ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಸರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ನಾಲ್ಕು ವರ್ಷಗಳ ದಾಂಪತ್ಯದ ನಂತರ ಜುಲೈನಲ್ಲಿ ಬೇರ್ಪಟ್ಟಿದ್ದಾರೆ. ಈ ಮಧ್ಯೆಯೇ, ಹಾರ್ದಿಕ್ ಪಾಂಡ್ಯ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಿವೆ. ಈ ಜೋಡಿಯ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಿನ್ನೆಲೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ಹಾರ್ದಿಕ್ ಬೇರೊಬ್ಬ ಹುಡುಗಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಅವರು ಬ್ರಿಟಿಷ್ ಗಾಯಕಿ ಮತ್ತು ಟಿವಿ ನಟಿ ಜಾಸ್ಮಿನ್ ವಾಲಿಯಾ. ಇಬ್ಬರೂ ಒಟ್ಟಿಗೇ ವಿಹಾರಕ್ಕೆ ತೆರಳಿದ್ದರು ಎಂಬ ಪ್ರಚಾರವೂ ಜೋರಾಗಿದೆ. ಕೆಲವು ಗಂಟೆಗಳ ಹಿಂದೆ, ಹಾರ್ದಿಕ್ ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಗ್ರೀಸ್‌ನ ಹೋಟೆಲ್ ಈಜುಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ತೆಗೆದ ವಿಡಿಯೋ ಅದು. ಇದಕ್ಕೂ ನಾಲ್ಕು ದಿನಗಳ ಹಿಂದೆ ಜಾಸ್ಮಿನ್ ವಾಲಿಯಾ ಕೂಡ ಅದೇ ಸ್ಥಳದಲ್ಲಿ ಚಿತ್ರಗಳನ್ನು ತೆಗೆದುಕೊಂಡು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರಿಬ್ಬರು ಭೇಟಿಯಾಗಲು ರಜೆಯ ಮೇಲೆ ತೆರಳಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿವೆ.
ಇಬ್ಬರು ಪರಸ್ಪರ ತಮ್ಮ ಪೋಸ್ಟ್‌ಗಳಿಗೆ ಲೈಕ್ ಮಾಡುವುದು ಕೂಡ ಕಂಡುಬಂದಿದೆ. ಪಾಂಡ್ಯ ಅವರು ಈ ಹಿಂದೆ ಜಾಸ್ಮಿನ್ ಅವರ ಹಲವು ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿದ್ದಾರೆ. ಈ ಕ್ರಮದಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಇದೀಗ ಅವರ ಪೋಸ್ಟ್‌ಗಳು ವೈರಲ್ ಆಗಿದೆ.