ಪಲ್ಲೆಕೆಲೆ(ಶ್ರೀಲಂಕಾ):ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯ ಭಾನುವಾರ ರಾತ್ರಿ ನಡೆಯಿತು. ಲಂಕಾ ನೀಡಿದ 162 ರನ್ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಇನಿಂಗ್ಸ್‌ಗೆ ಆರಂಭದಲ್ಲೇ ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯವನ್ನು 8 ಓವರ್‌ಗೆ ಇಳಿಸಲಾಯಿತು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ, ಟೀಂ ಇಂಡಿಯಾ ಗೆಲ್ಲಲು 8 ಓವರ್‌ಗಳಲ್ಲಿ 78 ರನ್ ಕಲೆ ಹಾಕಬೇಕಿತ್ತು.
ಯಶಸ್ವಿ ಜೈಶ್ವಾಲ್ (15 ಎಸೆತಗಳಲ್ಲಿ 30 ರನ್), ಸೂರ್ಯಕುಮಾರ್ ಯಾದವ್ (12 ಎಸೆತಗಳಲ್ಲಿ 26 ರನ್), ಹಾರ್ದಿಕ್ ಪಾಂಡ್ಯ (ಔಟಾಗದೆ 22 ರನ್) ಮೂಲಕ 6.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭಾರತ ಈ ಗುರಿ ತಲುಪಿತು. ಗಿಲ್ ಬದಲು ಸಂಜು (0) ಈ ಪಂದ್ಯದಲ್ಲಿ ಅವಕಾಶ ಪಡೆದರು. ಆದರೆ ಅವರು ಯಶಸ್ವಿಯಾಗಲಿಲ್ಲ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಕುಶಾಲ್ ಮೆಂಡಿಸ್ (10 ರನ್) ವಿಫಲರಾದರೆ, ಪಾತುಮ್ ನಿಸ್ಸಾಂಕ (32 ರನ್) ಸಾಧಾರಣ ಪ್ರದರ್ಶನ ನೀಡಿದರು. ಆದರೆ, ಕುಶಾಲ್ ಪೆರೇರಾ (53 ರನ್) ಅರ್ಧಶತಕ ಗಳಿಸಿದರು. ಇನ್ನುಳಿದಂತೆ, ಕಮಿಂದು ಮೆಂಡಿಸ್ (26 ರನ್), ಚರಿತ್ ಅಸಲಂಕ (14 ರನ್), ದಸುನ್ ಶನಕ (0), ವನಿದು ಹಸರಂಗ (0), ರಮೇಶ್ ಮೆಂಡಿಸ್ (12 ರನ್), ಮಹಿಷ್ ತೀಕ್ಷಣ (2) ಹೆಚ್ಚು ರನ್ ಗಳಿಸದೆ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.