ETV Bharat / sports

ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್​ ರದ್ದಾದರೇ WTC ಫೈನಲ್ ಪ್ರವೇಶಿಸಲು ಭಾರತ ಇಷ್ಟು ಪಂದ್ಯ ಗೆಲ್ಲಲೇಬೇಕು: ಇಲ್ಲದಿದ್ದರೆ ಮುಗಿತು ಕಥೆ! - WTC Final Scenario - WTC FINAL SCENARIO

ಬಾಂಗ್ಲಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯ ರದ್ದಾದರೆ ಭಾರತದ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಫೈನಲ್​ ಅರ್ಹತೆ ಮೇಲೆ ಪೆಟ್ಟಾಗಲಿದೆಯಾ? ಭಾರತದ WTC ಫೈನಲ್​ ಹಾದಿ ಹೇಗಿದೆ ಗೊತ್ತಾ?

WTC final scenarios
WTC final scenarios (Source : Associated Press)
author img

By ETV Bharat Sports Team

Published : Sep 28, 2024, 7:48 PM IST

ಹೈದರಾಬಾದ್​: ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತದೆ. ಮೊದಲ ದಿನ, 35 ಓವರ್‌ಗಳ ಆಟವಷ್ಟೇ ನಡೆಸಲಾಯಿತು. ನಿರಂತರ ಮಳೆಯಾದ ಕಾರಣ ಪಂದ್ಯವನ್ನು ಅಲ್ಲಿಗೆ ಮುಗಿಸಲಾಯಿತು. ಇಂದು ಎರಡನೇ ದಿನ ಕೂಡ ವರುಣನ ಆರ್ಭಟ ಮುಂದುವರೆದಿದ್ದು ಒಂದೇ ಒಂದು ಎಸೆತ ಕಾಣದೇ 2ನೇ ದಿನದ ಪಂದ್ಯವೂ ಮಳೆಗಾಹುತಿಯಾಗಿದೆ.

ಸದ್ಯ 35 ಓವರ್​ಗಳನ್ನು ಆಡಿರುವ ಬಾಂಗ್ಲಾ 3 ವಿಕೆಟ್​ ನಷ್ಟಕ್ಕೆ 107 ರನ್​ಗಳನ್ನು ಕಲೆ ಹಾಕಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದೆ. ಒಂದು ವೇಳೆ ಮಳೆಯಿಂದಾಗಿ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳಲಿದೆ. ಆದರೆ, ಈ ಪಂದ್ಯ ರದ್ದಾದರೂ ಅಥವಾ ಡ್ರಾದಲ್ಲಿ ಅಂತ್ಯಗೊಂಡರೂ ಭಾರತದ WTC ಫೈನಲ್​ ಅರ್ಹತೆ ಮೇಲೆ ಪೆಟ್ಟಾಗಲಿದೆಯೇ ಮತ್ತು ಭಾರತ ಇನ್ನೂ ಎಷ್ಟು ಪಂದ್ಯಗಳಲ್ಲಿ ಗೆದ್ದರೇ ಫೈನಲ್​ಗೆ ಅರ್ಹತೆ ಪಡೆಯಲಿದೆ ಎಂಬುದರ ಬಗ್ಗೆ ಇದೀಗ ತಿಳಿಯೋಣ ಬನ್ನಿ.

2023-25ರ WTC ಋತುವಿನಲ್ಲಿ ಭಾರತ ಇದುವರೆಗೆ 10 ಪಂದ್ಯಗಳನ್ನು ಆಡಿ ಅದರಲ್ಲಿ 7ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಮತ್ತೊಂದು ಪಂದ್ಯ ಡ್ರಾಗೊಂಡಿದೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಪ್ರಸ್ತುತ ಶೇ.71.67 (86 ಅಂಕ)ದೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿ 62.50 ಶೇಕಡವಾರು (90 ಅಂಕ)ದೊಂದಿಗೆ ಎರಡನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ ಫೈನಲ್​ ಲೆಕ್ಕಾಚಾರ: ಪ್ರಸ್ತುತ ಬಾಂಗ್ಲಾದೇಶ ಸರಣಿಯ ನಂತರ, ಭಾರತವು 2025ರಲ್ಲಿ ಇನ್ನೂ 8 ಪಂದ್ಯಗಳನ್ನು ಆಡುವ ಅವಕಾಶ ಹೊಂದಿದೆ. ಅದರಲ್ಲಿ 3 ಪಂದ್ಯಗಳು ನ್ಯೂಜಿಲೆಂಡ್ ವಿರುದ್ಧ ಮತ್ತು 5 ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಆದರೆ ಬಾಂಗ್ಲಾದೇಶದ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದರೆ, ಉಳಿದ 8 ಟೆಸ್ಟ್‌ಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆದ್ದರೂ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ಒಂದು ವೇಳೆ ಭಾರತ - ಬಾಂಗ್ಲಾ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡರೆ 1-0 ಅಂತರದಲ್ಲಿ ಸರಣಿ ಕೈವಶವಾಗಲಿದೆ. ಆದರೆ, ಡಬ್ಲ್ಯುಟಿಸಿ ಫೈನಲ್ ತಲುಪಲು ಟೀಂ ಇಂಡಿಯಾ ತನ್ನ ಮುಂದಿನ 8 ಟೆಸ್ಟ್ ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆಲ್ಲಲೇಬೇಕಾಗುತ್ತದೆ. ಕಿವೀಸ್ ವಿರುದ್ಧ ಕನಿಷ್ಠ 3 ಪಂದ್ಯಗಳನ್ನು ಮತ್ತು ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳನ್ನು ತವರಿನಲ್ಲಿ ಗೆಲ್ಲಬೇಕಾಗುತ್ತದೆ. ಅಲ್ಲದೇ, ಪ್ರಸ್ತುತ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಶ್ರೀಲಂಕಾ (ಶೇ. 50 ಅಂಕ) ಮತ್ತು ನ್ಯೂಜಿಲೆಂಡ್ (ಶೇ. 42.86) ನಡುವಿನ ಮುಂದಿನ ಪಂದ್ಯಗಳ ಫಲಿತಾಂಶಗಳ ಮೇಲೆ ಭಾರತದ ಫೈನಲ್​ ಅರ್ಹತೆ ಅವಲಂಬಿತವಾಗಿದೆ.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಮನು ಭಾಕರ್​ ಬಳಸಿದ ಪಿಸ್ತೂಲ್​ನ ಬೆಲೆ ಎಷ್ಟು ಗೊತ್ತಾ: ಕೇಳಿದ್ರೆ ಶಾಕ್​ ಆಗ್ತೀರಿ! - MANU BHAKAR PISTOL PRICE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.