ETV Bharat / technology

ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕ್ಯೂ ನ್ಯೂ ಸ್ಮಾರ್ಟ್​ಫೋನ್​: ಇದರ ಹೆಸರೇನು ಗೊತ್ತಾ? - IQOO NEO 10R

iQOO Neo 10R India Launch Confirmed: ಐಕ್ಯೂ ತನ್ನ ಮುಂಬರುವ ಸ್ಮಾರ್ಟ್​ಫೋನ್​ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಬಗ್ಗೆ ಐಕ್ಯೂ ಕಂಪನಿ ಸಿಇಒ ಏನ್​ ಹೇಳಿದ್ದಾರೆ ಎಂಬುದು ತಿಳಿದುಕೊಳ್ಳೋಣ.

IQOO NEO 10R INDIA LAUNCH CONFIRMED  IQOO NEO 10R INDIA LAUNCH  IQOO NEO 10R LAUNCH DATE IN INDIA  IQOO NEO 10R SPECIFIFCATIONS
ಐಕ್ಯೂ ನ್ಯೂ ಸ್ಮಾರ್ಟ್​ಫೋನ್ (Photo Credit- iQOO)
author img

By ETV Bharat Tech Team

Published : Jan 24, 2025, 6:51 PM IST

iQOO Neo 10R India Launch Confirmed: ವಿವೋ ಸಬ್ ಬ್ರಾಂಡ್ ಕಂಪನಿ ಆದ ಐಕ್ಯೂನಿಂದ ಹೊಸ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಕಂಪನಿಯು ಇದನ್ನು 'ಐಕ್ಯೂ ನಿಯೋ 10ಆರ್' ಹೆಸರಿನಲ್ಲಿ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯ ಸಿಇಒ ಖಚಿತಪಡಿಸಿದ್ದಾರೆ.

ಐಕ್ಯೂ ನ್ಯೂ ಸ್ಮಾರ್ಟ್​ಫೋನ್: ತಮ್ಮ ಹೊಸ ಸ್ಮಾರ್ಟ್​ಫೋನ್​ ಬಿಡುಗಡೆ ಬಗ್ಗೆ ಐಕ್ಯೂ ಸಿಇಒ ನಿಪುನ್ ಮರಿಯಾ ಶುಕ್ರವಾರ ಮಧ್ಯಾಹ್ನ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ, 2025ರ ಮೊದಲ ಅದ್ಭುತ ಐಕ್ಯೂ ಫೋನ್‌ಗೆ ನೀವು ಸಿದ್ಧರಿದ್ದೀರಾ?, ಆದರೆ ಇದನ್ನು ಓದಿ - ಈ ಟ್ವೀಟ್‌ಗೆ ಅದು ಸರಿಯಾಗಿರಬಹುದು ಎಂದು ಅವರು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಸಿಇಒ ಪೋಸ್ಟ್ ಮಾಡಿದ ಈ ನಿಗೂಢ ಟ್ವೀಟ್‌ನಲ್ಲಿರುವ ಆರ್ ಅಕ್ಷರಗಳನ್ನು ದಪ್ಪಕ್ಷರಗಳಲ್ಲಿ ಹೈಲೈಟ್ ಮಾಡಲಾಗಿದೆ. ಐಕ್ಯೂನ ಸಿಇಒ ಪೋಸ್ಟ್ ಮಾಡಿದ ಈ ಟ್ವೀಟ್ ಪ್ರಕಾರ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ 'iQoo Neo 10R' ಅನ್ನು ಬಿಡುಗಡೆ ಮಾಡಲಿದೆ ಎಂದು ತೋರುತ್ತದೆ.

ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ವಿಶೇಷತೆಗಳು: ಈ ಫೋನ್ 1.5K AMOLED ಡಿಸ್​ಪ್ಲೇಯನ್ನು ಹೊಂದಿರಬಹುದು. ಇದರ ರಿಫ್ರೆಶ್ ರೇಟ್​ 144Hz ಆಗಿರಬಹುದು. ಈ ಫೋನಿನ ಹೆಚ್ಚಿನ ರೆಸಲ್ಯೂಶನ್ ಡಿಸ್​ಪ್ಲೇ ಬಳಕೆದಾರರಿಗೆ ಉತ್ತಮ 4K ವಿಡಿಯೋ ವೀಕ್ಷಣೆ ಅನುಭವ ಒದಗಿಸುತ್ತದೆ. ಇದಲ್ಲದೇ ಈ ಫೋನ್‌ನಲ್ಲಿ 60fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಸಹ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ 6400mAh ಬ್ಯಾಟರಿಯೊಂದಿಗೆ ಬರಲಿದೆ ಎಂಬ ಮಾಹಿತಿಗಳು ಹೊರ ಬಿದ್ದಿವೆ.

ಈ ಫೋನ್ ಬಗ್ಗೆ ಸದ್ಯಕ್ಕೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ಈ ಸ್ಮಾರ್ಟ್‌ಫೋನ್ ಕೆಲವು ವಾರಗಳಲ್ಲಿ ಬಿಡುಗಡೆಯಾಗಬಹುದಾಗಿದೆ. ಕಂಪನಿಯು ಶೀಘ್ರದಲ್ಲೇ ಈ ಮುಂಬರುವ ತಮ್ಮ ಹೊಸ ಫೋನ್‌ನ ವಿವರಗಳನ್ನು ಹಂಚಿಕೊಳ್ಳಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ.

ಬೆಲೆ: ಕಂಪನಿಯು ಈ 'ಐಕ್ಯೂ ನಿಯೋ 10ಆರ್​' ಸ್ಮಾರ್ಟ್‌ಫೋನ್ 30 ಸಾವಿರ ರೂ. ರೇಂಜ್​ನಲ್ಲಿ ಬಿಡುಗಡೆ ಮಾಡಬಹುದು. iQoo Neo ಶ್ರೇಣಿಯಲ್ಲಿನ ಮೊದಲ ಫೋನ್ 2022 ರಲ್ಲಿ ಬಿಡುಗಡೆಯಾಗಿರುವುದು ಗಮನಾರ್ಹ. ಅಂದಿನಿಂದ ಕಂಪನಿಯು ಈ ಶ್ರೇಣಿಯಲ್ಲಿ ಪ್ರಮುಖ ಕಾರ್ಯಕ್ಷಮತೆಯನ್ನು ಹೊಂದಿರುವ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಈ ಇತ್ತೀಚಿನ ಸ್ಮಾರ್ಟ್​ಫೋನ್ ಮೂಲಕ ಬಳಕೆದಾರರು ಗೇಮಿಂಗ್ ಅನುಭವವನ್ನು ಸುಧಾರಿಸುವ ಗುರಿಯನ್ನು ಕಂಪನಿ ಹೊಂದಿದೆ.

ಓದಿ: ಟ್ರಾಯ್​ ಆದೇಶಕ್ಕೆ ತಲೆಬಾಗಿದ ಟೆಲಿಕಾಂ ಕಂಪನಿಗಳು: ಕೇವಲ ವಾಯ್ಸ್​ ಕಾಲ್​ - ಎಸ್​ಎಮ್​ಎಸ್​ ಪ್ಲಾನ್​ ಘೋಷಿಸಿದ ಜಿಯೋ, ಏರ್​ಟೆಲ್​, ವಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.