ಕರ್ನಾಟಕ

karnataka

ETV Bharat / sports

ನೂರನೇ ಟೆಸ್ಟ್​ ಪಂದ್ಯವಾಡುತ್ತಿರುವ ಬೆನ್​ ಸ್ಟೋಕ್ಸ್​: ಇಂಗ್ಲೆಂಡ್​ ಪರ ಶತಕದ ಟೆಸ್ಟ್​ ಆಡಿದ 16 ನೇ ಆಟಗಾರ - Ben Stokes

ಇಂಗ್ಲೆಂಡ್​ ಪರ 16ನೇ ಆಟಗಾರನಾಗಿ ಭಾರತದ ವಿರುದ್ಧ ನಾಯಕ ಬೆನ್​ ಸ್ಟೋಕ್ಸ್ ಅವರು ತಮ್ಮ ನೂರನೇ ಟೆಸ್ಟ್​ ಪಂದ್ಯವಾಡುತ್ತಿದ್ದಾರೆ.​

ಬೆನ್​ ಸ್ಟೋಕ್ಸ್
ಬೆನ್​ ಸ್ಟೋಕ್ಸ್

By ETV Bharat Karnataka Team

Published : Feb 15, 2024, 11:00 AM IST

ರಾಜ್​ಕೋಟ್​​ (ಗುಜರಾತ್​) :ಇಲ್ಲಿನ ನಿರಂಜನ್​ ಶಾ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವೆ ಮೂರನೇ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಇಂಗ್ಲೆಂಡ್​ ನಾಯಕ ಬೆನ್​ ಸ್ಟೋಕ್ಸ್ ಅವರಿ​ಗೆ ವಿಶೇಷ ಪಂದ್ಯವಾಗಿದೆ. ಕಾರಣ ಇಷ್ಟೇ ಇದು ಅವರ ನೂರನೇ ಟೆಸ್ಟ್​ ಪಂದ್ಯಾವಾಗಿದೆ. ಈವರೆಗೆ 100 ಟೆಸ್ಟ್​ಗಳನ್ನು ಆಡಿರುವ ಆಟಗಾರರಲ್ಲಿ ಬೆನ್​ ಸ್ಟೋಕ್​​ 76ನೇ ಆಟಗಾರರಾಗಿದ್ದಾರೆ.

ತನ್ನ ವೃತ್ತಿಬದುಕಿನ ನೂತನ ಮೈಲಿಗಲ್ಲಿನ ಪಂದ್ಯವನ್ನಾಡುತ್ತಿರುವ ಸ್ಟೋಕ್ಸ್​ ಇಂಗ್ಲೆಂಡ್​ ಕ್ರಿಕೆಟ್​ ಇತಿಹಾಸದಲ್ಲಿ ನೂರನೇ ಟೆಸ್ಟ್​ ಪಂದ್ಯವಾಡಿದ 16ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪ್ರಸುತ್ತ ತಂಡದಲ್ಲಿರುವ ವೇಗದ ಬೌಲರ್​ ಜೇಮ್ಸ್​ ಆಂಡರ್ಸನ್​ ಮತ್ತು ಸ್ಟಾರ್​ ಬ್ಯಾಟರ್​ ಜೋ ರೂಟ್​ ಅವರೊಂದಿಗೆ ಬೆನ್​ ಸ್ಟೋಕ್ಸ್​ ಕೂಡ ಎಲೈಟ್​ ಕ್ಲಬ್​ಗೆ ಸೇರಿದ್ದಾರೆ. 2013ರಲ್ಲಿ ಪದಾರ್ಪಣೆ ಮಾಡಿದ ಸ್ಟೋಕ್ಸ್, ಕ್ರಿಕೆಟ್‌ ಜಗತ್ತಿನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ಜೊತೆಗೆ ಆನೇಕ ಪಂದ್ಯಗಳನ್ನು ಏಕಾಂಗಿಯಾಗಿ ಆಡಿ ಗೆಲ್ಲಿಸಿರುವ ಆನೇಕ ಉದಾಹರಣೆಗಳು ಸಹಾ ನೋಡಬಹುದಾಗಿದೆ.

