ಸಾಕ್ರಮೆಂಟೊ (ಅಮೆರಿಕ): ಭೀಕರ ಬೆಂಕಿ ಅನಾಹುತಕ್ಕೆ ತುತ್ತಾಗಿದ್ದ ಲಾಸ್ ಏಂಜಲೀಸ್ ಪ್ರದೇಶದ ಚೇತರಿಕೆಗಾಗಿ 2.5 ಬಿಲಿಯನ್ ನೀಡಲು ಕ್ಯಾಲಿಫೋರ್ನಿಯಾ ಸರ್ಕಾರ ಮುಂದಾಗಿದೆ. ಈ ಕುರಿತು ಪರಿಹಾರ ಪ್ಯಾಕೇಜ್ಗೆ ಗುರುವಾರ ಡೆಮಾಕ್ರಟಿಕ್ ಗವರ್ನರ್ ಗವಿನ್ ನ್ಯೂಸಮ್ ಸಹಿ ಹಾಕಿದ್ದಾರೆ.
ರಾಜ್ಯ ಶಾಸಕಾಂಗದ ಅನುಮತಿ ಬಳಿಕ ನ್ಯೂಸಮ್ ಈ ಕಾನೂನಿಗೆ ಸಹಿ ಹಾಕಿದರು. ಈ 2.5ಬಿಲಿಯನ್ ಡಾಲರ್ ಪರಿಹಾರದಲ್ಲಿ ರಾಜ್ಯ ವಿಪತ್ತು ನಿರ್ವಹಣೆಯ ಪ್ರಕ್ರಿಯೆಯ ಪ್ರಯತ್ನವಾದ ಸ್ಥಳಾಂತರ, ಬದುಕುಳಿದವರಿಗೆ ಆಶ್ರಯ ಮತ್ತು ಅಪಾಯಕಾರಿ ತ್ಯಾಜ ನಿವಾರಣೆ ಕ್ರಮ ಕೈಗೊಳ್ಳುವ ಯತ್ನ ಮಾಡಲಿದೆ. ಮನೆಗಳ ಪುನರ್ನಿರ್ಮಾಣಕ್ಕೆ ಸ್ಥಳೀಯ ಸರ್ಕಾರ 4 ಮಿಲಿಯನ್ ಡಾಲರ್ಗೆ ಕೂಡ, ಕ್ಯಾಲಿಫೋರ್ನಿಯಾ ಶಾಸಕರು ಅನುಮತಿ ನೀಡಿದ್ದು, 1 ಮಿಲಿಯನ್ ಡಾಲರ್ಗಳನ್ನು ಮರು ನಿರ್ಮಾಣ ಕಾರ್ಯಕ್ಕೆ ನೀಡಲಾಗಿದೆ.
ಇದು ಭರವಸೆಯ ಭಾವವನ್ನು ನೀಡುವುದಾಗಿದೆ ಎಂದು ನ್ಯೂಸಮ್ ಪಸಡೆನಾದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕ್ಯಾಲಿಫೋರ್ನಿಯಾ ಬೆಂಕಿ ಅನಾಹುತದ ಹಾನಿಯ ಪರಿಶೀಲನೆ ಮಾಡುವ ನಿರ್ಧಾರಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಫೆಡರಲ್ ಅಗ್ನಿ ಅನಾಹುತ ಪರಿಹಾರ ಬರಬೇಕಾದರೆ, ಅದು ಷರತ್ತಿನೊಂದಿಗೆ ಬರಬೇಕು ಎಂದು ಅವರು ಸಲಹೆ ನೀಡಿದ್ದರು. ಮಾಜಿ ಅಧ್ಯಕ್ಷ ಬೈಡನ್ ಕೂಡ ಈ ತಿಂಗಳ ಆರಂಭದಲ್ಲಿ ವಿಪತ್ತು ಸಹಾಯಕ್ಕೆ ಅನುಮತಿ ನೀಡಿದ್ದರು.
