ಮೈಸೂರು: ಚೀನಾದ ಚೆಂಗ್ಡುನಲ್ಲಿ ಆಗಸ್ಟ್ 20ರಿಂದ 25ರವರೆಗೆ ನಡೆಯಲಿರುವ 17 ಮತ್ತು 15 ವರ್ಷದೊಳಗಿನ ಏಷ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2024ಕ್ಕೆ ಮೈಸೂರಿನ ಸ್ಪೋರ್ಟ್ಸ್ ಪಾರ್ಕ್‌ನ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ.
ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ದಿಯಾ ಭೀಮಯ್ಯ ಆಯ್ಕೆ - Asia Junior Badminton Championship - ASIA JUNIOR BADMINTON CHAMPIONSHIP
ಮುಂದಿನ ತಿಂಗಳು ಚೀನಾದಲ್ಲಿ ನಡೆಯಲಿರುವ ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2024ಕ್ಕೆ ಮೈಸೂರು ಸ್ಪೋರ್ಟ್ಸ್ ಪಾರ್ಕ್‌ನ ದಿಯಾ ಆಯ್ಕೆಯಾಗಿದ್ದಾರೆ.
ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ದಿಯಾ ಆಯ್ಕೆ (ETV Bharat)
Published : Jul 25, 2024, 10:15 AM IST
ಬಾಲಕಿಯರ ಡಬಲ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ದಿಯಾ ಅವರೊಂದಿಗೆ ಹರಿಯಾಣದ ಬರುಣಿ ಪಾರ್ಶ್ವಾಲ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೊಡಗು ಜಿಲ್ಲೆಯವರಾದ ದಿಯಾ, ಮೈಸೂರು ಸ್ಪೋರ್ಟ್ಸ್ ಪಾರ್ಕ್ನಲ್ಲಿ ಅರುಣ್ ಪೆಮ್ಮಯ್ಯ ಮತ್ತು ಬಿ.ಪಿ.ಭೀಮಯ್ಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.
ಇದನ್ನೂ ಓದಿ:ಆಡಿದ್ದು 25 ಒಲಿಂಪಿಕ್, ಪದಕ ಮಾತ್ರ 0: ಈ ರಾಷ್ಟ್ರಗಳಿಗೆ ಮೆಡಲ್ ಮರೀಚಿಕೆ! - Paris Olympic 2024