ಕರ್ನಾಟಕ

karnataka

ETV Bharat / sports

CSK ಹೀಗೆ ಮಾಡಿರುವುದು ದೊಡ್ಡ ತಪ್ಪು: ಫ್ರಾಂಚೈಸಿಗಿಂತ ದೇಶ ಮುಖ್ಯ - ರಾಬಿನ್​ ಉತ್ತಪ್ಪ

ಸಿಎಸ್​ಕೆ ಫ್ರಾಂಚೈಸಿ ವಿರುದ್ಧ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ರಾಬಿನ್​ ಉತ್ತಪ್ಪ ಅಸಮಾಧಾನ ಹೊರಹಾಕಿದ್ದಾರೆ.

ಸಿಎಸ್​ಕೆ ತಂಡ
ಸಿಎಸ್​ಕೆ ತಂಡ (Associated Press)

By ETV Bharat Sports Team

Published : 5 hours ago

Robin Uttappa On CSK: ಭಾರತ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟಿಗ ರಾಬಿನ್​ ಉತ್ತಪ್ಪ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್​ ಸರಣಿಗೂ ಮುನ್ನ ಕಿವೀಸ್​ ಆಟಗಾರ ರಚಿನ್ ರವೀಂದ್ರ ಅವರಿಗೆ ಚೆನ್ನೈನಲ್ಲಿರುವ ತಮ್ಮ ಅಕಾಡೆಮಿಯಲ್ಲಿ ಅಭ್ಯಾಸ ಮಾಡಲು ಸಿಎಸ್‌ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಉತ್ತಪ್ಪ ಟೀಕಿಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್‌ಗಿಂತ ದೇಶ ಮುಖ್ಯ ಎಂಬುದನ್ನು ಮನಗಾಣಬೇಕು ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಕಿವೀಸ್ ಆಟಗಾರ ರಚಿನ್ ರವೀಂದ್ರ ಚೆನ್ನೈ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿದ್ದರು. ಇದಕ್ಕೆ ಕಿಡಿಕಾರಿರುವ ಉತ್ತಪ್ಪ, "CSK ಉತ್ತಮ ಫ್ರಾಂಚೈಸ್ ಆಗಿದ್ದು, ಇದು ಯಾವಾಗಲೂ ತಮ್ಮ ಆಟಗಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತದೆ. ನಾನು ಕೂಡ ಫ್ರಾಂಚೈಸಿಯನ್ನು ಇಷ್ಟಪಡುತ್ತೇನೆ. ಆದರೆ, ಫ್ರಾಂಚೈಸಿ ಆಟಗಾರರಿಗಿಂತ ನಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಅದಕ್ಕಿಂತ ಮುಖ್ಯವಾಗಿ ವಿದೇಶಿ ಆಟಗಾರರು ನಮ್ಮ ದೇಶಕ್ಕೆ ಬಂದು ನಮ್ಮ ತಂಡದ ವಿರುದ್ಧ ಆಡುವಾಗ ಕೆಲವು ಮಿತಿಗಳನ್ನು ಹಾಕಿಕೊಳ್ಳಬೇಕು. ಅವುಗಳನ್ನು ದಾಟಬಾರದು ಎಂದಿದ್ದಾರೆ. ಮೊದಲ ಟೆಸ್ಟ್​ ಪಂದ್ಯ ಸೋಲಿಗೆ ಸಿಎಸ್​ಕೆ ಕಾರಣ ಎಂದು ಕಿಡಿಕಾರಿದ್ದಾರೆ.

ಚೆನ್ನೈ ಟೆಸ್ಟ್​ ಪಂದ್ಯಕ್ಕೂ ಮೊದಲು ರಚಿನ್ ರವೀಂದ್ರಗೆ ಅಭ್ಯಾಸ ಮಾಡಲು ಸಿಎಸ್​ಕೆ ಫ್ರಾಂಚೈಸಿ ಸಹಾಯ ಮಾಡಿತ್ತು. ಇದರಿಂದಾಗಿ ಭಾರತದ ಪರಿಸ್ಥಿತಿಗಳ ಬಗ್ಗೆ ರಚಿನ್​ ಅರಿತುಕೊಂಡಿದ್ದರು. ಅಲ್ಲದೇ ಮೊದಲ ಪಂದ್ಯದಲ್ಲಿ ಅಮೋಘ ಆಟವಾಡಿ 157 ಎಸೆತಗಳಲ್ಲಿ ಶತಕ ಸಮೇತ 134 ರನ್ ಗಳಿಸಿದರು. ಭಾರತದ ಪಿಚ್‌ಗಳಲ್ಲಿ ವಿದೇಶಿ ಆಟಗಾರರು ಆಡಿದ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಇದೂ ಕೂಡ ಒಂದಾಗಿದೆ. ಈ ಇನ್ನಿಂಗ್ಸ್‌ನೊಂದಿಗೆ ಅವರು ಭವಿಷ್ಯದಲ್ಲಿ ನ್ಯೂಜಿಲೆಂಡ್ ತಂಡದ ಭರವಸೆ ಬ್ಯಾಟರ್​ ಎಂದು ಕೂಡ ಸಾಬೀತುಪಡಿಸಿದರು.

ಏತನ್ಮಧ್ಯೆ, ಚೆನ್ನೈ ಟೆಸ್ಟ್​ನಲ್ಲಿ ಕಿವೀಸ್ ಪಡೆ 8 ವಿಕೆಟ್‌ಗಳ ಜಯ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 134 ರನ್ ಗಳಿಸಿದ್ದ ರಚಿನ್ ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್ ಗಳಿಸಿ ಅಜೇಯರಾಗಿ ಉಳಿದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯದ ಬಳಿಕ ಮಾತನಾಡಿದ್ದ ರಚಿನ್,​ ಇಲ್ಲಿ ಅಭ್ಯಾಸ ನಡೆಸಿದ್ದು ತನ್ನ ಪ್ರದರ್ಶನಕ್ಕೆ ತುಂಬಾ ಸಹಾಯವಾಯ್ತು ಎಂದು ಹೇಳಿದ್ದರು.

ರಚಿನ್ ಹಿಂದಿನ ಸೀಸನ್​ ಐಪಿಎಲ್‌ನಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಈ ಬಾರಿ ಸಿಎಸ್‌ಕೆ ಅವರನ್ನು ರಿಟೇನ್​ ಮಾಡಿಕೊಳ್ಳದೆ ತಂಡದಿಂದ ಬಿಡುಗಡೆ ಮಾಡಿದೆ. ಇದರೊಂದಿಗೆ ರಚಿನ್ ಮೆಗಾ ಹರಾಜಿಗೂ ಪ್ರವೇಶಿಸಿದ್ದಾರೆ. ಈ ಹರಾಜಿನಲ್ಲಿ ಅವರ ಮೂಲ ಬೆಲೆ ರೂ. 1.50 ಕೋಟಿ ಆಗಿದೆ.

ಇದನ್ನೂ ಓದಿ:0 ಎಸೆತಕ್ಕೆ 8 ರನ್​ ಬಿಟ್ಟುಕೊಟ್ಟ ವಿಶ್ವದ ಏಕೈಕ ಬೌಲರ್! ಯಾರ ಹೆಸರಲ್ಲಿದೆ ಗೊತ್ತೇ ಈ ದಾಖಲೆ?

ABOUT THE AUTHOR

...view details