Ind vs Ban: ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಿವೆ. ದುಬೈ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬಾಂಗ್ಲಾ ಮೊದಲು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಆಗಮಿಸಿ ಆರಂಭಿಕ ಆಘಾತ ಅನುಭವಿಸಿತು. ಟಾಪ್ ಆರ್ಡರ್ ಕೈಕೊಟ್ಟ ಕಾರಣ ತಂಡ ಸಂಕಷ್ಟಕ್ಕೆ ಸಿಲುಕಿತು.
ಆರಂಭಿಕ ಬ್ಯಾಟರ್ಗಳಾದ ತಂಜಿದ್ ಹಸನ್ (25), ಮೆಹದಿ ಹಸನ್ (5) ಹೊರತುಪಡಿಸಿ ಮೂವರು ಬ್ಯಾಟರ್ಗಳಾದ ಸೌಮ್ಯ ಸರ್ಕಾರ್, ಸಜ್ಮುಲ್ ಹೊಸೆನ್ ಶಾಂಟೋ, ಮುಷ್ಪಿಕರ್ ರಹಿಮ್ ಡಕ್ಔಟ್ ಆಗಿದ್ದು ತಂಡದ ಸ್ಕೋರ್ ಬೋರ್ಡ್ಗೆ ಭಾರೀ ಹೊಡೆತ ಬಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ತೊಹಿದ್ ಹ್ರದೋಯ್ ಮತ್ತು ಜಾಕರ್ ಅಲಿ ಅರ್ಧಶತಕ ಸಿಡಿಸಿ ಅಲ್ಪಮೊತ್ತದ ಸ್ಕೋರ್ನಿಂದ ತಂಡವನ್ನು ಪಾರು ಮಾಡಿದರು.
First over, first strike! #MohammadShami takes no time to get India going with a quick breakthrough!
— Star Sports (@StarSportsIndia) February 20, 2025
📺📱 Start watching FREE on JioHotstar: https://t.co/dWSIZFgk0E#ChampionsTrophyOnJioStar 👉 #INDvBAN, LIVE NOW on Star Sports 1 & Star Sports 1 Hindi! pic.twitter.com/TlaawDuIwh
ಅಕ್ಷರ್ ಹ್ಯಾಟ್ರಿಕ್ ಸಾಧನೆ ಮಿಸ್: ಏತನ್ಮಧ್ಯೆ, ಅಕ್ಷರ್ ಪಟೇಲ್ ಹ್ಯಾಟ್ರಿಕ್ ವಿಕೆಟ್ ಮಿಸ್ ಆಗಿದ್ದು ಇದರಿಂದ ಐತಿಹಾಸಿಕ ದಾಖಲೆ ಸ್ವಲ್ಪದರಲ್ಲೇ ಕೈ ತಪ್ಪಿತು. ಈವರೆಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವೊಬ್ಬ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿಲ್ಲ. ಆದರೆ ಇಂದಿನ ಪಂದ್ಯಲ್ಲಿ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಮಾಡುವ ಸುವರ್ಣಾವಕಾಶ ದೊರೆತಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಮಾಡಿದ ತಪ್ಪಿನಿಂದಾಗಿ ಅಕ್ಷರ್ ಸಾಧನೆ ಕೈತಪ್ಪಿತು.
ಪಂದ್ಯದ 8ನೇ ಓವರ್ನಲ್ಲಿ ಅಕ್ಷರ್ ಬೌಲಿಂಗ್ಗೆ ಆಗಮಿಸಿದರು. ಓವರ್ನ 2ನೇ ಎಸೆತದಲ್ಲಿ ತಂಜಿದ್ ಹಸನ್ ಅವರನ್ನು ಔಟ್ ಮಾಡಿದರು. ಇದರ ಬೆನ್ನಲ್ಲೇ ಮುಂದಿನ ಎಸೆತದಲ್ಲಿ ಮುಷ್ಪಿಕರ್ ರಹಿಮ್ ವಿಕೆಟ್ ಪಡೆದರು. ಈ ಇಬ್ಬರ ನಿರ್ಗಮನದ ಬಳಿಕ ಬಂದಿದ್ದ ಜಾಕರ್ ಅಲಿ ಕೂಡ ಅಕ್ಷರ್ ಅವರ ಮುಂದಿನ ಎಸೆತದಲ್ಲೇ ಸ್ಲೀಪ್ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಎಡವಟ್ಟು ಮಾಡಿದ ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ್ದರು. ಇದರಿಂದಾಗಿ ಅಕ್ಷರ್ ಹ್ಯಾಟ್ರಿಕ್ ವಿಕೆಟ್ ಕೈತಪ್ಪಿತು.
Rohit Sharma apologising to Axar Patel. pic.twitter.com/TwjVWkZgYO
— Mufaddal Vohra (@mufaddal_vohra) February 20, 2025
ಕೈ ಮುಗಿದು ಕ್ಷಮೆ ಕೇಳಿದ ರೋಹಿತ್: ಜಾಕರ್ ಅಲಿ ಕ್ಯಾಚ್ ಕೈಚೆಲ್ಲಿದ ರೋಹಿತ್ ಶರ್ಮಾ ಅಕ್ಷರ್ ಪಟೇಲ್ ಐತಿಹಾಸಿಕ ಸಾಧನೆಗೂ ಮುಳುವಾದರು. ಇದರ ಬೆನ್ನಲ್ಲೇ ತಮ್ಮನ್ನು ಕ್ಷಮಿಸಿ ಎಂದು ಕೈ ಮಿಗಿದು ಎಲ್ಲರೆದುರೇ ಕ್ಷಮೆ ಕೋರಿದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಬಾಂಗ್ಲಾ ಜೀವದಾನ: 23ರನ್ ಗಳಿಸಿದ್ದ ಹೃದೊಯಿ ಅವರ ಕ್ಯಾಚ್ ಅನ್ನು ಪಾಂಡ್ಯ ಕೈಚೆಲ್ಲಿದರು. ಇದರ ಬೆನ್ನಲ್ಲೇ ಜಾಕೆರ್ ಅಲಿ 24 ರನ್ ಗಳಿಸಿದ್ದ ವೇಳೆ ಕೆ.ಎಲ್.ರಾಹುಲ್ ಸ್ಟಂಪಿಂಗ್ ಮಿಸ್ ಮಾಡಿದರು. ಸಿಕ್ಕ ವರದಾನವನ್ನು ಸದುಪಯೋಗಪಡಿಸಿಕೊಂಡಿರುವ ಬಾಂಗ್ಲಾ ಆಟಗಾರರು ಉತ್ತಮ ಮೊತ್ತ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾ: ಸಂಕಷ್ಟದಲ್ಲಿ ತಂಡ!