ETV Bharat / state

ಜನಾರ್ದನ ರೆಡ್ಡಿ ಚಪಲಕ್ಕೆ ಮಾತನಾಡುತ್ತಾರೆ, ನನ್ನ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ: ಡಿಸಿಎಂ ಡಿಕೆಶಿ - DCM D K SHIVAKUMAR

ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಿಕೊಳ್ಳಲು ಡಿ.ಕೆ.ಶಿವಕುಮಾರ್​ ಸಂಪರ್ಕ ಮಾಡಿದ್ದಾರೆ ಎಂಬ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ಡಿಕೆಶಿ ಗರಂ ಆಗಿದ್ದಾರೆ.

d k shivakumar
ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : Jan 24, 2025, 6:38 PM IST

ಬೆಂಗಳೂರು: ''ಜನಾರ್ದನ ರೆಡ್ಡಿ ಅವರು ಚಪಲಕ್ಕೆ ಮಾತನಾಡುತ್ತಾರೆ. ನನ್ನ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಶ್ರೀರಾಮುಲು ಅವರನ್ನು ಡಿಕೆಶಿ ಸಂಪರ್ಕ ಮಾಡಿದ್ದಾರೆ ಎಂಬ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ''ಅವರು ಚಪಲಕ್ಕೆ ಮಾತಾಡ್ತಾರೆ. ಅವರು ಪಾರ್ಟಿಯಲ್ಲೇ ಇರಲಿಲ್ಲ. ಈಗ ಪಾರ್ಟಿಗೆ ಕಾಲಿಟ್ಟು, ಮನೆ ಒಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಯಾಕೆ ಅವರನ್ನು ದೊಡ್ಡವನನ್ನಾಗಿ ಮಾಡಲಿ?. ಅವರು ನನ್ನ ಹೆಸರು ತಗೊಂಡರೆ ನಾನು ದೊಡ್ಡವನಾಗುತ್ತೇನಾ'' ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ (ETV Bharat)

2023ರಲ್ಲಿ ಪಕ್ಷಕ್ಕೆ ಆಹ್ವಾನಿಸಿದ್ದೆ: ''ಅವರು ಯಾರ ಸಂಪರ್ಕದಲ್ಲಿದ್ದರು ಅಂತ ಚರ್ಚೆ ಬೇಡ. ನನ್ನ ಹೆಸರು ಮಿಸ್​​ಯೂಸ್ ಮಾಡಿಕೊಳ್ಳುತ್ತಿದ್ದಾರೆ. ನನಗೆ ರಾಮುಲು ಸಿಕ್ಕಿಲ್ಲ, ಮಾತಾಡಿಲ್ಲ. 2023ರ ಚುನಾವಣೆಗೂ ಮೊದಲು ಮಾತನಾಡಿದ್ದೆ. ಆಗ ಇಲ್ಲ, ಬಿಜೆಪಿ ಪಕ್ಷದಲ್ಲೇ ಉಳಿಯುತ್ತೇನೆ ಅಂತ ಹೇಳಿದ್ದರು. ಈಗ ರಾಮುಲು ಅವರ ಪಕ್ಷ ಸೇರ್ಪಡೆ ವಿಚಾರ ನನ್ನ ಟೇಬಲ್ ಮುಂದೆ ಬಂದರೆ, ಆಮೇಲೆ ತೀರ್ಮಾನ ಮಾಡುತ್ತೇನೆ'' ಎಂದು ತಿಳಿಸಿದರು.

ಇದನ್ನೂ ಓದಿ: ಜೆಪಿ ನಡ್ಡಾ ಕರೆ ಮಾಡಿದ್ದರು, ಅವರಿಗೆ ಎಲ್ಲ ಮಾಹಿತಿ ನೀಡಿದ್ದೇನೆ : ಬಿ ಶ್ರೀರಾಮುಲು

ಮೈಕ್ರೋ ಫೈನಾನ್ಸ್ ವಿರುದ್ಧ ಕಿರುಕುಳ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಸಿಎಂ ಮತ್ತು ನಮ್ಮ ಕಂದಾಯ ಸಚಿವರು, ಕಾನೂನು ಸಚಿವರು, ಗೃಹ ಸಚಿವರು ಚರ್ಚೆ ಮಾಡುತ್ತಿದ್ದಾರೆ. ಅದರ ಬಗ್ಗೆ ಕಾನೂನು ಪ್ರಕಾರ ಎಲ್ಲ ಅಂಶಗಳ ಬಗ್ಗೆ ಚರ್ಚಿಸಿ, ಒಂದು ತೀರ್ಮಾನಕ್ಕೆ ಬರಲಿದ್ದೇವೆ'' ಎಂದರು.

ಇದನ್ನೂ ಓದಿ: ಶ್ರೀರಾಮುಲು ವಿರುದ್ಧ ಛಾಡಿ ಹೇಳಿಲ್ಲ, ಅವರು ಶತ್ರುಗಳ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ: ಜನಾರ್ದನ ರೆಡ್ಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.