ಚಂಢೀಗಡ: ಭಾನುವಾರ ಇಲ್ಲಿಯ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಮುಲ್ಲನ್ಪುರ್ನಲ್ಲಿ ನಡೆದ ಐಪಿಎಲ್ನ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೂರು ವಿಕೆಟ್ಗಳಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಎಂಟು ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ತಲುಪಿದೆ. ಪಂಜಾಬ್ ಕಿಂಗ್ಸ್ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಪಂಜಾಬ್ ನಿಗದಿತ 20 ಓವರ್ಗಳಲ್ಲಿ 142 ರನ್ಗಳಗೆ ಸರ್ವಪತನ ಕಂಡಿತು. ಮೊದಲಿಗೆ ತಂಡವು ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಬ್ಯಾಟರ್ ಸ್ಯಾಮ್ ಕರ್ರನ್, ಪ್ರಭಾಸಿಮ್ರಾನ್ 52 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಈ ವೇಳೆ ಮೊಹಿತ್ ಶರ್ಮಾ ಎಸೆತದಲ್ಲಿ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ಇಲ್ಲಿಂದ ಪಂಜಾಬ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು. ಪ್ರಭಾಸಿಮ್ರಾನ್ ನಿರ್ಗಮನದ ನಂತರ ರೊಸ್ಸೌವ್(9), ಸ್ಯಾಮ್ ಕರ್ರನ್ (20), ಲಿವಿಂಗ್ಸ್ಟನ್ (6), ಜಿತೇಶ್ ಶರ್ಮಾ (13), ಅಷ್ಟೋಶ್ ಶರ್ಮಾ (3), ಶಶಾಂಕ್ ಸಿಂಗ್ (8), ಹರ್ಪ್ರೀತ್ (14), ಹರ್ಷಲ್ ಪಾಟೇಲ್ ಕ್ರೀಸ್ ಕಾಯ್ದುಕೊಳ್ಳದೆ ತಮ್ಮ ವಿಕೆಟ್ಗಳ ಒಪ್ಪಿಸಿ ಹೊರನಡೆದರು.