ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾದ ನೂತನ ಬೌಲಿಂಗ್​ ಕೋಚ್​ ಯಾರು?: ಗಂಭೀರ್ ಒಲವು ಯಾರ ಪರ? - Team India Bowling Coach - TEAM INDIA BOWLING COACH

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮೊರ್ಕೆಲ್ ಅವರ ಹೆಸರನ್ನು ಸೂಚಿಸಲು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಮುಂದಾಗಿದ್ದಾರೆ.

GAUTAM GAMBHIR
ಗೌತಮ್ ಗಂಭೀರ್ (IANS)

By ETV Bharat Karnataka Team

Published : Jul 12, 2024, 6:18 PM IST

ಹೈದರಾಬಾದ್:ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕ ಆಗಿರುವ ಗೌತಮ್ ಗಂಭೀರ್ ಈಗ ಬೌಲಿಂಗ್ ಕೋಚ್ ಸೇರಿ ಇತರ ಸಿಬ್ಬಂದಿ ಬಗ್ಗೆ ಚರ್ಚೆ ನಡೆಯತ್ತಿದೆ. ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮೊರ್ಕೆಲ್ ಅವರನ್ನು ನೇಮಿಸುವ ಬಗ್ಗೆ ಗೌತಮ್ ಗಂಭೀರ್ ಒಲವು ಹೊಂದಿದ್ದಾರೆ.

ಮೊರ್ಕೆಲ್ ಮತ್ತು ಗಂಭೀರ್ 2022 ಮತ್ತು 2023ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಪರವಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಗಂಭೀರ್ ತಂಡದ ಮೆಂಟರ್​ ಆಗಿದ್ದರೆ, ಮೊರ್ಕೆಲ್ ಬೌಲಿಂಗ್ ಕೋಚ್ ಆಗಿದ್ದರು. 2014ರಲ್ಲಿ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ ಟ್ರೋಫಿ ಗೆದ್ದಾಗಲೂ ಮೊರ್ಕೆಲ್ ತಂಡದಲ್ಲಿದ್ದರು ಎಂಬುವುದು ಗಮನಾರ್ಹ.

ಈಗ ಜೂನ್ 9ರಂದು ಗೌತಮ್ ಗಂಭೀರ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದೆ. ಇದರ ಬೆನ್ನಲ್ಲೇ 39 ವರ್ಷದ ಮೊರ್ನೆ ಮೊರ್ಕೆಲ್ ಅವರನ್ನು ಭಾರತದ ಬೌಲಿಂಗ್ ಕೋಚ್ ಮಾಡಲು ಅವರು ಬಯಸುತ್ತಿದ್ದಾರೆ ಎಂದು 'ಈಟಿವಿ ಭಾರತ್'ಗೆ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೋಚ್ ಗಂಭೀರ್​ಗೆ ಮೊದಲ ಸರಣಿ:ಈ ತಿಂಗಳ ಕೊನೆಯಲ್ಲಿ ಟಿ - 20 ಮತ್ತು ಏಕದಿನ ಸರಣಿಗಾಗಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರಿಗೆ ಇದು ಮೊದಲ ಸರಣಿಯಾಗಿದೆ. ತಲಾ ಮೂರು ಪಂದ್ಯಗಳ ಸರಣಿಯಾಗಿದ್ದು, ತಂಡವನ್ನು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುನ್ನಡೆಸುವ ಸಾಧ್ಯತೆ ಇದೆ.

ಮೊರ್ನೆ ಮೊರ್ಕೆಲ್ ಹಿನ್ನೆಲೆ:ದಕ್ಷಿಣ ಆಫ್ರಿಕಾದ ಪರವಾಗಿ ಮೊರ್ನೆ ಮೊರ್ಕೆಲ್ 2006 ಮತ್ತು 2018ರ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್​​ನವರೆಗೆ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿದ್ದರು. ಮಾಜಿ ಎಡಗೈ ಬ್ಯಾಟರ್ ಮತ್ತು ಬಲಗೈ ವೇಗಿ ಆಗಿರುವ ಮೊರ್ಕೆಲ್, 86 ಟೆಸ್ಟ್, 117 ಏಕದಿನ ಮತ್ತು 44 ಟಿ-20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಕ್ರಮವಾಗಿ 309, 188 ಮತ್ತು 47 ವಿಕೆಟ್​ಗಳನ್ನು ಪಡೆದಿದ್ದಾರೆ.

ಅಲ್ಲದೇ, 153 ಪ್ರಥಮ ದರ್ಜೆ ಪಂದ್ಯಗಳಲ್ಲಿ 566 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2018ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಆಡಿದ್ದರು. ಅದೇ ರೀತಿಯಾಗಿ 2018ರಲ್ಲಿ ಸೆಂಚುರಿಯನ್‌ನಲ್ಲಿ ಭಾರತದ ವಿರುದ್ಧ ಕೊನೆಯ ಏಕದಿನ ಪಂದ್ಯವಾಡಿದ್ದರು.

ಇದನ್ನೂ ಓದಿ:ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೊಸ ದಾಖಲೆ: ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ!

ABOUT THE AUTHOR

...view details