ETV Bharat / state

ರಾಜ್ಯದ ಸೇವೆ ಮಾಡಲು ದೊಡ್ಡ ಪ್ರಯತ್ನ, ಹೋರಾಟ ಮಾಡುತ್ತಿದ್ದೇನೆ : ಡಿಸಿಎಂ ಡಿ ಕೆ ಶಿವಕುಮಾರ್ - DCM DK Shivakumar - DCM DK SHIVAKUMAR

ಡಿಸಿಎಂ ಡಿ.ಕೆ ಶಿವಕುಮಾರ್ ಅವರು ರಾಜ್ಯಕ್ಕೆ ಸೇವೆ ಮಾಡಲು ದೊಡ್ಡ ಪ್ರಯತ್ನ ಹಾಗೂ ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

Dcm-d k-shivakumar
ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)
author img

By ETV Bharat Karnataka Team

Published : Sep 28, 2024, 10:25 PM IST

ರಾಮನಗರ : ರಾಜ್ಯಕ್ಕೆ ಸೇವೆ ಮಾಡಲು ದೊಡ್ಡ ಪ್ರಯತ್ನ ಹಾಗೂ ಹೋರಾಟ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಕನಸನ್ನು ಮತ್ತೊಮ್ಮೆ ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.

ಸಾತನೂರು ಕ್ಷೇತ್ರದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ಕೆಲಸ ಮಾಡಲು ಮುಂದೆ ಬಂದಾಗ ನಾನಾ ತೊಡಕುಗಳು ಉಂಟಾಗುತ್ತದೆ. ರಾಜ್ಯದ ಸೇವೆ ಮಾಡಲು ದೊಡ್ಡ ಪ್ರಯತ್ನ ಹಾಗೂ ಹೋರಾಟ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ಸಿಎಂ ಆಗುವ ಕನಸನ್ನು ಬಹಿರಂಗವಾಗಿ ವೇದಿಕೆ ಮುಂದೆ ಹಂಚಿಕೊಂಡಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ (ETV Bharat)

ಮಾಧ್ಯಮದವರು ವಿವಿಧ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ನಾನಿಲ್ಲಿಗೆ ಡಿಸಿಎಂ ಆಗಿ ಬಂದಿಲ್ಲ, ನಿಮ್ಮ ಪ್ರತಿನಿಧಿ, ಶಾಸಕ, ಡಿಸಿಎಂ ಏನಿದ್ರೂ ವಿಧಾನಸೌಧದಲ್ಲಿ ಇಟ್ಟುಕೊಳ್ಳುತ್ತೇನೆಯೇ ಹೊರತು, ನಿಮ್ಮ ಮುಂದೆ ಅಲ್ಲ. ನೀವೆಲ್ಲಾ ನಮ್ಮ ಮನೆ ಮಕ್ಕಳು ಎಂದರು.

ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಡಿಕೆಶಿ - ಕುಮಾರಸ್ವಾಮಿಯವರಿಗೆ ಅವರ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಬೇಡಿ ಎಂದು ಹಿಡಿದುಕೊಂಡವರು ಯಾರು? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ನನ್ನ ಬಳಿ ಇರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಕಾಂಗ್ರೆಸ್ ಸರ್ಕಾರದ ಏಳು ಜನ ಮಂತ್ರಿಗಳು ರಾಜೀನಾಮೆ ನೀಡಬೇಕಾಗುತ್ತದೆ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, "ದಾಖಲೆಗಳನ್ನು ಬಿಡುಗಡೆ ಮಾಡಲು ಬೇಡ ಎಂದವರು ಯಾರು?" ಎಂದರು.

JANASPANDANA PROGRAMME
ಜನಸ್ಪಂದನಾ ಕಾರ್ಯಕ್ರಮ (ETV Bharat)

ಬಿಜೆಪಿ- ದಳ ಎರಡು ಒಂದೇ : ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಬಿಜೆಪಿ ಒತ್ತಾಯ ಮಾಡುತ್ತಿದೆ. ಕುಮಾರಸ್ವಾಮಿಯವರು ಮೌನವಾಗಿದ್ದಾರೆ ಎಂದು ಕೇಳಿದಾಗ, "ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಪಕ್ಷ ಸಿದ್ದರಾಮಯ್ಯ ಅವರ ಬೆಂಬಲಕ್ಕಿದೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಮಗೆ ಬಿಜೆಪಿ ಮತ್ತು ದಳ ಎರಡೂ ಒಂದೇ" ಎಂದರು.

