ಜೈಪುರ (ರಾಜಸ್ಥಾನ) : ಇಲ್ಲಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನೀಡಿದ 197 ರನ್ಗಳನ್ನು ಗುರಿಯನ್ನು ಬೆನ್ನಟ್ಟಿದ್ದ ಗುಜರಾತ್ ಟೈಟಾನ್ಸ್ ಗೆದ್ದು ಬೀಗಿದೆ. ಈ ಮೂಲಕ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ರಾಜಸ್ಥಾನ ತಂಡವು ಮೊದಲ ಸೋಲು ಕಂಡಿದೆ. ಆದರೂ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ ಜಿಟಿ ಮೂರನೇ ಜಯ ಸಾಧಿಸಿದೆ.
ರಾಜಸ್ಥಾನ ಇನ್ನಿಂಗ್ಸ್ : ಜಿಟಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರು. ಆದರೇ ಈ ಜೋಡಿ ಮತ್ತೆ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಜೈಸ್ವಾಲ್ (24) ಮತ್ತು ಬಟ್ಲರ್ (8) ಬಹು ಬೇಗನೇ ವಿಕೆಟ್ ಕಳೆದುಕೊಂಡರು. ಈ ಹಂತದಲ್ಲಿ ನಾಯಕ ಸಂಜು ಸಾಮ್ಸನ್ ಜೊತೆಗೂಡಿ ರಿಯಾನ್ ಪರಾಗ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಸಂಜು ಸ್ಯಾಮ್ಸನ್ ಕೇವಲ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 2 ಸಿಕ್ಸರ್ ನೆರೆವಿನಿಂದ ಔಟಗಾದೇ 68ರನ್ಗಳನ್ನು ಕಲೆ ಹಾಕಿದರು.
ಇನ್ನೊಂದೆಡೆ ರಿಯಾನ್ ಪರಾಗ್ 48 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು 5 ಸಿಕ್ಸರ್ಗಳಿಂದ 76 ರನ್ಗಳಿಸಿ ಔಟ್ ಆದರು. ಮೂರನೇ ವಿಕೆಟ್ ಒಂದಾದ ಸಂಜು ಮತ್ತು ಪರಾಗ್ 130 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ಮೂಲಕ ಆರ್ಆರ್ ಚೇತರಿಸಿಕೊಂಡು ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 196 ರನ್ಗಳನ್ನು ಗಳಿಸಿ, ಗುಜರಾತ್ಗೆ 197 ರನ್ಗಳ ಟಾರ್ಗೆಟ್ ನೀಡಿತ್ತು.
ಗುಜರಾತ್ಗೆ ಮೂರನೇ ಜಯ : ಜಿಟಿ ಪರ ಆರಂಭಿಕರಾದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಭದ್ರ ಬುನಾದಿ ಹಾಕಿ ಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ಸಾಯಿ ಸುದರ್ಶನ್ (35) ಪವರ್ ಫ್ಲೇ ಹಂತದಲ್ಲೇ ವಿಕೆಟ್ ಕಳೆದುಕೊಂಡರು. ನಂತರ ಬಂದ ಮ್ಯಾಥ್ಯೂ ವೇಡ್ (8) ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಆಗಮಸಿದ ಭರವಸೆ ಆಟಗಾರ ಅಭಿನವ್ ಮನೋಹರ್ (1) ಒಂದೇ ಓವರ್ನಲ್ಲಿ ಕುಲದೀಪ್ ಸೇನ್ಗೆ ವಿಕೆಟ್ ಒಪ್ಪಿಸಿದರು. ಇನ್ನು ವಿಜಯ್ ಶಂಕರ್ (16), ರಾಹುಲ್ ತೆವಾಟಿಯಾ (22), ಶಾರೂಕ್ ಖಾನ್ (14) ತಂಡ ಗೆಲುವಿನ ಕಡೆ ಸಾಗಲು ರನ್ಗಳಿಸಿದರು. ಕೊನೆಯಲ್ಲಿ ರಶೀದ್ ಖಾನ್ (24) ಭರ್ಜರಿ ನಾಲ್ಕು ಬೌಂಡರಿ ಸಿಡಿಸುವ ಮೂಲಕ ಗುಜರಾತ್ಗೆ ಮೂರು ಗೆಲುವು ತಂದು ಕೊಟ್ಟರು.
ತಂಡಗಳು : ಗುಜರಾತ್ ಟೈಟಾನ್ಸ್ : ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ವಿಜಯ್ ಶಂಕರ್, ಅಭಿನವ್ ಮನೋಹರ್, ಮ್ಯಾಥ್ಯೂ ವೇಡ್(ವಿ.ಕೀ), ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್, ನೂರ್ ಅಹ್ಮದ್ ಮತ್ತು ಮೋಹಿತ್ ಶರ್ಮಾ.
ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ವಿ.ಕೀ ಮತ್ತು ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.
ಇದನ್ನೂ ಓದಿ :ಐಪಿಎಲ್: ರಾಜಸ್ಥಾನ ರಾಯಲ್ಸ್ ಪರ ಅತಿ ಹೆಚ್ಚು ಫಿಫ್ಟಿ ಪ್ಲಸ್ ಸ್ಕೋರ್; ಬಟ್ಲರ್ ಹಿಂದಿಕ್ಕಿದ ಸಂಜು ಸ್ಯಾಮ್ಸನ್ - IPL 2024