ETV Bharat / sports

ನಾಯಕ ರೋಹಿತ್​ ಶರ್ಮಾಗೆ ಬಿಗ್​ ಶಾಕ್​; ಕನ್ನಡಿಗನಿಗೆ ಮಣೆ ಹಾಕುಲು ಮುಂದಾದ BCCI - ROHIT SHARMA

ಸತತ ಕಳಪೆ ಫಾರ್ಮ್​ನಿಂದ ಕಂಗೆಟ್ಟಿರುವ ರೋಹಿತ್​ ಶರ್ಮಾಗೆ ಬಿಗ್​ ಶಾಕ್​ ಎದುರಾಗಿದ್ದು, ಕನ್ನಡಿಗರಿಗೆ ಮಣೆಹಾಕಲು ಬಿಸಿಸಿಐ ಮುಂದಾಗಿದೆ.

KARUN NAIR  BCCI  ENGALAND ODI SERIES  ENGALAND ODI SERIES INDIA SQUAD
Rohit Sharma (IANS)
author img

By ETV Bharat Sports Team

Published : Jan 16, 2025, 2:36 PM IST

ಹೈದರಾಬಾದ್: ಈ ತಿಂಗಳು 22ನೇ ತಾರೀಖಿನಿಂದ ಭಾರತ ಮತ್ತು ಇಂಗ್ಲೆಂಡ್​ ನಡುವೆ ಟಿ-20 ಪಂದ್ಯಗಳು ನಡೆಯಲಿವೆ. ಭಾರತ ಪ್ರವಾಸಕ್ಕೆ ಆಗಮಿಸುತ್ತಿರುವ ಇಂಗ್ಲೆಂಡ್​ 5 ಟಿ-20 ಮತ್ತು 3 ಏಕದಿನ ಪಂದ್ಯ ಆಡಲಿದೆ. ಈಗಾಗಲೇ ಟಿ-20 ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಏಕದಿನ ಸರಣಿಗೆ ತಂಡ ಪ್ರಕಟ ಮಾಡುವುದು ಬಾಕಿ ಇದೆ. ಏತನ್ಮಧ್ಯೆ ಕನ್ನಡಿಗನಿಗೆ ಶುಭ ಸುದ್ದಿಯೊಂದು ಕಾದಿದೆ.

ಹೌದು, ಮುಂದಿನ ತಿಂಗಳು ಅಂದರೆ ಫೆಬ್ರವರಿ 6 ರಿಂದ ಇಂಗ್ಲೆಂಡ್​ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಕೆಲವೇ ದಿನಗಳಲ್ಲಿ ಬಿಸಿಸಿಐ ಏಕದಿನ ತಂಡ ಪ್ರಕಟಿಸಲಿದೆ. ಈ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಪ್ರಸ್ತುತ ನಡೆಯುತ್ತಿರುವ ವಿಜಯ್​ ಹಜಾರೆ ಟ್ರೋಫಿ ಪಂದ್ಯಾವಳಿಗಳಲ್ಲಿ ಕನ್ನಡಿಗ ಬ್ಯಾಟರ್​ ಸಖತ್​ ಸೌಂಡ್​ ಮಾಡುತ್ತಿದ್ದಾರೆ. ವಿದರ್ಭ ತಂಡದ ಪರ ಆಡುತ್ತಿರುವ ಕರುಣ್​ ನಾಯರ್​ ಉತ್ತಮ ಫಾರ್ಮ್​ನಲ್ಲಿದ್ದು ಶತಕಗಳ ಮೇಲೆ ಶತಕ ಸಿಡಿಸಿ ಬಿಸಿಸಿಐನ ಗಮನ ಸೆಳೆದಿದ್ದಾರೆ.

