BALAKRISHNA CHANDRABABU UNSTOPAPLE 4 Promo: ಟಾಲಿವುಡ್ನ ಖ್ಯಾತ ನಟ ಮತ್ತು ಶಾಸಕರೂ ಆಗಿರುವ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ಅನ್‌ಸ್ಟಾಪೆಬಲ್ ಸೀಸನ್-4 ಟಾಕ್ ಶೋ ಅಕ್ಟೋಬರ್ 25 ರಿಂದ ಜನಪ್ರಿಯ ತೆಲುಗು OTT ಪ್ಲಾಟ್‌ಫಾರ್ಮ್ 'ಆಹಾ'ದಲ್ಲಿ ಪ್ರಾರಂಭವಾಗಲಿದೆ. ಇತ್ತೀಚೆಗಷ್ಟೇ ಮೊದಲ ಸಂಚಿಕೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಚಿತ್ರೀಕರಿಸಿದ್ದು ಗೊತ್ತೇ ಇದೆ. ಈ ಕಾರ್ಯಕ್ರಮದ ಶೂಟಿಂಗ್ ಕೂಡ ಮುಗಿದಿದೆ. ಇದೀಗ ನಿರ್ಮಾಪಕರು ಈ ಸಂಚಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರೋಮೋ ಸುಮಾರು 5 ನಿಮಿಷ 16 ಸೆಕೆಂಡು ಅವಧಿಯದ್ದು ಇದೆ. ಬಾಲಯ್ಯ ಮತ್ತು ಚಂದ್ರಬಾಬು ನಡುವಿನ ಸಂಭಾಷಣೆ ಸ್ವಲ್ಪ ವಿನೋದ ಮತ್ತು ಸ್ವಲ್ಪ ಗಂಭೀರವಾಗಿವೆ.
ಈ ಕಾರ್ಯಕ್ರಮದಲ್ಲಿ ಬಾಲಯ್ಯ ಅವರು ಕೆಲವು ಸೆಲೆಬ್ರಿಟಿಗಳ ಚಿತ್ರಗಳನ್ನು ಪರದೆಯ ಮೇಲೆ ತೋರಿಸಿದರು ಮತ್ತು ಅವರಲ್ಲಿ ನಿಮಗೆ ಯಾರು ಇಷ್ಟ ಎಂದು ಚಂದ್ರಬಾಬು ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಈ ಸಂದರ್ಭದಲ್ಲಿ ಬಾಲಯ್ಯ ಅವರು ಕ್ರಿಕೆಟ್ ದಿಗ್ಗಜರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ಭಾವಚಿತ್ರಗಳನ್ನು ತೋರಿಸುತ್ತಾ ಚಂದ್ರಬಾಬು ಅವರಿಗೆ, ನೀವು ಧೋನಿಯಂತಹ ನಾಯಕನಾ ಅಥವಾ ವಿರಾಟ್ ಕೊಹ್ಲಿಯಂತಹ ಆಟಗಾರನಾ? ಮತ್ತು ಈ ಇಬ್ಬರಲ್ಲಿ ನಿಮ್ಮ ಮೊದಲ ಪ್ರಾಶಸ್ತ್ಯ ಯಾರಿಗೆ ನೀಡುತ್ತೀರಿ ಅನ್ನುವ ಪ್ರಶ್ನೆಯನ್ನು ಕೇಳುತ್ತಾರೆ.