ಇಂಗ್ಲೆಂಡ್‌ನ ಟೆಸ್ಟ್ ನಾಯಕನಾಗಿ ಸ್ಟೋಕ್ಸ್ ಅದ್ಭುತ ಯಶಸ್ಸು ಕಂಡಿದ್ದು, ಅವರ ನಾಯಕತ್ವದಲ್ಲಿ ಇಂಗ್ಲೆಂಡ್ 20 ಟೆಸ್ಟ್‌ಗಳಲ್ಲಿ 14 ಪಂದ್ಯಗಳನ್ನು ಗೆದ್ದಿದೆ. ನಾಯಕನಾಗಿ ಅಲ್ಲದೇ, ಬ್ಯಾಟಿಂಗ್​​ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈವರೆಗೂ 99 ಟೆಸ್ಟ್​​​ಗಳಲ್ಲಿ 36.34ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದು, 6,251 ರನ್ ಗಳಿಸಿದ್ದಾರೆ. 31 ಅರ್ಧಶತಕ, 13 ಶತಕ ಕೂಡ ಸಿಡಿಸಿದ್ದಾರೆ. ಇನ್ನು ಬೌಲಿಂಗ್​ನಲ್ಲಿ 197 ವಿಕೆಟ್ ಉರುಳಿಸಿದ್ದಾರೆ.

ದೇಶವಾರು ನೂರು ಟೆಸ್ಟ್​ ಕ್ರಿಕೆಟ್​ ಆಡಿರುವ ಆಟಗಾರರ ಅಂಕಿ - ಅಂಶಗಳನ್ನು ನೋಡುವುದಾದರೇ, ಈವರಗೆ ಇಂಗ್ಲೆಂಡ್​ ಪರ ಅತಿ ಹೆಚ್ಚು ನೂರು ಟೆಸ್ಟ್​ ಆಡಿರುವ 16 ಆಟಗಾರಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾ 15, ಭಾರತದ 13, ವೆಸ್ಟ್ ಇಂಡೀಸ್ 9, ದಕ್ಷಿಣ ಆಫ್ರಿಕಾ 8, ಶ್ರೀಲಂಕಾ 6, ಪಾಕಿಸ್ತಾನ 5 ಮತ್ತು ನ್ಯೂಜಿಲೆಂಡ್​ ತಂಡಗಳ ಐವರು ಆಟಗಾರರು ನೂರು ಟೆಸ್ಟ್​ ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ.

100 ಟೆಸ್ಟ್​ ಆಡಿದ ಟೀಮ್ ಇಂಡಿಯಾ ಆಟಗಾರರು :​ ಭಾರತ ಪರ 13 ಆಟಗಾರರಲ್ಲಿ ಸಚಿನ್​ ತೆಂಡೂಲ್ಕರ್​ ಅತಿ ಹೆಚ್ಚು ಟೆಸ್ಟ್​ (200) ಪಂದ್ಯಗಳನ್ನು ಆಡಿದ್ದಾರೆ. ರಾಹುಲ್​ ದ್ರಾವಿಡ್​ 163, ವಿವಿಎಸ್​ ಲಕ್ಷ್ಮಣ್​ 134, ಅನಿಲ್ ಕುಂಬ್ಳೆ 132, ಕಪಿಲ್​ ದೇವ್​ 131, ಸುನೀಲ್​ ಗವಾಸ್ಕರ್​ 125, ದಿಲೀಪ್​ ವೆಂಗ್​ಸರ್ಕರ್​ 116, ಸೌರವ್​ ಗಂಗೂಲಿ 113, ವಿರಾಟ್​ ಕೊಹ್ಲಿ 111, ಇಶಾಂತ್​ ಶರ್ಮಾ 105, ಹರ್ಭಜನ್​ ಸಿಂಗ್ 103, ಚೇತೇಶ್ವರ ಪೂಜಾರ 103, ವೀರೇಂದ್ರ ಸೆಹ್ವಾಗ್​ 103 ಪಂದ್ಯಗಳಲ್ಲಿ ಟೆಸ್ಟ್​ ಕ್ಯಾಪ್ ತೊಟ್ಟಿದ್ದಾರೆ. ಜೊತೆಗೆ ರವಿಚಂದ್ರನ್​ ಆಶ್ವಿನ್​ ಅವರು ಕೂಡ 98 ಟೆಸ್ಟ್​ ಪಂದ್ಯಗಳಾಡಿದ್ದು, 100 ರ ಸನಿಹದಲ್ಲಿದ್ದಾರೆ.

ಇದನ್ನೂ ಓದಿ :ರಾಜ್​ಕೋಟ್​ ಟೆಸ್ಟ್​: ಟಾಸ್ ಸೋತ​ ಇಂಗ್ಲೆಂಡ್, ಬ್ಯಾಟಿಂಗ್​ ಆರಂಭಿಸಿದ ಭಾರತ

ABOUT THE AUTHOR

...view details