ಚೆನ್ನೈ(ತಮಿಳುನಾಡು):ಧೋನಿ ಅವರನ್ನು ಸೋಲಿಸಲು ನಮ್ಮ ತಂತ್ರಗಾರಿಕೆ ಅತ್ಯುತ್ತಮವಾಗಿರಬೇಕು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಹೇಳಿದ್ದಾರೆ. ಇದೇ ವೇಳೆ, ''ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ'' ಎಂದು ಹೊಗಳಿದ್ದಾರೆ.
ಚೆನ್ನೈನಲ್ಲಿ ಇಂದು (ಮಂಗಳವಾರ) ನಡೆಯಲಿರುವ ಸಿಎಸ್‌ಕೆ ಮತ್ತು ಕೆಕೆಆರ್ ಪಂದ್ಯಕ್ಕೂ ಮುನ್ನ ಮಾತನಾಡಿದ ಗೌತಮ್ ಗಂಭೀರ್, ''ನೈಟ್ ರೈಡರ್ಸ್ ನಾಯಕನಾಗಿದ್ದ ದಿನಗಳಲ್ಲಿ ಧೋನಿ ಹಾಗೂ ಸೂಪರ್ ಕಿಂಗ್ಸ್ ತಂಡದೊಂದಿನ ಪೈಪೋಟಿಯನ್ನು ನಾನು ಆನಂದಿಸಿದ್ದೇನೆ'' ಎಂದರು.