ಕನಕಪುರದ ಮೆಡಿಕಲ್ ಕಾಲೇಜು ವಿಚಾರವಾಗಿ ಸರ್ಕಾರ ಸೂಕ್ತ ತಯಾರಿ ಮಾಡಿಕೊಳ್ಳಲಿಲ್ಲವೇ ಎಂದು ಕೇಳಿದಾಗ, ಈ ಕುರಿತು ನಾನು ಪ್ರತ್ಯೇಕ ಸಭೆ ಮಾಡಿದ್ದೇನೆ. ಹಾಸಿಗೆ ಕೊರತೆಯನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ. ವಸತಿ ಇಲಾಖೆಯಿಂದ ಜಾಗ ಸ್ಥಳಾಂತರವಾಗಬೇಕು. ರಾಮನಗರದಲ್ಲಿಯೂ ಕೆಲಸ ನಡೆಯುತ್ತಿದೆ. ಕನಕಪುರದಲ್ಲಿಯೂ ಆಗುತ್ತದೆ ಎಂದರು.

JANASPANDANA PROGRAMME
ಜನಸ್ಪಂದನಾ ಕಾರ್ಯಕ್ರಮ (ETV Bharat)

ಕನಕಪುರದಲ್ಲಿ ಮೆಡಿಕಲ್ ಕಾಲೇಜು ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳಿದಾಗ, ಸಿಬ್ಬಂದಿ ಕೊರತೆ ಸೇರಿದಂತೆ ಒಂದಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಈಗಾಗಲೇ ಸಭೆ ನಡೆಸಲಾಗಿದೆ. ರೈತರ ಭೂಮಿ ಪರಿಹಾರ ವಿಚಾರವಾಗಿ ಸಮಸ್ಯೆಗಳಿದ್ದು, ಅವರ ಬಳಿ ಚರ್ಚೆ ನಡೆಸಲಾಗಿದೆ ಎಂದರು. ಬೆಂಗಳೂರು ದಕ್ಷಿಣ ಎಂದು ಯಾವಾಗ ನಾಮಕರಣವಾಗುತ್ತದೆ ಎಂದಾಗ, ಸಮಯ ಬಂದಾಗ ಇದರ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು.

ಜನ ಯಾವುದಕ್ಕೆ ಸದಸ್ಯರಾಗುತ್ತಾರೆ : ಕನಕಪುರದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನದ ಬಗ್ಗೆ ಕೇಳಿದಾಗ, ಅವರ ಕೆಲಸ ಅವರು ಮಾಡಲಿ. ಜನರು ಬಿಜೆಪಿ ಅಥವಾ ಜೆಡಿಎಸ್ ಯಾವುದಕ್ಕೆ ಸದಸ್ಯರಾಗುತ್ತಾರೆ? ಅವರ ಸದಸ್ಯತ್ವ ಅಭಿಯಾನವನ್ನು ನಾವು ಬೇಡ ಎನ್ನಲು ಆಗುತ್ತದೆಯೇ? ಅವರ ಪಕ್ಷವನ್ನು ಅವರು ಬಿಗಿ ಮಾಡಿಕೊಳ್ಳಲಿ. ನಾವು ಮಾಡಿದಂತೆ ಅವರು ಮಾಡುತ್ತಿದ್ದಾರೆ. ಇದರಿಂದ ರಾಜಕೀಯವಾಗಿ ಯಾರು ಗೌಪ್ಯವಾಗಿರುತ್ತಾರೆ, ಅವರು ಹೊರಗೆ ಬರುತ್ತಾರೆ ಎಂದರು.

ರಾಜ್ಯದ ಸೇವೆ ಮಾಡಲು ಪ್ರಯತ್ನ ಮತ್ತು ಹೋರಾಟ ನಡೆಯುತ್ತಿದೆ ಎಂದು ಕನಕಪುರದಲ್ಲಿ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ " ನಾನು ಈ ಅರ್ಥದಲ್ಲಿ ಮಾತನಾಡಲಿಲ್ಲ. ಜನರು ಸೇವೆ ಮಾಡಲು ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದ್ದೇನೆ. ನೀವು ಹೊಸ ಅರ್ಥವನ್ನು ಸೃಷ್ಟಿ ಮಾಡಿದ್ದೀರಿ. ಈ ರೀತಿ ಹೇಳಿಕೆ ನೀಡಿದ್ದರೆ ದಾಖಲೆ ಕೊಡಿ'' ಎಂದರು.

ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದಾಗ, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ತಿಳಿದು ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ : ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಸಿಎಂ - DDCM D K Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.