ಕಾನೂನು ಹೋರಾಟದ ಸಿದ್ಧತೆಗಾಗಿ ವಿಶೇಷ ಅಧಿವೇಶನ ಕರೆದಿದ್ದ ನ್ಯೂಸಮ್: ಟ್ರಂಪ್ ಆಡಳಿತದ ವಿರುದ್ಧ ಕಾನೂನಾತ್ಮಕ ಹೋರಾಟದ ಸಿದ್ಧತೆಗಾಗಿ ನವೆಂಬರ್ನಲ್ಲಿ ಗ್ಯಾವಿನ್ ನ್ಯೂಸಮ್ ಶಾಸಕರ ವಿಶೇಷ ಅಧಿವೇಶನವನ್ನು ಕರೆದಿದ್ದರು. ಲಾಸ್ ಏಂಜಲೀಸ್ ಅಗ್ನಿ ಅನಾಹುತ ಹಿನ್ನಲೆ ಸರ್ಕಾರವೂ ಈ ಪರಿಹಾರ ಹಣವನ್ನು ತನ್ನ ಪ್ರಾಧಾನ್ಯತೆಯಾಗಿಸಿಕೊಂಡಿದೆ. ರಿಪಬ್ಲಿಕನ್ ರಾಜ್ಯ ಶಾಸಕರ ಒತ್ತಾಸೆಯ ಮೇಲೆ ಚೇತರಿಕೆ ನಿಧಿಗೆ ಅನುಮೋದನೆ ನೀಡಲು ವಿಶೇಷ ಅಧಿವೇಶನ ಕರೆದಿದ್ದರು. ರಾಜ್ಯ ವಿಪತ್ತನ್ನು ಎದುರಿಸುತ್ತಿರುವಾಗ ಟ್ರಂಪ್ ಅವರ ಮೇಲೆ ಗಮನ ನೀಡುವುದು ತಪ್ಪಾಗಲಿದೆ ಎಂದಿದ್ದರು.
ಪ್ರತಿಪಕ್ಷಗಳಿಂದಲೂ ಗವರ್ನರ್ ನಿರ್ಧಾರಕ್ಕೆ ಬೆಂಬಲ: ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿ ರಾಜ್ಯಕ್ಕಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುವ ಭರವಸೆ ಇದೆ. ನ್ಯೂಸಮ್ ಸ್ವಂತವಾಗಿ ಈ ಪರಿಹಾರ ಹಣವನ್ನು ನೀಡುತಿಲ್ಲ ಎಂದು ಕೆಲ್ಲೆ ಸೆಯರ್ಟೊ ಟೀಕಿಸಿದ್ದರೂ, ಈ ಮಸೂದೆಗೆ ಅವರು ಬೆಂಬಲಿಸಿದ್ದಾರೆ. ಭವಿಷ್ಯದಲ್ಲಿ ಡೆಮಾಕ್ರಟಿಕರು ರಿಪಬ್ಲಿಕನ್ನರ ಜೊತೆಗೆ ಸೇರಿ ಮತ್ತುಷ್ಟು ಉತ್ತಮವಾದ ಕೆಲಸ ಮಾಡಬೇಕು. ಈ ರೀತಿಯ ಅನಾಹುತ ಮತ್ತೆಂದು ಆಗದಂತೆ ನಾವೆಲ್ಲಾ ಯೋಜನೆ ರೂಪಿಸಬೇಕು ಎಂದರು.
ಸ್ಟೇಟ್ ಸೆನೆಟ್ ಕೂಡ 25 ಮಿಲಿಯನ್ ಡಾಲರ್ಗೆ ಅನುಮತಿ ನೀಡಿದೆ. ಜನವರಿ 7ರಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬೆಂಕಿ ದುರಂತ ಕಾಣಿಸಿಕೊಂಡಿತ್ತು. ಭಾರಿ ಅಗ್ನಿ ಅನಾಹುತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಲಾಸ್ ಏಂಜಲೀಸ್ನಲ್ಲಿ ಮತ್ತೆ ಕಾಳ್ಗಿಚ್ಚು, 50 ಸಾವಿರ ಮಂದಿ ಸ್ಥಳಾಂತರಕ್ಕೆ ಆದೇಶ
ಇದನ್ನೂ ಓದಿ: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಸುಟ್ಟು ಬೂದಿಯಾದ ಸ್ಥಳದಲ್ಲಿ ಮನೆಗಳ ಅಸ್ತಿತ್ವ ಹುಡುಕುತ್ತಿರುವ ಲಾಸ್ ಏಂಜಲೀಸ್ ಜನರು