ಹರಿದ್ವಾರ, ಉತ್ತರಾಖಂಡ: ಇಂದು ಮಹಾಶಿವರಾತ್ರಿ, ದೇಶಾದ್ಯಂತ ಶಿವನ ಆರಾಧನೆ ಭರ್ಜರಿ ಆಗಿಯೇ ನಡೆಯುತ್ತಿದೆ. ಭಕ್ತರು ಭೋಲೆನಾಥನಿಗೆ ದುಗ್ಧಾಭಿಷೇಕ ಮತ್ತು ರುದ್ರಾಭಿಷೇಕವನ್ನು ಶಿವಾಲಯಗಳಲ್ಲಿ ನಡೆಸುತ್ತಿದ್ದಾರೆ. ವಿವಿಧೆಡೆ ಶಿವಾಲಯಗಳಲ್ಲಿ ಭಂ.. ಭಂ ಭೋಲೆನಾಥ್ ಜಯಘೋಷದೊಂದಿಗೆ ಅನುರಣಿಸುತ್ತಿದೆ.
ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹ ನಡೆಯಿತು ಎಂಬುದು ಧಾರ್ಮಿಕ ನಂಬಿಕೆ. ಆದ್ದರಿಂದ ಈ ಹಬ್ಬವನ್ನು ಮಹಾಶಿವರಾತ್ರಿ ಎಂದು ಪೂಜಿಸಲಾಗುತ್ತದೆ. ಭಗವಾನ್ ಭೋಲೆನಾಥನನ್ನು ಮಹಾಶಿವರಾತ್ರಿಯಂದು ಪೂಜಿಸಲಾಗುತ್ತದೆ.
ಹರಿದ್ವಾರದ ಪ್ರಸಿದ್ಧ ಜ್ಯೋತಿಷಿ ಪಂಡಿತ್ ಮನೋಜ್ ತ್ರಿಪಾಠಿ ಈ ಬಗ್ಗೆ ಹೇಳುವುದಿಷ್ಟು: ಮಹಾಶಿವರಾತ್ರಿಯ ದಿನದಂದು ಭಗವಾನ್ ಭೋಲೆನಾಥನು ತಾಯಿ ಪಾರ್ವತಿಯ ತಪಸ್ಸಿಗೆ ಸಂತುಷ್ಟನಾಗಿ ಅವಳನ್ನು ಶಿವಲಿಂಗದ ರೂಪದಲ್ಲಿ ಸ್ವೀಕರಿಸಿದನು. ಈ ದಿನ ಶಿವ, ಪಾರ್ವತಿಯನ್ನು ತನ್ನ ಹೆಂಡತಿಯಾಗಿ ಸ್ವೀಕರಿಸುವುದಾಗಿ ಭರವಸೆ ನೀಡಿದ್ದನು. ಮೊದಲಿಗೆ ಪಾರ್ವತಿಯನ್ನು ತಪಸ್ಸಿನ ಮೂಲಕ ಪರೀಕ್ಷಿಸಿದ ಬಳಿಕ ಶಿವ ಒಪ್ಪಿಕೊಂಡ. ಹೀಗಾಗಿಯೇ ಶಿವರಾತ್ರಿಯನ್ನು ಶಿವ ಮತ್ತು ಪಾರ್ವತಿಯರ ಸಂಗಮದ ದಿನ ಎಂದು ಆಚರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಶಿವರಾತ್ರಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ:ಶಿವರಾತ್ರಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ, ಫಾಲ್ಗುಣ ಮಾಸದಲ್ಲಿ ಬರುವ ಶಿವರಾತ್ರಿ ಬಹಳವೇ ಮುಖ್ಯ. ಈ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಎಂದು ಭಗವಾನ್ ಶಿವ ಮತ್ತು ತಾಯಿ ಪಾರ್ವತಿಯ ವಿವಾಹ ನಡೆಯಿತು ಎಂಬ ಧಾರ್ಮಿಕ ನಂಬಿಕೆ ಇದೆ. ಈ ಕಾರಣಕ್ಕಾಗಿ ಈ ದಿನಾಂಕದಂದು ಮಹಾಶಿವರಾತ್ರಿಯನ್ನು ಹೆಚ್ಚು ಉತ್ಸಾಹದಿಂದ ಆಚರಿಸಲಾಗುತ್ತದೆ ಎಂದು ಜ್ಯೋತಿಷಿ ಮನೋಜ್ ತ್ರಿಪಾಠಿ ಹೇಳಿದ್ದಾರೆ.