ETV Bharat / state

'ಆರೋಪ‌ಗಳು ಶುದ್ಧ ಸುಳ್ಳು': ಹೆಚ್​ಡಿಕೆ ಆರೋಪಕ್ಕೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರ - ADGP Chandrashekhar Letter - ADGP CHANDRASHEKHAR LETTER

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್, ತಮ್ಮ ಕೆಳ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಮುಕ್ತ ತನಿಖೆ ಮಾಡೋಣ ಎಂದು ಧೈರ್ಯ ತುಂಬಿದ್ದಾರೆ.

lokayukta adgp
ಹೆಚ್.ಡಿ.ಕುಮಾರಸ್ವಾಮಿ, ಎಡಿಜಿಪಿ ಚಂದ್ರಶೇಖರ್ (ETV Bharat)
author img

By ETV Bharat Karnataka Team

Published : Sep 28, 2024, 10:40 PM IST

Updated : Sep 28, 2024, 10:47 PM IST

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ಕರೆದು ಕೆಲ ಆರೋಪಗಳನ್ನು ಮಾಡಿದ್ದರು. ಈ ಬೆನ್ನಲ್ಲೇ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್, ತಮ್ಮ ಲೋಕಾಯುಕ್ತ ಎಸ್​ಐಟಿ ಅಧಿಕಾರಿಗಳಿಗೆ ಪತ್ರ ಬರೆದು ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸೋಣ, ಟೀಕೆಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ನಿರ್ದೇಶನ ನೀಡಿದ್ದಾರೆ. ಆರೋಪಗಳ ಸಂಬಂಧ ಎಸ್​ಐಟಿ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಕುಮಾರಸ್ವಾಮಿ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಹಾಗೂ ದುರುದ್ದೇಶದ್ದಿಂದ ಕೂಡಿದೆ ಎಂದಿದ್ದಾರೆ.

''ಕುಮಾರಸ್ವಾಮಿ ಅವರು ಆರೋಪಗಳ ಮೂಲಕ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಎಸ್​​ಐಟಿ ತಂಡ ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್​​ಗೆ ಅನುಮತಿ ಕೋರಿದ ಹಿನ್ನೆಲೆಯಲ್ಲಿ ಈ ರೀತಿ ಆರೋಪಿಸಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ಆರೋಪಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ '' ಎಂದು ಪತ್ರದಲ್ಲಿ ಹೇಳಿದ್ದಾರೆ.

lokayukta-adgp-chandrashekhar-clarification-on-h-d-kumaraswamy-allegations-through-letter
'ಆರೋಪ‌ಗಳು ಶುದ್ಧ ಸುಳ್ಳು': ಹೆಚ್​ಡಿಕೆ ಆರೋಪಕ್ಕೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರ (ETV Bharat)

''ಸುಳ್ಳು ಆರೋಪಗಳಿಂದ ಅಧಿಕಾರಿಗಳಿಗೆ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದು, ಆರೋಪಿ ಎಷ್ಟೇ ಪ್ರಬಲವಾಗಿದ್ದರೂ ಆತ ಆರೋಪಿಯೇ, ಹಾಗೂ ಆರೋಪಿಯ ಆರೋಪದಿಂದ ನಾವು ಭಯಬೀಳುವುದಿಲ್ಲ. ಇಂತಹ ಆರೋಪಗಳಿಗೆ ನಾನು ಭಯಪಡುವುದಿಲ್ಲ. ಎಲ್ಲಾ ಆರೋಪಿಗಳನ್ನು ಮತ್ತು ಅಪರಾಧಿಗಳ ನ್ಯಾಯಾಲಯಕ್ಕೆ ತರೋಣ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಬರ್ನಾರ್ಡ್ ಶಾ ಮಾತು ಉಲ್ಲೇಖ: ಅಲ್ಲದೆ ಪತ್ರದಲ್ಲಿ, ಜಾರ್ಜ್ ಬರ್ನಾರ್ಡ್ ಶಾ ಮಾತು ಉಲ್ಲೇಖಿಸಿರುವ ಚಂದ್ರಶೇಖರ್, ''ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ಆದ್ದರಿಂದ ನೀವು ಕೊಳಕಾಗುತ್ತೀರಿ. ಹಂದಿಯೂ ಕೂಡ ಅದನ್ನೇ ಇಷ್ಟಪಡುತ್ತೆ. ಅದೇ ರೀತಿ ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದ್ದರಿಂದ ಭಯಬೀಳುವ ಅಗತ್ಯವಿಲ್ಲ'' ಎಂದು ಎಸ್​​ಐಟಿ ತಂಡಕ್ಕೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

''ಸತ್ಯವು ಯಾವಾಗಲೂ ಜಯಿಸುತ್ತೆ, ಸತ್ಯ ಮೇವ ಜಯತೆ'' ಎಂಬ ಸಾಲುಗಳೊಂದಿಗೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಎಡಿಜಿಪಿಯ ಈ ಪತ್ರ ಈಗ ಸಂಚಲನ ಸೃಷ್ಟಿಸಿದೆ.

ಹೆಚ್.ಡಿ.ಕುಮಾರಸ್ವಾಮಿ ಆರೋಪವೇನು?: ಸರಣಿ ಅಪರಾಧಗಳನ್ನು ಮಾಡಿರುವ ಐಪಿಎಸ್ ಅಧಿಕಾರಿಯೊಬ್ಬರು ರಾಜ್ಯಪಾಲರ ಕಚೇರಿಯ ಸಿಬ್ಬಂದಿಯನ್ನು ತನಿಖೆ ಮಾಡುವ ಅನುಮತಿ ಕೇಳಿದ್ದಾರೆ. ಇವರಿಗೆ ಕಾಂಗ್ರೆಸ್ ಸರ್ಕಾರದ ಪೂರ್ಣ ಕೃಪಾಕಟಾಕ್ಷವಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹೆಚ್​ಡಿಕೆ, ಐಜಿಪಿ ಚಂದ್ರಶೇಖರ್ ವಿರುದ್ಧ ಸರಣಿ ದಾಖಲೆಗಳ ಸಮೇತ ಆರೋಪಗಳನ್ನು ಮಾಡಿದ್ದರು. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಅಂತಹ ಅಧಿಕಾರಿಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವ ತನಿಖೆಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಸೇಡಿಗಾಗಿ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿಯ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದರು.

ಇದನ್ನೂ ಓದಿ: ಸುಮ್ಮನೆ ರಾಜೀನಾಮೆ ಕೊಡಲು ನನಗೆ ತಲೆ ಕೆಟ್ಟಿದ್ಯಾ? ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ - HD Kumaraswamy

Last Updated : Sep 28, 2024, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.