ನವದೆಹಲಿ: ಭಾರತ ಕ್ರಿಕೆಟ್ ತಂಡ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಟೆಸ್ಟ್, ಏಕದಿನ ಮತ್ತು ಟಿ20 ಎಲ್ಲಾ ಮೂರು ಸ್ವರೂಪಗಳಲ್ಲಿ ಅತ್ಯುತ್ತಮ ಆಟಕ್ಕೆ ಟೀಂ ಇಂಡಿಯಾ ಹೆಸರುವಾಸಿಯಾಗಿದೆ. ಭಾರತ ತಂಡವು ತಲಾ ಎರಡು ಬಾರಿ ODI ಮತ್ತು T20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದೆ. ಟೆಸ್ಟ್ ಕ್ರಿಕೆಟ್‌ನಲ್ಲೂ ಉತ್ತಮ ಸ್ಥಾನದಲ್ಲಿದೆ. ಕಾಲಕಾಲಕ್ಕೆ ಭಾರತ ಬಲಿಷ್ಠ ತಂಡವಾಗಿ ರೂಪುಗೊಂಡಿದೆ.
ಅದರಲ್ಲೂ ಭಾರತದ ಬೌಲರ್‌ಗಳು ತಮ್ಮ ಮಾರಕ ದಾಳಿಯಿಂದಲೇ ಎದುರಾಳಿಗಳ ಬೆವರಿಳಿಸುತ್ತಾರೆ. ಹಾಗಾಗಿ ಭಾರತದ ವಿರುದ್ಧ ರನ್ ಗಳಿಸುವುದು ಯಾವುದೇ ಬ್ಯಾಟರ್ಗಳಿಗೆ ಸುಲಭದ ವಿಷಯವಲ್ಲ. ಆದರೂ ಕೆಲವು ವಿದೇಶಿ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ವಿರುದ್ಧ ಅಬ್ಬರಿಸಿ ಶತಕಗಳನ್ನು ಬಾರಿಸಿದ್ದಾರೆ. ಹಾಗಾದ್ರೆ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳು ಯಾರು ಅನ್ನೋದನ್ನು ತಿಳಿಯೋಣ..
ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ಗಳು
1. ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಸ್ಟೀವ್ ಸ್ಮಿತ್ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಅಗ್ರ ಬ್ಯಾಟರ್ ಆಗಿದ್ದಾರೆ. ಸ್ಮಿತ್ ಟೀಂ ಇಂಡಿಯಾ ವಿರುದ್ಧ 22 ಪಂದ್ಯಗಳಲ್ಲಿ 41 ಇನ್ನಿಂಗ್ಸ್ ಆಡಿ 10 ಶತಕ ಸಿಡಿಸಿದ್ದಾರೆ.
2. ಜೋ ರೂಟ್:ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೋ ರೂಟ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ರೂಟ್ ಭಾರತದ ವಿರುದ್ಧ 30 ಪಂದ್ಯಗಳನ್ನು ಆಡಿ ಒಟ್ಟು 10 ಶತಕಗಳನ್ನು ಸಿಡಿಸಿದ್ದಾರೆ.
3. ಗ್ಯಾರಿ ಸೋಬರ್:ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಗ್ಯಾರಿ ಸೋಬರ್ ಭಾರತದ ವಿರುದ್ಧ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಗ್ಯಾರಿ 18 ಪಂದ್ಯಗಳ 30 ಇನ್ನಿಂಗ್ಸ್‌ಗಳಲ್ಲಿ ಒಟ್ಟು 8 ಶತಕಗಳನ್ನು ಗಳಿಸಿದ್ದಾರೆ.
4. ವಿವ್ ರಿಚರ್ಡ್ಸ್:ವೆಸ್ಟ್ ಇಂಡೀಸ್‌ನ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ವಿವ್ ರಿಚರ್ಡ್ಸ್ ಭಾರತದ ವಿರುದ್ಧ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 28 ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಗಳಿಸಿದ್ದಾರೆ.
5. ರಿಕಿ ಪಾಂಟಿಂಗ್:ಆಸ್ಟ್ರೇಲಿಯಾದ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ ಭಾರತದ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಐದನೇ ಬ್ಯಾಟ್ಸ್‌ಮನ್. ಪಾಂಟಿಂಗ್ ಅವರು 29 ಪಂದ್ಯಗಳ 51 ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ:ಗಬ್ಬಾ ಟೆಸ್ಟ್ನಲ್ಲೂ ಮೌನಕ್ಕೆ ಜಾರಿದ ಕೊಹ್ಲಿ ಬ್ಯಾಟ್: ನಿವೃತ್ತಿಗೆ ಒತ್ತಾಯ!