Cricketers fitness Secret: ಇತ್ತೀಚಿನ ದಿನಗಳಲ್ಲಿ ಯುವಕರಿಂದ ಹಿಡಿದು ಹಿರಿಯರ ವರೆಗೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅದರಲ್ಲೂ ಕಿರಿಯ ವಯಸ್ಸಿನಲ್ಲೇ ಕೆಲವರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಆಗಿದೆ.
ಹೆಚ್ಚಿನ ಜನ ರುಚಿಯ ಆಸೆಗೆ ಬಿದ್ದು ಜಂಕ್ ಫುಡ್ಗಳನ್ನು ತಿನ್ನುವುದು, ಹೆಚ್ಚಿನ ಎಣ್ಣೆ ಪದಾರ್ಥಗಳ ಆಹಾರ ಸೇವನೆ ಮಾಡುವುದು ಇವು ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತವೆ. ನೀವೂ ಸದಾ ಆರೋಗ್ಯವಾಗಿರುಲು ಬಯಸಿದರೇ ಅಥ್ಲೀಟ್ಗಳ ಈ ದಿನಚರಿ ಫಾಲೋ ಮಾಡಿದರೇ ಸಾಕು 100 ವರ್ಷಗಳ ಕಾಲ ಆರೋಗ್ಯವಾಗಿರುವಿರಿ. ಹಾಗಾದರೆ ಅದರ ಬಗ್ಗೆ ಇದೀಗ ತಿಳಿಯೋಣ ಬನ್ನಿ.
ಆರೋಗ್ಯಕರ ಆಹಾರ ಪದ್ಧತಿ: ಕ್ರಿಕೆಟರ್ಗಳ ಹಾಗೆ ಸದಾ ಫಿಟ್ ಆಗಿರಲು ಉತ್ತಮ ಆಹಾರ ಸೇವನೆ ಮಾಡಬೇಕು. ಮಸಾಲೆಯುಕ್ತ ಪದಾರ್ಥ ಮತ್ತು ಜಂಕ್ ಫುಡ್ಗಳನ್ನು ಆದಷ್ಟು ಕಡಿಮೆ ಮಾಡಿ ಮನೆಯಲ್ಲೇ ತಯಾರಿಸಿದ ಶುದ್ಧ ಆಹಾರ ಸೇವನೆ ಮಾಡುವುದು ಉತ್ತಮ. ದೈನಂದಿನ ಆಹಾರದಲ್ಲಿ ನಾರಿನಾಂಶ ಮತ್ತು ಪೌಷ್ಟಿಕಾಂಶ ಹೆಚ್ಚಿರುವ ಪದಾರ್ಥಗಳ ಸೇವನೆ ಮಾಡಿ. ಆದಷ್ಟು ಸಕ್ಕರೆ ಮತ್ತು ಉಪ್ಪಿನ ಅಂಶ ಕಡಿಮೆ ಮಾಡಿ. ದಿನವೂ ನಿಯಮಿತ ಪ್ರಮಾಣದಲ್ಲಿ ಡ್ರೈ ಫ್ರೂಟ್ಗಳ ಸೇವನೆ ಮಾಡಿ.
ಹಣ್ಣುಗಳ ಸೇವನೆ: ನಿತ್ಯ ತಾಜಾ ಹಣ್ಣುಗಳ ಸೇವನೆ ಮಾಡುವುದು ಉತ್ತಮ ಆರೋಗ್ಯಕ್ಕೆ ಸಹಾಕವಾಗಲಿದೆ. ಸಲಾಡ್ ರೂಪದಲ್ಲಿ ಹಣ್ಣುಗಳ ಸೇವನೆ ಮಾಡುವುದರಿಂದ ಹಸಿವೆಯೂ ಕಡಿಮೆ ಆಗಲಿದ್ದು ಹೆಚ್ಚಿನ ಎನರ್ಜಿ ಸಿಗಲಿದೆ.
ನಿಯಮಿತ ವ್ಯಾಯಾಮ: ಆರೋಗ್ಯಕರ ಜೀವನ ಶೈಲಿಗಾಗಿ ನಿತ್ಯ ವ್ಯಾಯಾಮ ಅನುಸರಿಸಬೇಕು. ಪ್ರತಿದಿನ ವಾಕಿಂಗ್, ಜಾಗಿಂಗ್ ಜೊತೆಗೆ ಯೋಗಾಭ್ಯಾಸಗಳನ್ನು ರೂಢಿಸಿಕೊಂಡರೇ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ದೂರವಾಗುವುದರ ಜೊತೆಗೆ ದೈಹಿಕವಾಗಿಯೂ ಸದೃಢವಾಗುವಿರಿ.
ಹೆಚ್ಚಿನ ನೀರು ಸೇವನೆ: ಉತ್ತಮ ಆರೋಗ್ಯಕ್ಕಾಗಿ ನೀರು ಸೇವನೆ ಕೂಡ ಪ್ರಮುಖವಾಗಿದೆ. ನಮ್ಮ ದೇಹವೂ ಶೇಕಡಾ 60 ರಷ್ಟು ನೀರನ್ನು ಹೊಂದಿದ್ದು ಈ ಹಿನ್ನೆಲೆ ನಿತ್ಯ 7 ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಅಂದರೆ 2 ರಿಂದ 3 ಲೀಟರ್ ನೀರು ಕುಡಿಯುವುದು ಉತ್ತಮ. ಅದರಲ್ಲೂ ಬಿಸಿಲಿನಲ್ಲಿ ಕೆಲಸ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು.
ಉತ್ತಮ ನಿದ್ರೆ: ಉತ್ತಮ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯವಾಗಿದೆ. ನಿತ್ಯ ಕನಿಷ್ಠ 7 ರಿಂದ 8 ಗಂಟೆ ನಿದ್ರೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಸ್ಟಾರ್ ಕ್ರಿಕೆಟರ್ ಕೊಹ್ಲಿ ಕೂಡ ನಿತ್ಯ 7 ರಿಂದ 8 ಗಂಟೆ ನಿದ್ರೆಯನ್ನು ಮಾಡುವುದಾಗಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ನಾಯಕ ರೋಹಿತ್ ಶರ್ಮಾಗೆ ಬಿಗ್ ಶಾಕ್; ಕನ್ನಡಿಗನಿಗೆ ಮಣೆ ಹಾಕುಲು ಮುಂದಾದ BCCI