ಹೈದರಾಬಾದ್:ಐಪಿಎಲ್ನಲ್ಲಿ ಕಳಪೆ ಆಟ, ರೋಹಿತ್ ಶರ್ಮಾ ಅಭಿಮಾನಿಗಳಿಂದ ತಿರಸ್ಕಾರ, ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಚೇದನ ವದಂತಿ ಹೀಗೆ ಸಾಲು ಸಾಲು ಸಮಸ್ಯೆಗಳಲ್ಲಿ ಸಿಲುಕಿರುವ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವಿಶ್ವಕಪ್ನಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದಾರೆ.
ತಂಡಕ್ಕೆ ಅಗತ್ಯವಿರುವಾಗ ಬೌಲಿಂಗ್ನಲ್ಲಿ ವಿಕೆಟ್, ಬ್ಯಾಟಿಂಗ್ನಲ್ಲಿ ರನ್ ಗಳಿಸಿ ಟಿ20 ವಿಶ್ವಕಪ್ನಲ್ಲಿ ಆಪತ್ಬಾಂಧವನಾಗಿದ್ದಾರೆ. ಇದೆಲ್ಲ ನೋಡಿದಾಗ ಹಾರ್ದಿಕ್ ಪಾಂಡ್ಯ ಎಲ್ಲ ಸಮಸ್ಯೆಗಳಿಂದ ಹೊರಬರುತ್ತಿದ್ದಾರಾ ಎಂಬುದು ವಿಧಿತವಾಗುತ್ತಿದೆ.
ಈ ಎಲ್ಲಕ್ಕಿಂತ ಪಾಂಡ್ಯರನ್ನು ಕಾಡಿದ್ದು, ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ನೀಡಲಿದ್ದಾರೆ ಎಂಬ ವೈರಲ್ ಸುದ್ದಿ. ನತಾಶಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಎಂಬ ಹೆಸರನ್ನು ಕೈಬಿಟ್ಟು, ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ ಬಳಿಕ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿತ್ತು. ಹಾರ್ದಿಕ್ ತನ್ನ ಆಸ್ತಿಯಲ್ಲಿ ಶೇಕಡಾ 70ರಷ್ಟು ಪರಿಹಾರವಾಗಿ ನೀಡಲು ಮುಂದಾಗಿದ್ದಾರೆ ಎಂಬಲ್ಲಿಗೆ ವರದಿಯಾಗಿತ್ತು.
ಆದರೆ, ಕೆಲ ದಿನಗಳ ನಂತರ ಈ ವಿಷಯವೇ ತಣ್ಣಗಾಯಿತು. ದಾಂಪತ್ಯದ ಬಂಡಿ ಮತ್ತೆ ಹಳಿಗೆ ಬಂದಿದೆ ಎಂಬ ಗುಸುಗುಸು ಹಬ್ಬಿತ್ತು. ಕಾರಣ, ನತಾಶಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾರ್ದಿಕ್ ಫೋಟೋಗಳನ್ನು ಮರು ಪೋಸ್ಟ್ ಮಾಡಿದ್ದರು. ಇದೀಗ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಜೊತೆಗಿನ ಮಾತುಕತೆ ವಿಚ್ಚೇದನ ವದಂತಿಗೆ ಇತಿಶ್ರೀ ಹಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.