ಜಮ್ಮು ಕಾಶ್ಮೀರ ವಿರುದ್ಧ ಮೊದಲ ಪಂದ್ಯದೊಂದಿಗೆ ಶತಕದ ಭೇಟಿ ಆರಂಭಿಸಿದ ನಾಯರ್​ ರಾಜಸ್ತಾನ ವಿರುದ್ಧದ 7ನೇ ಪಂದ್ಯದ ವರೆಗೂ ಮುಂದುವರೆಸಿದ್ದಾರೆ. 6 ಪಂದ್ಯಗಳಲ್ಲಿ ಅಜೇಯವಾಗಿ 5 ಶತಕ ಸಿಡಿಸಿ 664ರ ಸರಾಸರಿಯಲ್ಲಿ 664 ರನ್​ ಕಲೆಹಾಕಿದ್ದಾರೆ. ಇದರೊಂದಿಗೆ ತಮ್ಮ ಸಾಮರ್ಥ್ಯವನ್ನು ಬಿಸಿಸಿಐಗೆ ತೋರಿಸಿದ್ದಾರೆ. ಅವರ ಈ ಸಾಲಿಡ್​ ಬ್ಯಾಟಿಂಗ್​ಗೆ ಇದೀಗ ದೊಡ್ಡ ಆಫರ್​ ಸಿಗುವ ಸಾಧ್ಯತೆ ಇದೆ. ಇಂಗ್ಲೆಂಡ್​ ವಿರುದ್ಧದ ಏಕದಿನ ತಂಡದಲ್ಲಿ ನಾಯರ್​ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ, ತಂಡದಲ್ಲಿ ಸ್ಥಾನ ಸಿಕ್ಕು ಉತ್ತಮ ಪರ್ಫಾಮೆನ್ಸ್​ ತೋರಿದರೇ ಚಾಂಪಿಯನ್ಸ್​ ಟ್ರೋಫಿಗೂ ಆಯ್ಕೆಯಾದರೆ ಅಚ್ಚರಿ ಪಡಬೇಕಿಲ್ಲ.

ಇದಷ್ಟೇ ಅಲ್ಲದೇ ಟೆಸ್ಟ್​ ತಂಡಕ್ಕೂ ಕರುಣ್​ ನಾಯರ್​ ಆಯ್ಕೆ ಆಗುವ ಸಾಧ್ಯತೆಗಳಿವೆ. ಇತ್ತೀಚಿನ ದಿನಗಳಲ್ಲಿ ರೋಹಿತ್​ ಶರ್ಮಾ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದಾರೆ. ಇತ್ತೀಚೆಗೆ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್​ ಸರಣಿಯಲ್ಲಿ ರೋಹಿತ್​ ಶರ್ಮಾ ನಾಯಕನ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದರು. ಬ್ಯಾಟಿಂಗ್​ನಲ್ಲಿ ಕನಿಷ್ಠ ಅರ್ಧಶತಕ ಬಾರಿಸಲು ಸಾಧ್ಯವಾಗಲಿಲ್ಲ. ಅವರು ಸರಣಿಯಲ್ಲಿ ಕೇವಲ 31 ರನ್​ ಗಳಿಸಲು ಮಾತ್ರ ಸಾಧ್ಯವಾಗಿತ್ತು.

ಈ ಹಿನ್ನೆಲೆ ಚಾಂಪಿಯನ್ಸ್​ ಟ್ರೋಫಿ ಬಳಿಕ ರೋಹಿತ್​ ಶರ್ಮಾ ತಂಡದಲ್ಲಿ ಮುಂದುವರೆಯುವುದು ಅನುಮಾನವಾಗಿದೆ. ಅಲ್ಲದೇ ಅವರ ಸ್ಥಾನಕ್ಕೆ ಮಯಾಂಕ್​ ಅಥವಾ ಕರುಣ್​ ನಾಯರ್​ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಚಿಂತನೆ ಕೂಡ ನಡೆದಿದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ರೋಹಿತ್​ ಅವರ ಅವಕಾವನ್ನು ನಾಯರ್​ ಅಥವಾ ಮಯಾಂಕ್​ ಕಿತ್ತುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಕ್ರಿಕೆಟ್​ ಪಂದ್ಯ ನೋಡಲು ಬಂದಿದ್ದ ಅಭಿಮಾನಿಗೆ ಬಂಪರ್​ ಲಾಟರಿ: ರಾತೋರಾತ್ರಿ ಕೋಟ್ಯಾಧಿಪತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.