ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗ ಕೊಂಚ ಹೆಚ್ಚೇ ಸುದ್ಧಿಯಲ್ಲಿದ್ದಾರೆ. ವಿಚ್ಚೇದನದ ಬಳಿಕ ನಟಿಯೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಹರಿದಾಡಿವೆ. ಅಷ್ಟೇ ಅಲ್ಲ, ಒಂದಲ್ಲ, ಮೂವರು ನಟಿಯರೊಂದಿಗೆ ಹಾರ್ದಿಕ್ ಹೆಸರು ತಳುಕು ಹಾಕಿಕೊಂಡಿದೆ.
ಮೊದಲಿಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಹಾರ್ದಿಕ್ ಡೇಟಿಂಗ್‌ನಲ್ಲಿದ್ದಾರೆ ಎಂದು ಸುದ್ಧಿಯಾಗಿತ್ತು. ಅದಾದ ಬಳಿಕ ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆಗಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದವು. ಆದರೀಗ ಬಾಲಿವುಡ್ನ ಖ್ಯಾತ ನಟಿ ಪಾಂಡ್ಯರನ್ನು ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿಯೇ ಮನದಾಸೆ ಹೊರಹಾಕಿದ್ದಾರೆ.
ಹೌದು, ನಟಿ ಇಶಿತಾ ರಾಜ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಂದರ್ಶನವೊಂದರಲ್ಲಿ ಪಾಂಡ್ಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನನಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅಂದ್ರೆ ಹುಚ್ಚು. ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಅವರ ಬ್ಯಾಟಿಂಗ್ ನೋಡುವುದು ಮನಸ್ಸಿಗೆ ಮುದ ನೀಡುತ್ತದೆ. ಹಾರ್ದಿಕ್ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಭಾರತ ತಂಡ ಸಂಕಷ್ಟದಲ್ಲಿದ್ದರೆ ಹಾರ್ದಿಕ್ ಕ್ರೀಸ್ನಲ್ಲಿರುವವರೆಗೆ ತಂಡ ಗೆಲ್ಲುವ ಭರವಸೆ ಇರುತ್ತದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಾರ್ದಿಕ್-ನತಾಶಾ ವಿಚ್ಛೇದನ ಪಡೆದಿರುವುದು ಯಾಕೆ?: ಬಹಿರಂಗವಾಯ್ತು ಪ್ರಮುಖ ಕಾರಣ! - Hardik Natasa Divorce Reason
ಇಶಿತಾ ಸಿನಿಮಾ ಜರ್ನಿ: 34 ವರ್ಷದ ಇಶಿತಾ 2011ರಲ್ಲಿ ‘ಪ್ಯಾರ್ ಕಾ ಪಂಚ್ ನಾಮಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರ ನಟಿಗೆ ಸಾಕಷ್ಟು ಮನ್ನಣೆ ತಂದುಕೊಟ್ಟಿತು. ನಂತರ ಸೋನು ಕೆ ಟಿಟು ಕಿ ಸ್ವೀಟಿಯಂತಹ ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ಇಶಿತಾ ಈವರೆಗೆ 9 ಸಿನಿಮಾಗಳಲ್ಲಿ ನಟಿಸಿದ್ದಾರೆ.