೇವಲ 10 ಅಂಕ ಗಳಿಸಿತ್ತು.

ಇದನ್ನೂ ಓದಿ:'ಸಿಎಸ್‌ಕೆ ತಂಡದಲ್ಲಿ ಆಡಲು ತುಂಬಾ ಉತ್ಸುಕನಾಗಿದ್ದೇನೆ': ಧೋನಿ ನಾಯಕತ್ವದ ಬಗ್ಗೆ ಶಾರ್ದೂಲ್ ಠಾಕೂರ್ ಹೇಳಿದ್ದೇನು?

ABOUT THE AUTHOR

...view details